ಹರಿಪ್ರಿಯಾ 
ಸಿನಿಮಾ ಸುದ್ದಿ

ಕಸ್ತೂರ್ಬಾ ಪಾತ್ರದಲ್ಲಿ ನಟಿಸಿದ ಅನುಭವ ಹಂಚಿಕೊಂಡ ನಟಿ ಹರಿಪ್ರಿಯಾ: ಬರಗೂರು ರಾಮಚಂದ್ರಪ್ಪ ಜೊತೆ ಕೆಲಸ ಮಾಡಿದ ಸಂತಸ

ಇಡೀ ಪ್ರಪಂಚಕ್ಕೆ ಗಾಂಧಿ ಯಾರು ಎಂಬುದು ಗೊತ್ತಿದೆ ಆದರೆ ಕಸ್ತೂರ್ಬಾ ಅವರ ಬಗ್ಗೆ ಹೆಚ್ಚಿನ ಮಂದಿಗೆ ಹೆಚ್ಚು ತಿಳಿದಿಲ್ಲ. ಅವರನ್ನು ಗಾಂಧಿ ಪತ್ನಿ ಎಂದಷ್ಟೇ ಗುರುತಿಸಲಾಗುತ್ತದೆ. ಆಕೆ ಎಂಥ ಶ್ರೇಷ್ಠ ಹೆಣ್ಣುಮಗಳು ಎಂಬುದನ್ನು ನಾನು ಈ ಸಿನಿಮಾ ಮಾಡುವ ಪ್ರಕ್ರಿಯೆಯಲ್ಲಿ ಕಂಡುಕೊಂಡೆ ಎನ್ನುತ್ತಾರೆ ಹರಿಪ್ರಿಯ.

ಬೆಂಗಳೂರು: ಬರಗೂರು ರಾಮಚಂದ್ರಪ್ಪ ಅವರ ನಿರ್ದೇಶನದ ಹೊಸ ಸಿನಿಮಾ 'ತಾಯಿ ಕಸ್ತೂರ್ ಗಾಂಧಿ' ಚಿತ್ರೀಕರಣ ಪೂರ್ತಿಯಾಗಿದೆ. ಆ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿರುವ ನಟಿ ಹರಿಪ್ರಿಯ ಪ್ರಶಸ್ತಿ ವಿಜೇತ ನಿರ್ದೇಶಕ ಮತ್ತು ಸಾಹಿತಿ ಬರಗೂರು ರಾಮಚಂದ್ರಪ್ಪ ಅವರ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಹರಿಪ್ರಿಯ ಅವರು ಬರಗೂರು ರಾಮಚಂದ್ರಪ್ಪ ಅವರ ಅಮೃತಮತಿ ಸಿನಿಮಾದಲ್ಲಿ ನಟಿಸಿದ್ದರು. 

ಕಸ್ತೂರ್ಬಾ ಪಾತ್ರದಲ್ಲಿ ಹರಿಪ್ರಿಯ

ಸಿನಿಮಾ ಈ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ನಟಿ ಹರಿಪ್ರಿಯ ಅವರು ಕಸ್ತೂರ್ಬಾ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಕಸ್ತೂರ್ಬಾ ಅವರ ಜೀವನವನ್ನು ಅವರ ಮೂರು ಘಟ್ಟಗಳಲ್ಲಿ ಹೇಳುವ ಪ್ರಯತ್ನವನ್ನು ಮಾಡಲಾಗಿದೆ.

ಈ ಸಿನಿಮಾ ಬರಗೂರು ಅವರೇ ರಚಿಸಿದ ಕಾದಂಬರಿಯನ್ನು ಆಧರಿಸಿದೆ. ಸಿನಿಮಾ ಶುರುವಾಗುವುದಕ್ಕೂ ಮೊದಲು ಬರಗೂ ಅವರು ಅವರ ಕಾದಂಬರಿಯ ಪ್ರತಿಯನ್ನು ತಮ್ಮ ಕೈಗಿತ್ತು ಓದು ಎಂದರು. ಪುಸ್ತಕ ನನಗೆ ತುಂಬಾ ಇಷ್ಟವಾಯಿತು. ಅದನ್ನು ಅವರಿಗೆ ಹೇಳಿದೆ. ಆಗಲೇ ಬರಗೂರು ರಾಮಚಂದ್ರಪ್ಪ ಅವರು ತಮ್ಮ ಕಾದಂಬರಿಯನ್ನು ಸಿನಿಮಾ ಮಾಡಲು ಹೊರಟಿರುವ ಸುದ್ದಿ ತಿಳಿದಿದ್ದು ಎಂದು ಹರಿಪ್ರಿಯ ಮಾಹಿತಿ ಹಂಚಿಕೊಂಡಿದ್ದಾರೆ.

ಇಡೀ ಪ್ರಪಂಚಕ್ಕೆ ಗಾಂಧಿ ಯಾರು ಎಂಬುದು ಗೊತ್ತಿದೆ ಆದರೆ ಕಸ್ತೂರ್ಬಾ ಅವರ ಬಗ್ಗೆ ಹೆಚ್ಚಿನ ಮಂದಿಗೆ ಹೆಚ್ಚು ತಿಳಿದಿಲ್ಲ. ಅವರನ್ನು ಗಾಂಧಿ ಪತ್ನಿ ಎಂದಷ್ಟೇ ಗುರುತಿಸಲಾಗುತ್ತದೆ. ಆಕೆ ಎಂಥ ಶ್ರೇಷ್ಠ ಹೆಣ್ಣುಮಗಳು ಎಂಬುದನ್ನು ನಾನು ಈ ಸಿನಿಮಾ ಮಾಡುವ ಪ್ರಕ್ರಿಯೆಯಲ್ಲಿ ಕಂಡುಕೊಂಡೆ ಎನ್ನುತ್ತಾರೆ ಹರಿಪ್ರಿಯ.

ಅಲ್ಲದೆ ತಮ್ಮ ಸಿನಿಮಾದಿಂದ ಎಲ್ಲರಿಗೂ ಕಸ್ತೂರ್ಬಾ ಗಾಂಧಿ ಬಗ್ಗೆ ತಿಳಿದುಕೊಳ್ಳುವಂತಾಗುತ್ತದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.  ಸಿನಿಮಾಗೆ ಗಾಯಕಿ ಶಮಿತಾ ಮಲ್ನಾಡ್ ಅವರು ಸಂಗೀತ ನೀಡಿದ್ದು ನಾಗರಾಜ್ ಅವಧಾನಿ ಸಿನಿಮೆಟೊಗ್ರಫಿ ಹೊಣೆ ಹೊತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT