ಸಾಂದರ್ಭಿಕ ಚಿತ್ರ 
ಭಕ್ತಿ-ಜ್ಯೋತಿಷ್ಯ

ದೀಪಾವಳಿ ಎಂದರೆ ದೀಪಗಳ ಸಾಲು, ತೈಲಾಭ್ಯಂಜನ, ಭಾವ ಬಿದಿಗೆ

ದಕ್ಷಿಣ ಭಾರತದಲ್ಲಿ ಸಾಮಾನ್ಯವಾಗಿ ಮೂರು ದಿನಗಳ ಆಚರಣೆ ನಡೆಯುತ್ತದೆ. ದಕ್ಷಿಣ ಭಾರತದಲ್ಲಿ ನರಕ ಚತುರ್ದಶಿ ಹಾಗೂ ಬಲಿ ಪಾಡ್ಯಮಿ ಪ್ರಮುಖವಾದರೆ, ಉತ್ತರ ಭಾರತದಲ್ಲಿ ಅಮಾವಾಸ್ಯೆಯಂದು ಆಚರಿಸಲಾಗುವ ಲಕ್ಷ್ಮಿ ಪೂಜೆ ಮುಖ್ಯವಾದದ್ದು.

ಲೇಖಕಿ: ಸುಜಲಾ ಘೋರ್ಪಡೆ

ದೀಪಗಳಿಂದ ದೀಪಗಳನ್ನು ಹಚ್ಚುವ ಹಬ್ಬ. ಅಜ್ಞಾನವೆಂಬ ಕತ್ತಲನ್ನು ತೊಡೆದು ಸುಜ್ಞಾನವೆಂಬ ಬೆಳಕಿನತ್ತ ಒಯ್ಯುವ ಹಬ್ಬ. ದೀಪಾವಳಿ ಹಬ್ಬವು ಒಟ್ಟು ಐದು ದಿನಗಳ ಹಬ್ಬ.  ನಮ್ಮ ಹಿಂದು ಧರ್ಮದಲ್ಲಿ ಇದಕ್ಕೆ ಬಹಳ ಮಹತ್ವವಿದೆ. ಮೊದಲನೆಯ ದಿನ ನೀರು ತುಂಬುವ ಹಬ್ಬ. ಉತ್ತರಭಾರತದಲ್ಲಿ ಇದನ್ನು ಧನ್ ತೆರೆಸ್ ಎಂದು ಆಚರಿಸುತ್ತಾರೆ. ಮರುದಿನ ನರಕ ಚತುರ್ದಶಿ, ಭಗವಾನ್ ಶ್ರೀ ಕೃಷ್ಣ ನರಕಾಸುರನನ್ನು ಸಂಹಾರಿಸಿ ಅವನ ಬಂಧನದಲ್ಲಿದ್ದ ಹದಿನಾರು ಸಾವಿರ ಕನ್ಯೆಯರನ್ನು ಬಿಡಿಸಿದ್ದನೆಂದು ಹೇಳಲಾಗಿದೆ.

ಎಣ್ಣೆ ಸ್ನಾನಕ್ಕೇ ಮಹತ್ವ

ಅಂದು ಬಹಳಷ್ಟು ಸಿಹಿ ಭಕ್ಷ್ಯಗಳನ್ನು ಮಾಡುತ್ತಾರೆ. ಸ್ನೇಹಿತರಿಗೆ ಬಂಧು ಬಾಂಧವರಿಗೆ ಕೊಟ್ಟು ಶುಭ ಕೋರುವ ಪದ್ಧತಿ ನಮ್ಮಲ್ಲಿದೆ. ಅಂದು ತೈಲಾ ಭ್ಯಂಜನಕ್ಕೇ ಬಹಳ ಮಹತ್ವವಿದೆ. ಬೆಳಗಿನ ಜಾವವೇ ಎದ್ದು ಎಣ್ಣೆ ಸ್ನಾನ ಮಾಡಿ ಪಟಾಕಿ ಸಿಡಿಸಿ ಸಂಭ್ರಮಿಸುತ್ತಾರೆ. ಸಂಜೆ ಮನೆಯ ಮುಂದೆ ದೀಪಗಳಿಂದ ಅಲಂಕರಿಸುತ್ತಾರೆ.

ಅಮವಾಸೆಯಂದು ಲಕ್ಷ್ಮಿ ಪೂಜೆ.ಮುಖ್ಯವಾದರೂ ಬಹಳಷ್ಟು ಮನೆಗಳಲ್ಲಿ ನೋಮ್ ಎಂದು ಆಚರಣೆ ಮಾಡಲಾಗುತ್ತದೆ. ನಂತರ ಬಲಿ ಪಾಡ್ಯಮಿ ಅಂದು ಕೋಟೆಗಳನ್ನು ಕಟ್ಟಿ  ಹೂವಿನಿಂದ ಬಲಿಯ ಕೋಟೆಯ ರಂಗೋಲಿ ರಚಿಸಿ ಪೂಜಿಸುತ್ತಾರೆ ಹೊಸದಾಗಿ ಮದುವೆಯಾದ ದಂಪತಿಗಳನ್ನು ತವರಿಗೆ ಕರೆಸಿಕೊಂಡು ಭೋಜನ ಮಾಡಿಸಿ ಉಡುಗೊರೆಗಳನ್ನೂ ಕೊಡುವ ಪದ್ದತಿಯು ನಮ್ಮಲ್ಲಿದೆ. ಮರುದಿನ ಭಾವ್ ಭೀಜ್, ನಮ್ಮಲ್ಲಿ ಪ್ರಚಲಿತವಿದೆ. ಭಾವ ಬಿದಿಗೆ ಎನ್ನಲಾಗುತ್ತದೆ. ಭಾಯಿ ದೂಜ್ ಎಂದು ಉತ್ತರದಲ್ಲಿ ಆಚರಿಸಲಾಗುತ್ತದೆ.. ಸೋದರಿಯರು ಅಣ್ಣ ತಮ್ಮಂದಿರನ್ನು ಮನೆಗೆ ಕರೆದು ಭೋಜನ ಮಾಡಿಸಿ ಆರತಿ ಬೆಳಗುವ ಪದ್ಧತಿಯಿದೆ.

ನರಕಾಸುರನನ್ನು ಸಂಹರಿಸಿದ ದಿನ

ವಿಕ್ರಮ ಶಕೆ ಉತ್ತರ ಭಾರತದಲ್ಲಿ ಉಪಯೋಗಿಸಲ್ಪಡುವುದರಿಂದ ಅಲ್ಲಿನವರಿಗೆ ದೀಪಾವಳಿ ಹೊಸ ವರ್ಷದ ಹಬ್ಬವಾಗಿದೆ. ಶ್ರೀ ರಾಮ ರಾವಣನನ್ನು ಗೆದ್ದು ಸೀತೆ ಮತ್ತು ಲಕ್ಷ್ಮಣರೊಂದಿಗೆ ಅಯೋಧ್ಯೆಗೆ ಮರಳಿದ ಸಮಯವೆಂದು ದೀಪಾವಳಿಯನ್ನು ಕೆಲವರು ಆಚರಿಸಿದರೇ, ಅಮಾವಾಸ್ಯೆಯ ಹಿಂದಿನ ದಿನ  ಶ್ರೀಕೃಷ್ಣ ನರಕಾಸುರನನ್ನು ಸಂಹರಿಸಿದ ದಿನ ಎಂದು ನರಕ ಚತುರ್ದಶಿ ಆಚರಿಸಲಾಗುತ್ತದೆ. 

ವಿಷ್ಣು ವಾಮನ ಅವತಾರದಲ್ಲಿ  ಬಂದು ಮಹಾದಾನಿಯದ ಬಲಿ ಚಕ್ರವರ್ತಿಯಲ್ಲಿ ಮೂರು ಹೆಜ್ಜೆ ಜಾಗವನ್ನು ಕೇಳಿದಾಗ ಒಂದು ಹೆಜ್ಜೆಯಿಂದ ಭೂಮಿ, ಮತ್ತೊಂದು ಹೆಜ್ಜೆಯಿಂದ ಆಕಾಶ,ಮೂರನೇ ಹೆಜ್ಜೆ ಎಲ್ಲಿಡುವುದೆಂದಾಗ ಬಲಿ ಚಕ್ರವರ್ತಿಯು ತನ್ನ ತಲೆಯ ಮೇಲಿರಿಸಿ. ಎನ್ನುತ್ತಾನೆ ತನ್ನ ಪಾದದಿಂದ ಬಲಿಯನ್ನು ಪಾತಾಳಕ್ಕೆ ತಳ್ಳುತ್ತಾ ಅವನ ದಾನ ಗುಣವನ್ನು,ತ್ಯಾಗವನ್ನು ಅಭಿನಂದಿಸುತ್ತಾ ಪ್ರತಿ ಪಾಡ್ಯಮಿಯ ದಿನದಂದು ಭೂಮಿಗೆ ಬಂದು ತನ್ನ ಸುಭಿಕ್ಷವಾದ ರಾಜ್ಯವನ್ನು ನೋಡಿ ಹೋಗುವಂತೆ ಅನುಗ್ರಹಿಸುತ್ತಾನೆ. ಆದ್ದರಿಂದ ಅಮಾವಾಸ್ಯೆಯ ಮರುದಿನ ಪಾಡ್ಯದಂದು ಪಾಡ್ಯಮಿಯನ್ನು ಬಲಿ ಪಾಡ್ಯಮಿ ಎಂದು ಆಚರಿಸಲಾಗುತ್ತದೆ.

ಹೊಸ ಆರ್ಥಿಕ ವರ್ಷದ ಪ್ರಾರಂಭ

ಹಿಂದೂ ಧರ್ಮದಜನರು ಪ್ರತಿ ವರ್ಷವೂ ಪ್ರಪಂಚದ ಎಲ್ಲೆಡೆ ದೀಪಾವಳಿಯನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಹೊಸ ಬಟ್ಟೆಗಳು, ಸಿಹಿ ತಿಂಡಿಗಳು ಎಲ್ಲಕ್ಕೂ ಹೆಚ್ಚಾಗಿ ಪಟಾಕಿಗಳಿಗೆ ದೀಪಾವಳಿ ಪ್ರಸಿದ್ಧ. ಉತ್ತರ ಭಾರತದಲ್ಲಿ ದೀಪಾವಳಿಯ ಸಮಯವೇ ಹೊಸ ಆರ್ಥಿಕ ವರ್ಷದ ಪ್ರಾರಂಭ ಸಹಾ ಆಗಿದೆ. ಹೊಸ ಲೆಕ್ಕದ ಪುಸ್ತಕಗಳನ್ನು ಈ ಸಮಯದಲ್ಲೇ ತೆರೆಯಲಾಗುತ್ತದೆ.ವಾಹನಗಳನ್ನೂ ಅಂದೇ ಪೂಜಿಸುವ ಪದ್ದತಿಯು ಇದೆ.

ದಕ್ಷಿಣ ಭಾರತದಲ್ಲಿ ಸಾಮಾನ್ಯವಾಗಿ ಮೂರು ದಿನಗಳ ಆಚರಣೆ ನಡೆಯುತ್ತದೆ. ದಕ್ಷಿಣ ಭಾರತದಲ್ಲಿ ನರಕ ಚತುರ್ದಶಿ ಹಾಗೂ ಬಲಿ ಪಾಡ್ಯಮಿ ಪ್ರಮುಖವಾದರೆ, ಉತ್ತರ ಭಾರತದಲ್ಲಿ ಅಮಾವಾಸ್ಯೆಯಂದು ಆಚರಿಸಲಾಗುವ ಲಕ್ಷ್ಮಿ ಪೂಜೆ ಮುಖ್ಯವಾದದ್ದು.

ಕಾರ್ತಿಕ ಮಾಸವು ಆರಂಭ ವಾಗಿರುವುದರಿಂದ ಆ ತಿಂಗಳು ಪೂರ್ತಿಯಾಗಿ ದೀಪಗಳನ್ನು ನಿತ್ಯ ತುಳಸಿ ಹಾಗೂ ಬಾಗಿಲಲ್ಲಿ ಬೆಳಗಿಸುತ್ತಾರೆ. ಒಟ್ಟಾರೆ ದೀಪಾವಳಿ ಸಂಭ್ರಮದ ಎಲ್ಲೆಡೆ ಸಂತೋಷ ಹಂಚುವ ಹಬ್ಬ. ಯಾವುದೇ ವೈಮನಸ್ಯವಿದ್ದರೂ ಎಲ್ಲವನ್ನೂ ಮರೆತು ಸ್ನೇಹದಿಂದ ಒಂದುಗೂಡಿಸುವ ದೀಪಗಳ ಹಬ್ಬ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT