ಭಾರತದಿಂದ ಪಬ್ ಜಿ ನಿಷೇಧಕ್ಕೆ ಚೀನಾ ತತ್ತರ: ಟೆನ್ಸೆಂಟ್ ಕಂಪನಿಗೆ 14 ಶತಕೋಟಿ ಡಾಲರ್ ನಷ್ಟ!ಭಾರತದ ಯುವಜನತೆಗೆ ಆಟದ ಹುಚ್ಚು ಹಿಡಿಸಿದ್ದ ಪಬ್ ಜಿ ಗೇಮ್ ಅನ್ನು ಭಾರತ ಸರ್ಕಾರ ನಿಷೇದ ಮಾಡಿದ ಬೆನ್ನಲ್ಲೇ ಚೀನಾದ ಟೆನ್ಸೆಂಟ್ ಕಂಪನಿಯ ಷೇರು ಭಾರೀ ಇಳಿಕೆಯಾಗಿದೆ.
ಪಾಕ್ ಗೆ ತೀವ್ರ ಮುಖಭಂಗ: ವಿಶ್ವಸಂಸ್ಥೆಯಲ್ಲಿ ಉಗ್ರರ ಪಟ್ಟಿಗೆ ಭಾರತೀಯರನ್ನು ಸೇರಿಸುವ ಯತ್ನ ವಿಫಲಉಗ್ರರನ್ನು ಪೋಷಿಸಿಕೊಂಡು ಬರುತ್ತಿರುವ ಪಾಕಿಸ್ತಾನ ಇದೀಗ ವಿಶ್ವಸಂಸ್ಥೆಯಲ್ಲಿ ಭಾರತದ ಇಬ್ಬರನ್ನು ಉಗ್ರರ ಪಟ್ಟಿಗೆ ಸೇರಿಸುವ ಹುನ್ನಾರ ನಡೆಸಿತ್ತು. ಆದರೆ ಇದಕ್ಕೆ ವಿಶ್ವಸಂಸ್ಥೆ ಸೊಪ್ಪು ಹಾಕಲಿಲ್ಲ.
ರಾಜನಾಥ ಸಿಂಗ್ ರಷ್ಯಾ ಭೇಟಿ: ಎಕೆ-47 203 ರೈಫಲ್ ಒಪ್ಪಂದ ಅಂತಿಮ, ಭಾರತದಲ್ಲೇ ಉತ್ಪಾದನೆ!ರಕ್ಷಣಾ ಸಚಿವ ರಾಜನಾಥ ಸಿಂಗ್ ರಷ್ಯಾಗೆ ಭೇಟಿ ನೀಡಿದ್ದು ಈ ವೇಳೆ ಎಕೆ-47 203 ಉತ್ಪಾದನೆ ಒಪ್ಪಂದವನ್ನು ಅಂತಿಮಗೊಳಿಸಲಾಗಿದೆ.
ಜಾಧವ್ ಪರ ವಕೀಲರನ್ನು ನೇಮಿಸಲು ಭಾರತಕ್ಕೆ ಮತ್ತೊಂದು ಅವಕಾಶ ನೀಡಿ: ಪಾಕ್ ಸರ್ಕಾರಕ್ಕೆ ಇಸ್ಲಾಮಾಬಾದ್ ಹೈಕೋರ್ಟ್ಬೇಹುಗಾರಿಕೆ ಮತ್ತು ಭಯೋತ್ಪಾದನೆಯ ಆರೋಪಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಕುಲಭೂಷಣ್ ಜಾಧವ್ ಅವರ ಪರ ವಾದಿಸಲು ವಕೀಲರನ್ನು ನೇಮಕ ಮಾಡಲು ಭಾರತಕ್ಕೆ ಮತ್ತೊಂದು ಅವಕಾಶ ನೀಡುವಂತೆ ಪಾಕಿಸ್ತಾನ ಸರ್ಕಾರಕ್ಕೆ ಗುರುವಾರ ಇಸ್ಲಾಬಾದ್ ಹೈಕೋರ್ಟ್ ನಿರ್ದೇಶನ ನೀಡಿದೆ.
ಕೈ ಕುಲುಕಲು ಮುಂದೆ ಬಂದ ರಷ್ಯಾದ ಅಧಿಕಾರಿಗೆ 'ನಮಸ್ತೆ' ಹೇಳಿ ಬದ್ಧತೆ ಮೆರೆದ ರಕ್ಷಣಾ ಸಚಿವ ರಾಜನಾಥ್ ಸಿಂಗ್!ಶಾಂಘೈ ಸಹಕಾರ ಸಂಘ(ಎಸ್ ಸಿಒ)ದ ಪ್ರಮುಖ ಸಭೆಯಲ್ಲಿ ಪಾಲ್ಗೊಳ್ಳಲು ರಷ್ಯಾದಲ್ಲಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೋವಿಡ್-19ನ ಈ ಸಮಸ್ಯೆಯ ಸಮಯದಲ್ಲಿ ಅಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಗಮನ ಸೆಳೆದಿದ್ದಾರೆ.
2021ರ ವೇಳೆಗೆ 4.7 ಕೋಟಿ ಮಹಿಳೆಯರನ್ನು ಬಡತನ ರೇಖೆಯಿಂದ ಕಡುಬಡತನ ರೇಖೆಗೆ ತಳ್ಳುತ್ತದೆ ಕೊರೊನಾ ಸಾಂಕ್ರಾಮಿಕ: ವಿಶ್ವಸಂಸ್ಥೆ ಆತಂಕಜಗತ್ತಿನ 213ರಾಷ್ಟ್ರಗಳಲ್ಲಿ ಮರಣ ಮೃದಂಗ ಭಾರಿಸುತ್ತಾ, ಇಡೀ ಅರ್ಥವ್ಯವಸ್ಥೆಯನ್ನೇ ಬುಡಮೇಲು ಮಾಡಿರುವ ಮಾರಕ ಕೊರೋನಾ ವೈರಸ್ ದಾಳಿಗೆ 2021ರ ವೇಳೆ ಜಗತ್ತಿನ ಸುಮಾರು 4.7 ಕೋಟಿ ಮಹಿಳೆಯರು ಬಡತನ ರೇಖೆಯಿಂದ ಕಡುಬಡತನ ರೇಖೆಗೆ ತಳ್ಳಲ್ಪಡುತ್ತಾರೆ ಎಂದು ವಿಶ್ವಸಂಸ್ಥೆ ಆತಂಕ ವ್ಯಕ್ತಪಡಿಸಿದೆ.
2 ಭಾರತೀಯರನ್ನು ಉಗ್ರರೆಂದು ಗುರುತಿಸುವ ಪ್ರಯತ್ನ ವಿಫಲ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಪಾಕಿಸ್ತಾನಕ್ಕೆ ತೀವ್ರ ಮುಖಭಂಗಅಂತಾರಾಷ್ಟ್ರೀಯವಾಗಿ ಭಾರತದ ಮಾನ ಹರಾಜು ಹಾಕಬೇಕು ಎಂದು ಹವಣಿಸುತ್ತಿರುವ ಪಾಕಿಸ್ತಾನಕ್ಕೆ ತನ್ನದೇ ಬಾಣ ತಿರುಗುಬಾಣವಾಗಿದ್ದು, ಇಬ್ಬರು ಭಾರತೀಯರನ್ನು ಉಗ್ರರೆಂದು ಗುರುತಿಸುವ ಅದರ ಸತತ ಪ್ರಯತ್ನ ವಿಫಲವಾಗಿದೆ. ಆ ಮೂಲಕ ಮತ್ತೊಮ್ಮೆ ಪಾಕಿಸ್ತಾನಕ್ಕೆ ಜಾಗತಿಕ ಮಟ್ಟದಲ್ಲಿ ತೀವ್ರ ಮುಖಭಂಗವಾಗಿದೆ.
ಉದ್ಧಟತನ ನಿಲ್ಲಿಸಿ, ಇಲ್ಲ 62ರ ಯುದ್ಧಕ್ಕಿಂತ ಹೆಚ್ಚು ಹಾನಿಯಾಗುತ್ತದೆ: ಭಾರತಕ್ಕೆ ಚೀನಾ ಎಚ್ಚರಿಕೆಎಲ್ ಎಸಿಯಲ್ಲಿನ ಭಾರತೀಯ ಸೈನಿಕರು ಉದ್ಧಟತನವನ್ನು ನಿಲ್ಲಿಸದೇ ಇದ್ದರೆ ಮುಂದಾಗುವ ಪರಿಣಾಮಗಳನ್ನು ಭಾರತ ಎದುರಿಸಬೇಕಾಗುತ್ತದೆ ಎಂದು ಚೀನಾ ಸರ್ಕಾರದ ಮುಖವಾಣಿ ಗ್ಲೋಬಲ್ ಟೈಮ್ಸ್ ಹೇಳಿದೆ.
ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಬದಲಾವಣೆಗೆ ಆಗ್ರಹಿಸಿ ಭಾರತ ಸೇರಿದಂತೆ ಜಿ-4 ರಾಷ್ಟ್ರಗಳ ಪತ್ರ!ಜಾಗತಿಕವಾಗಿ ಪ್ರಾಬಲ್ಯ ಮೆರೆಯಲು ಇನ್ನಿಲ್ಲದ ಪ್ರಯತ್ನ ಮಾಡತ್ತಿರುವ ಚೀನಾವನ್ನು ನಿಯಂತ್ರಿಸುವ ಭಾರತ ಸೇರಿದಂತೆ ಜಿ-4 ರಾಷ್ಟ್ರಗಳ ವಿಶ್ವಸಂಸ್ಥೆಗೆ ಪತ್ರ ಬರೆದಿದ್ದು, ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಬದಲಾವಣೆಗೆ ಆಗ್ರಹಿಸಿವೆ.
ಪ್ರಣಬ್ ಮುಖರ್ಜಿ ಸಮರ್ಪಿತ ಸಾರ್ವಜನಿಕ ಸೇವಕರಾಗಿದ್ದರು: ಜೋ ಬಿಡೆನ್ಭಾರತದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸಮರ್ಪಿತ ಸಾರ್ವಜನಿಕ ಸೇವಕರಾಗಿದ್ದರು ಎಂದು ಅಮೆರಿಕದ ಮಾಜಿ ಉಪಾಧ್ಯಕ್ಷ ಜೋ ಬಿಡೆನ್ ಹೇಳಿದ್ದಾರೆ.
ಕೊರೋನಾ ವೈರಸ್: ಮಾಸ್ಕ್ ಬದಲಿಗೆ ಫೇಸ್ ಶೀಲ್ಡ್ ಬಳಸಬಹುದೇ..? ಮಾಸ್ಕ್ ಗಿಂತ ಫೇಸ್ ಶೀಲ್ಡ್ ಎಷ್ಟು ಸುರಕ್ಷಿತ?ಮಾರಕ ಕೊರೋನಾ ವೈರಸ್ ಸೋಂಕಿನಿಂದ ರಕ್ಷಣೆಗಾಗಿ ಮಾಸ್ಕ್ ಮತ್ತು ಫೇಸ್ ಶೀಲ್ಡ್ ಗಳನ್ನು ಬಳಕೆ ಮಾಡಲಾಗುತ್ತಿದೆ. ಆದರೆ ಕೆಲವರು ಮಾಸ್ಕ್ ಬದಲಿಗೆ ಫೇಸ್ ಶೀಲ್ಡ್ ಬಳಸಬಹುದೇ..? ಮಾಸ್ಕ್ ಗಿಂತ ಫೇಸ್ ಶೀಲ್ಡ್ ಎಷ್ಟು ಸುರಕ್ಷಿತ? ಎಂಬ ಪ್ರಶ್ನೆ ಕೇಳುತ್ತಿದ್ದಾರೆ. ಈ ಪ್ರಶ್ನೆಗೆ ತಜ್ಞರು ಉತ್ತರ ನೀಡಿದ್ದಾರೆ.
ಪ್ರಣವ್ ಮುಖರ್ಜಿ ನಿಧನದಿಂದ ಇಂಡಿಯಾ- ಚೀನಾ ಸ್ನೇಹಕ್ಕೆ ಅಪಾರ ನಷ್ಟ- ಚೀನಾದಕ್ಷ ರಾಜಕೀಯ ಮುತ್ಸದ್ದಿಯಾಗಿದ್ದ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರ ನಿಧನದಿಂದ ಇಂಡಿಯಾ- ಚೀನಾ ಸ್ನೇಹತ್ವಕ್ಕೆ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ ಎಂದು ಚೀನಾ ಹೇಳಿದೆ.
ಚೀನಾಗೆ ತಿರುಗೇಟು ನೀಡಲು ಭಾರತ, ಆಸ್ಟ್ರೇಲಿಯಾ, ಜಪಾನ್ ಜೊತೆ ನ್ಯಾಟೋ ತರಹದ ಮೈತ್ರಿಗೆ ಅಮೆರಿಕಾ ಸ್ಕೆಚ್!ಭಾರತ, ಆಸ್ಟ್ರೇಲಿಯಾ ಮತ್ತು ಜಪಾನ್ ನಂತಹ ಇಂಡಿಯಾ ಫೆಸಿಪಿಕ್ ವಲಯದ ರಾಷ್ಟ್ರಗಳೊಂದಿಗೆ ನ್ಯಾಟೋ ತರಹದ ರಕ್ಷಣಾ ಒಪ್ಪಂದ ಮಾಡಿಕೊಳ್ಳುವ ಮೂಲಕ ಚೀನಾ ಪ್ರಾಬಲ್ಯಕ್ಕೆ ಅಂಕುಶ ಹಾಕುವ ನಿಟ್ಟಿನಲ್ಲಿ ಅಮೆರಿಕಾ ಗುರಿ ಹೊಂದಿರುವುದಾಗಿ ಅಮೆರಿಕಾ ರಾಜ್ಯ ಉಪ ಕಾರ್ಯದರ್ಶಿ ಸ್ಟೀಫನ್ ಬೀಗನ್ ಹೇಳಿದ್ದಾರೆ.
ಬಾಂಗ್ಲಾದೇಶದಲ್ಲಿ ಪ್ರವಾಹ: ಸಾವಿನ ಸಂಖ್ಯೆ 251 ಕ್ಕೆ ಏರಿಕೆಭಾರೀ ಮಳೆಯಿಂದ ಉಂಟಾಗಿರುವ ಪ್ರವಾಹಗಳಿಂದಾಗಿ ಬಾಂಗ್ಲಾದೇಶದ ಕೆಲ ಭಾಗಗಳಲ್ಲಿ ಒಟ್ಟು 251 ಜನರು ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಸರ್ಕಾರದ ವರದಿಯಲ್ಲಿ ತಿಳಿಸಲಾಗಿದೆ.
ಗಲ್ವಾನ್ ಗಲಭೆ ನಂತರ ಸದ್ದಿಲ್ಲದೇ ದಕ್ಷಿಣ ಚೀನಾ ಸಮುದ್ರದಲ್ಲಿ ಯುದ್ಧ ನೌಕೆ ನಿಯೋಜಿಸಿದ ಭಾರತ!ಇತ್ತ ಗಲ್ವಾನ್ ಗಲಭೆ ನಡೆದಿದ್ದರ ಬೆನ್ನಲ್ಲೇ ಭಾರತ ದಕ್ಷಿಣ ಚೀನಾ ಸಮುದ್ರದಲ್ಲಿ ಸದ್ದಿಲ್ಲದೇ ತನ್ನ ಯುದ್ಧ ನೌಕೆ ನಿಯೋಜನೆ ಮಾಡಿದೆ.
ಕ್ರಿಕೆಟ್Asia Cup Rising Stars 2026: 50 ಓವರ್ ಪಂದ್ಯ, 14 ಓವರ್`ನಲ್ಲೇ ಮುಗಿಸಿದ ವೈಭವ್ ಸೂರ್ಯವಂಶಿ; ವಿಶ್ವದಾಖಲೆ!
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video