ಪಾಕಿಸ್ತಾನದ ಕ್ವೆಟ್ಟಾದಲ್ಲಿ ಭೀಕರ ಬಾಂಬ್ ಸ್ಫೋಟ, ಕನಿಷ್ಛ 15 ಸಾವು, 20 ಮಂದಿಗೆ ಗಾಯಪಾಕಿಸ್ತಾನದ ಕ್ವೆಟ್ಟಾದಲ್ಲಿ ಭೀಕರ ಬಾಂಬ್ ಸ್ಫೋಟಗೊಂಡಿದ್ದು, ಘಟನೆಯಲ್ಲಿ ಕನಿಷ್ಟ 15 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಉಕ್ರೇನ್ ವಿಮಾನ ಹೊಡೆದುರುಳಿಸಿದ್ದು ಕ್ಷಮಿಸಲಾಗದ ತಪ್ಪು: ಇರಾನ್ ಅಧ್ಯಕ್ಷತಪ್ಪಾಗಿ ಗ್ರಹಿಸಿ ಉಕ್ರೇನ್ ವಿಮಾನವನ್ನು ಹೊಡೆದುರುಳಿಸಿದ್ದು, ಕ್ಷಮಿಸಲಾಗದ ತಪ್ಪಾಗಿದ್ದು, ಪ್ರಮಾದಕ್ಕೆ ತೀವ್ರ ವಿಷಾದ ವ್ಯಕ್ತಪಡಿಸುತ್ತೇವೆಂದು ಇರಾನ್ ಅಧ್ಯಕ್ಷ ಹಸನ್ ರೊಹಾನಿ ಹೇಳಿದ್ದಾರೆ.
ನಾಲ್ಕು ದಶಕಗಳ ಕಾಲ ಆಡಳಿತ ನಡೆಸಿದ ಸುಲ್ತಾನ್ ದೊರೆ ಖಬೂಸ್ ವಿಧಿವಶ1970 ರಿಂದ ದೇಶದ ಮುಖ್ಯಸ್ಥರಾಗಿದ್ದ ಒಮಾನ್ ಕಬೂಸ್ ಬಿನ್ ಸೈದ್ ಅಲ್ ಸೈದ್ ಸುಲ್ತಾನ್ ಶುಕ್ರವಾರ ತಡರಾತ್ರಿ ನಿಧನ ಹೊಂದಿದರು ಅವರಿಗೆ ತಮ್ಮ 79 ವರ್ಷ ವಯಸ್ಸಾಗಿತ್ತು.
ಉಕ್ರೇನ್ ವಿಮಾನವನ್ನು ನಾವೇ ಉರುಳಿಸಿದ್ದು, ಆದರೆ ಉದ್ದೇಶಪೂರ್ವಕವಲ್ಲ- ಇರಾನ್ ತಪ್ಪೊಪ್ಪಿಗೆವಿಶ್ವದಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಉಕ್ರೇನ್ ವಿಮಾನ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಇರಾನ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ತಪ್ಪು ಗ್ರಹಿಕೆಯಿಂದಾಗಿ ವಿಮಾನ ಹೊಡೆದುರುಳಿಸಲಾಗಿತ್ತು ಎಂದು ಶನಿವಾರ ಹೇಳಿದೆ.
ಆಸ್ಟ್ರೇಲಿಯಾವನ್ನು ಬೆಂಬಿಡೆದೆ ಕಾಡುತ್ತಿರುವ ಅರಣ್ಯ ಕಾಡ್ಗಿಚ್ಚುಆಸ್ಟ್ರೇಲಿಯಾದ ಅತ್ಯಂತ ಜನಭರಿತ ಆಗ್ನೇಯ ಭಾಗದತ್ತ ಬಿಸಿ ಗಾಳಿ ಮತ್ತೆ ಬೀಸಿದ್ದು, ಭಾರೀ ಪ್ರಮಾಣದ ಕಾಡ್ಗಿಚ್ಚುಗಳು ಹೊತ್ತಿಕೊಂಡು ಆತಂಕದ ಸನ್ನಿವೇಶ ನಿರ್ಮಾಣವಾಗಿದೆ.
ಪಾಕಿಸ್ತಾನ ಯಾರೊಬ್ಬರ ಯುದ್ಧದ ಭಾಗವಾಗುವುದಿಲ್ಲ: ಅಮೆರಿಕ-ಇರಾನ್ ಬಿಕ್ಕಟ್ಟು ಕುರಿತು ಇಮ್ರಾನ್ ಪ್ರತಿಕ್ರಿಯೆಅಮೆರಿಕ ಮತ್ತು ಇರಾನ್ ನಡುವಿನ ಬಿಕ್ಕಟ್ಟು ಪರಿಹಾರಕ್ಕೆ ಮಧ್ಯಸ್ಥಿಕೆ ವಹಿಸುವುದಾಗಿ ಹೇಳಿರುವ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್, ಪಾಕಿಸ್ತಾನ ಯಾರೊಬ್ಬರ ಯುದ್ಧದ ಭಾಗವಾಗದೆ ಎರಡೂ ದೇಶಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಪ್ರಯತ್ನಿಸುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ.
'ನಿಮ್ಮ ತಪ್ಪುಗಳಿಗೆ ನಮ್ಮನ್ನು ಹೊಣೆಯಾಗಿಸಬೇಡಿ': ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನವನ್ನು ತರಾಟೆ ತೆಗೆದುಕೊಂಡ ಭಾರತತನ್ನ ತಪ್ಪುಗಳನ್ನು ಮುಚ್ಚಿಕೊಳ್ಳಲು ಭಾರತದ ಮೇಲೆ ಸುಳ್ಳು ಆಪಾದನೆ ಹೊರಿಸುವುದನ್ನು ಪಾಕಿಸ್ತಾನ ನಿಲ್ಲಿಸಬೇಕು ಎಂದು ಭಾರತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ತರಾಟೆಗೆ ತೆಗೆದುಕೊಂಡಿದೆ. ಮಾಟ, ಮಂತ್ರದಂತಹ ಬ್ಲಾಕ್ ಮ್ಯಾಜಿಕ್ ನಂತಹ ಕೆಲಸಗಳಿಗೆ ಪಾಕಿಸ್ತಾನ ಉತ್ತಮ ಉದಾಹರಣೆ ಎಂದು ಕೂಡ ಹೇಳಿದೆ.
ಉಕ್ರೇನ್ ವಿಮಾನವನ್ನು ಇರಾನ್ ಆಕಸ್ಮಿಕವಾಗಿ ಹೊಡೆದುರುಳಿಸಿದೆ: ಅಮೆರಿಕಾ ಅಧಿಕಾರಿಗಳುಕಳೆದ ಮಂಗಳವಾರ ಉಕ್ರೇನ್ ನ ವಿಮಾನ ಭೀಕರ ಅಪಘಾತಕ್ಕೀಡಾಗಿ ಎಲ್ಲಾ 176 ಪ್ರಯಾಣಿಕರು ಮೃತಪಟ್ಟಿದ್ದು ಇರಾನ್ ನ ಕ್ಷಿಪಣಿ ದಾಳಿಯಿಂದ ಎಂದು ಅಮೆರಿಕಾದ ಅಧಿಕಾರಿಗಳು ತಿಳಿಸಿದ್ದಾರೆ.
ಉಕ್ರೇನ್ ವಿಮಾನ ದುರಂತ; ತನಿಖೆಗೆ ಸಹಾಯ ಮಾಡಲು ಐಎಸ್ಎಒ ಸಿದ್ಧನಿನ್ನೆ ಅಪಘಾತಕ್ಕೀಡಾದ ಉಕ್ರೇನ್ ಇಂಟರ್ ನ್ಯಾಷನಲ್ ಏರ್ಲೈನ್ಸ್ ಫ್ಲೈಟ್ 752ನ ತನಿಖೆಗೆ ಸಹಾಯ ಮಾಡಲು ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ (ಐಸಿಎಒ) ಸಿದ್ಧವಾಗಿದೆ ಎಂದು ವಿಶ್ವಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಇರಾನ್-ಅಮೆರಿಕ ಸಂಘರ್ಷ: ಇರಾಕ್ ಮೇಲೆ ಮತ್ತೆ ರಾಕೆಟ್ ದಾಳಿಇರಾಕ್ ನಲ್ಲಿರುವ ಅಮೆರಿಕ ಸೇನಾ ಕ್ಯಾಂಪ್ ಗಳ ಮೇಲೆ ಇರಾನ್ ಸೇನೆ ರಾಕೆಟ್ ದಾಳಿ ನಡೆಸಿದ ಕೇವಲ 24 ಗಂಟೆಗಳ ಒಳಗೆ ಮತ್ತೊಂದು ಕ್ಷಿಪಣಿ ದಾಳಿ ವರದಿಯಾಗಿದ್ದು, ರಾಜಧಾನಿ ಬಾಗ್ದಾದ್ನ ಸುರಕ್ಷಿತ ಪ್ರದೇಶವಾದ ಹಸಿರು ವಲಯದಲ್ಲಿ ಎರಡು ರಾಕೆಟ್ಗಳನ್ನು ಹಾರಿಸಲಾಗಿದೆ.
ಜಾಗತಿಕ ಭಯೋತ್ಪಾದನೆ ಹೆಚ್ಚಾಗಲು ಇರಾನ್ ಕಾರಣ, ಅದರ ವಿರುದ್ಧ ಇಡೀ ವಿಶ್ವ ಒಂದಾಗಬೇಕಿದೆ: ಡೊನಾಲ್ಡ್ ಟ್ರಂಪ್ಜಾಗತಿಕ ಭಯೋತ್ಪಾದನೆ ಹೆಚ್ಚಾಗಲು ಇರಾನ್ ಕಾರಣ ಎಂದು ಆರೋಪಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಇಡೀ ವಿಶ್ವ ಇರಾನ್ ವಿರುದ್ಧ ಒಂದಾಗಿ ಹೋರಾಡಬೇಕಾಗಿದೆ ಎಂದು ಬುಧವಾರ ಹೇಳಿದ್ದಾರೆ.
176 ಮಂದಿ ದುರ್ಮರಣ: ಅಪಘಾತಕ್ಕೀಡಾದ ವಿಮಾನದ ಕಪ್ಪು ಪೆಟ್ಟಿಗೆಯನ್ನು ಅಮೆರಿಕನ್ನರಿಗೆ ನೀಡುವುದಿಲ್ಲ - ಇರಾನ್ಉಕ್ರೇನ್ ಅಂತಾರಾಷ್ಟ್ರೀಯ ಏರ್ ಲೈನ್ಸ್ ಗೆ ಸೇರಿದ ಬೋಯಿಂಗ್ 737 ವಿಮಾನ ಪತನವಾಗಿ 176 ಮಂದಿ ಮೃತಪಟ್ಟಿದ್ದು ವಿಮಾನದ ಕಪ್ಪು ಪೆಟ್ಟಿಗೆಯನ್ನು ಅಮೆರಿಕನ್ನರಿಗೆ ನೀಡುವುದಿಲ್ಲ ಎಂದು ಇರಾನ್ ಹೇಳಿದೆ.
ಇಸ್ರೇಲ್ ಮೇಲೆ ದಂಡೆತ್ತಿದರೆ, ಕಂಡುಕೇಳರಿಯದ ಹೊಡೆತ ಬೀಳುತ್ತದೆ: ಇರಾನ್ ಗೆ ನೆತಾನ್ಯಹು ಎಚ್ಚರಿಕೆಇರಾನ್ ಮತ್ತು ಅಮೆರಿಕ ನಡುವಿನ ಸೇನಾ ಸಂಘರ್ಷ ತಾರಕಕ್ಕೇರಿರುವಂತೆಯೇ ಇತ್ತ ಅಮೆರಿಕ ಬೆಂಬಲಕ್ಕೆ ನಿಂತಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಹು, ಇಸ್ರೇಲ್ ಮೇಲೆ ದಂಡೆತ್ತಿದರೆ, ಕಂಡುಕೇಳರಿಯದ ಹೊಡೆತ ಬೀಳುತ್ತದೆ ಎಂದು ಇರಾನ್ ಗೆ ಎಚ್ಚರಿಕೆ ನೀಡಿದ್ದಾರೆ.
ಕ್ಷಿಪಣಿ ದಾಳಿಯಲ್ಲಿ 80 ಅಮೆರಿಕ ಉಗ್ರರ ಸಾವು, ಟ್ರಂಪ್ ಸರ್ಕಾರಕ್ಕೆ ಕಪಾಳ ಮೋಕ್ಷ; ಇರಾನ್ ಸರ್ವೋಚ್ಛ ನಾಯಕ ಖಮೇನಿಇರಾಕ್ ನಲ್ಲಿದ್ದ ಅಮೆರಿಕಾ ವಾಯುನೆಲೆ ಮೇಲೆ ನಡೆಸಿದ ಕ್ಷಿಪಣಿ ದಾಳಿಯಲ್ಲಿ 80 ಮಂದಿ ಸಾವಿಗೀಡಾಗಿದ್ದಾರೆಂದು ಇರಾನ್ ತನ್ನ ವರದಿಯಲ್ಲಿ ಹೇಳಿಕೊಂಡಿದೆ.
ನಾವು ಯುದ್ಧ ಬಯಸುವುದಿಲ್ಲ, ಆದರೆ ನಮ್ಮನ್ನು ರಕ್ಷಿಸಿಕೊಳ್ಳಲು ನೋಡುತ್ತೇವೆ: ಕ್ಷಿಪಣಿ ದಾಳಿ ಬಗ್ಗೆ ಇರಾನ್ನಾವು ಯುದ್ಧವನ್ನು ಬಯಸುವುದಿಲ್ಲ, ಆದರೆ ಆಕ್ರಮಣಶೀಲತೆಯಿಂದ ರಕ್ಷಿಸಿಕೊಳ್ಳಲು ಬಯಸುತ್ತೇವೆ, ಹೀಗಾಗಿ ಅಮೆರಿಕಾದ ವಾಯುನೆಲೆಗಳ ಮೇಲೆ ಕ್ಷಿಪಣಿ ದಾಳಿ ಆರಂಭಿಸಿದ್ದೇವೆ ಎಂದು ಇರಾನ್ ನ ವಿದೇಶಾಂಗ ಸಚಿವ ಜಾವದ್ ಜಾಫಿರ್ ಪ್ರತಿಕ್ರಿಯೆ ನೀಡಿದ್ದಾರೆ.
ರಾಜ್ಯ'ಇದು ಅವುಗಳ ಮನೆ ಕೂಡ, ದಾರಿ ನೆನಪಿರುತ್ತದೆ, ಆನೆಗಳ ಸ್ಥಳಾಂತರ ಪರಿಹಾರವಲ್ಲ': ಸರ್ಕಾರಕ್ಕೆ ನಟಿ ರಮ್ಯಾ ಹೇಳಿದ್ದೇನು?
ಕ್ರಿಕೆಟ್ಮೊಹಮ್ಮದ್ ಸಿರಾಜ್ ನನ್ನ ಆಪ್ತ ಸ್ನೇಹಿತ, ಅವರನ್ನು ತಂಡದಿಂದ ಕೈಬಿಟ್ಟಿದ್ದು ಕಠಿಣ ನಿರ್ಧಾರವಾಗಿತ್ತು: ಶುಭಮನ್ ಗಿಲ್
ರಾಜ್ಯಈ ಸರ್ಕಾರಕ್ಕಿಂತ ನನ್ನ ಜನರೇ ಮುಖ್ಯ: ಸ್ಪೀಕರ್ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಿದ Congress ಶಾಸಕಿ ನಯನಾ ಮೋಟಮ್ಮ; Video