ದಿ ಗುಡ್ ಗರ್ಲ್ ಸಿನಿಮಾ ಸ್ಟಿಲ್ 
ಸಿನಿಮಾ ಸುದ್ದಿ

ಸೆಕ್ಸ್ ಸೀನ್ ಶೂಟಿಂಗ್ ವೇಳೆ ಸಹನಟನಿಗೆ ಹಾಲಿವುಡ್ ನಟಿ ಜೆನಿಫರ್ ಆನಿಸ್ಟನ್ ತಲೆದಿಂಬು ಕೊಟ್ಟಿದ್ದೇಕೆ?: ಜೇಕ್ ಬಹಿರಂಗ 

40- 50 ಮಂದಿ ಸಿನಿಮಾ ತಂತ್ರಜ್ಞರ ಎದುರು ಕಣ್ಣು ಕೋರೈಸುವ ಬೆಳಕಿನ ನಡುವೆ ಸೆಕ್ಸ್ ದೃಶ್ಯದಲ್ಲಿ ಭಾಗವಹಿಸುವುದು ಯಾತನಾದಾಯಕ ಎನ್ನುವುದು ಜೇಕ್ ಅನುಭವ. ತನ್ನ ಕ್ರಶ್ ನಟಿ ಜೆನಿಫರ್ ಜೊತೆಯಲ್ಲಿ  ಸೆಕ್ಸ್ ದೃಶ್ಯ ಅಂದಾಗ ಅವರ ಮನಸಲ್ಲಿ ಭಾವನೆಗಳ ಹೊಯ್ದಾಟ ಶುರುವಾಗಿತ್ತು.

ನ್ಯೂಯಾರ್ಕ್: ಸಿನಿಮಾಗಳಲ್ಲಿ ಸೆಕ್ಸ್ ಸೀನುಗಳು ಬಂತೆಂದರೆ ಪ್ರೇಕ್ಷಕರಿಗೆ ಹಬ್ಬ. ಅದರಲ್ಲೂ ಪುರುಷ ಪ್ರೇಕ್ಷಕರ ಕಾತರ ಹೇಳತೀರದು. ಅದಕ್ಕಾಗಿಯೇ ಸಿನಿಮಾ ನೋಡುವ ವರ್ಗವೂ ಇದೆ. 

ಆದರೆ ಸೆಕ್ಸ್ ಸೀನುಗಳನ್ನು ಶೂಟ್ ಮಾಡುವಾಗ ಮಾತ್ರ ಎಕ್ಸೈಟ್ ಮೆಂಟ್ ಇರುವುದಿಲ್ಲ. ಅದೇಕೆ ಎಂದು ಹಾಲಿವುಡ್ ನಟ ಜೇಕ್ ಗಿಲೆನ್ ಹಾಲ್ ಹೇಳಿದ್ದಾರೆ. ಇತ್ತೀಚಿಗೆ ಅವರು ಸಂದರ್ಶನವೊಂದರಲ್ಲಿ ತಮ್ಮ ಸೆಕ್ಸ್ ಸೀನ್ ಚಿತ್ರೀಕರಣದ ಅನುಭವವನ್ನು ಹಂಚಿಕೊಂಡಿದ್ದಾರೆ. 

2002ರಲ್ಲಿ ಜೇಕ್ ದಿ ಗುಡ್ ಗರ್ಲ್ ಎನ್ನುವ ಸಿನಿಮಾದಲ್ಲಿ ನಟಿಸಿದ್ದರು. ಫ್ರೆಂಡ್ಸ್ ಧಾರಾವಾಹಿ ಖ್ಯಾತಿಯ ನಟಿ ಜೆನಿಫರ್ ಆನಿಸ್ಟನ್ ಆ ಸಿನಿಮಾದಲ್ಲಿ ನಾಯಕಿ. ನಟ ಜೇಕ್ ಅವರಿಗೆ ಜೆನಿಫರ್ ಆನಿಸ್ಟನ್ ಕಂಡರೆ ಬಹಳ ಹಿಂದಿನಿಂದಲೂ ಕ್ರಶ್. ಅವರ ಜೊತೆ ಸಿನಿಮಾ ಮಾಡುವ ಅವಕಾಶ ಸಿಕ್ಕಾಗ ಜೇಕ್ ಥ್ರಿಲ್ ಆಗಿದ್ದರು.

ಆ ಸಿನಿಮಾದಲ್ಲಿ ತನ್ನ ಕ್ರಶ್ ಜೊತೆ ಸೆಕ್ಸ್ ಸೀನ್ ಮಾಡಬೇಕಾಗಿ ಬಂದಾಗ ತೀವ್ರ ಇರಿಸುಮುರಿಸು ಉಂಟಾಗಿತ್ತಂತೆ. ಏಕಾಂತದಲ್ಲಿದ್ದಾಗ ಇಬ್ಬರು ಪ್ರೇಮಿಗಳು ಸೆಕ್ಸ್ ಮಾಡುವುದು ಒಂದು ಸುಂದರ ಅನುಭವ. ಆದರೆ 40- 50 ಮಂದಿ ಸಿನಿಮಾ ತಂತ್ರಜ್ಞರ ಎದುರು ಕಣ್ಣು ಕೋರೈಸುವ ಬೆಳಕಿನ ನಡುವೆ ಸೆಕ್ಸ್ ದೃಶ್ಯದಲ್ಲಿ ಭಾಗವಹಿಸುವುದು ಯಾತನಾದಾಯಕ ಎನ್ನುವುದು ಜೇಕ್ ಅನುಭವ.

ಅದಕ್ಕೂ ಮಿಗಿಲಾಗಿ ತಾನು ಕನಸು ಕಾಣುತ್ತಿದ್ದ ನಟಿ ಜೆನಿಫರ್ ಜೊತೆಯಲ್ಲಿ  ಸೆಕ್ಸ್ ದೃಶ್ಯ ಅಂದಾಗ ಅವರ ಮನಸಲ್ಲಿ ಭಾವನೆಗಳ ಹೊಯ್ದಾಟ ಶುರುವಾಗಿತ್ತು. ಜೇಕ್ ಅವರ ತಳಮಳ ಗುರುತಿಸಿದ ಜೆನಿಫರ್ ಶೂಟಿಂಗ್ ಗೆ ಮುನ್ನ ತಲೆದಿಂಬನ್ನು ತರಿಸಿ ಇದು ನಿಮಗಾಗಿ. ಎಂದಷ್ಟೇ ಹೇಳಿದರಂತೆ. ಏಕೆ ಎಂಬುದನು ವಿವರಿಸಲೂ ಇಲ್ಲ.

ದೃಶ್ಯದಲ್ಲಿ ತಲ್ಲೀನನಾಗಿ ಪ್ರೀತಿ ಮೇಲೇರಿ ಬಂದರೆ ಅ ಅವಾಂತರ ಮಿಕ್ಕವರಿಗೆ ಎನ್ನುವ ಉದ್ದೇಶದಿಂದ ಜೆನಿಫರ್ ತಲೆದಿಂಬನ್ನು ತರಿಸಿಕೊಟ್ಟಿದ್ದರು. ಈ ಘಟನೆಯನ್ನು ಜೇಕ್ ಮುಜುಗರದಿಂದ ಹಂಚಿಕೊಂಡಿದ್ದಲ್ಲದೆ ಸಹನಟನ ಕಷ್ಟ ಅರ್ಥ ಮಾಡಿಕೊಂಡ ಜೆನಿಫರ್ ತುಂಬಾ ಸ್ವೀಟ್ ನಟಿ ಎಂದು ಕರೆದಿದ್ದಾರೆ.  

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT