ನಟ ಶರಣ್ 
ಸಿನಿಮಾ ಸುದ್ದಿ

ಉತ್ತರಾಖಂಡದ ಹಿಮಚ್ಛಾದಿತ ಶಿಖರ ಪ್ರಾಂತ್ಯದಲ್ಲಿ ನಟ ಶರಣ್ ಹಾರರ್ ಸಿನಿಮಾ ಚಿತ್ರೀಕರಣ

50 ದಿನಗಳ ಹಿಂದೆ ನವನೀತ್ ಅವರು ಶರಣ್ ಅವರಿಗೆ ಹೊಸ ಸಿನಿಮಾದ ಕಥೆ ಹೇಳಿದ್ದರಂತೆ. ಕಥೆ ಕೇಳುತ್ತಲೇ ಇಂಪ್ರೆಸ್ ಆದ ಶರಣ್ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದರು ಎಂದು ನಿರ್ದೇಶಕರು ಹೇಳಿಕೊಂಡಿದ್ದಾರೆ.

ಬೆಂಗಳೂರು: ಸದ್ಯ ಗುರು ಶಿಷ್ಯರು ಸಿನಿಮಾ ಚಿತ್ರೀಕರಣದಲ್ಲಿ ಬಿಝಿಯಾಗಿರುವ ನಟ ಶರಣ್, 'ಕರ್ವ' ನಿರ್ದೇಶಕ ನವನೀತ್ ಸಿನಿಮಾದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಇನ್ನೂ ಹೆಸರಿಡದ ಆ ಚಿತ್ರ ಸಂಪೂರ್ಣ ಹಾರರ್ ಸಿನಿಮಾ ಎನ್ನಲಾಗಿದೆ. ತರುಣ್ ಶಿವಪ್ಪ ಈ ಸಿನಿಮಾ ನಿರ್ಮಾಪಕರು. ನಿರ್ದೇಶಕ ಅವರ ರೋಸ್, ವಿಕ್ಟರಿ2 ಸಿನಿಮಾಗಳನ್ನು ಈ ಹಿಂದೆ ಅವರೇ ನಿರ್ಮಾಣ ಮಾಡಿದ್ದರು.

50 ದಿನಗಳ ಹಿಂದೆ ನವನೀತ್ ಅವರು ಶರಣ್ ಅವರಿಗೆ ಹೊಸ ಸಿನಿಮಾದ ಕಥೆ ಹೇಳಿದ್ದರಂತೆ. ಕಥೆ ಕೇಳುತ್ತಲೇ ಇಂಪ್ರೆಸ್ ಆದ ಶರಣ್ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದರು ಎಂದು ನಿರ್ದೇಶಕರು ಹೇಳಿಕೊಂಡಿದ್ದಾರೆ. ಈ ಹಿಂದೆ ಕರ್ವ ಮತ್ತು ಬಕಾಸುರ ಸಿನಿಮಾಗಳನ್ನು ನಿರ್ದೇಶಿಸಿರುವ ನವನೀತ್ ಅವರಿಗೆ ಇದು ಮೂರನೇ ಸಿನಿಮಾ.

ಸಿನಿಮಾದ ಶೇ.80ರಷ್ಟು ಭಾಗ ಉತ್ತರಾಖಂಡದ ಹಿಮಚ್ಛಾದಿತ ಪ್ರದೇಶಗಳಲ್ಲಿ ನಡೆಯುವುದು ಎಂದು ನಿರ್ದೇಶಕರು ಹೇಳಿದ್ದಾರೆ. ಸೆನಿಮೆಟೊಗ್ರಾಫರ್ ಆಗಿ ಅನುಪ್ ಕಟ್ಟುಕರನ್ ಅವರು ಆಯ್ಕೆಯಾಗಿದ್ದಾರೆ. ಅವರು ಈ ಹಿಂದೆ ಹಲವು ಜನಪ್ರಿಯ ಜಾಹೀರಾತುಗಳಿಗೆ ಸಿನಿಮೆಟೊಗ್ರಾಫರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಕನ್ನಡದಲ್ಲಿ ಇದು ಅವರ ಮೊದಲ ಸಿನಿಮಾ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

ನಾಳೆ ಜಗತ್ತಿನಾದ್ಯಂತ ಯಶ್ ನಟನೆಯ 'Toxic' ಚಿತ್ರ ಬಿಡುಗಡೆ; ಇಂದು ದಿಢೀರ್ ಕೋರ್ಟ್ ಮೆಟ್ಟಿಲೇರಿದ ನಿರ್ಮಾಪಕ!

ಬೆಂಗಳೂರು: ಸಿಗ್ನಲ್‌ನಲ್ಲಿ ನಿಂತಿದ್ದ ಬೈಕ್‌ಗೆ ವೇಗವಾಗಿ ಬಂದ ಕಾರು ಡಿಕ್ಕಿ, ಹೇರ್ ಸ್ಟೈಲಿಸ್ಟ್ ಸಾವು; Video

BPSC ಪರೀಕ್ಷೆ ವಿವಾದ: ಬಿಹಾರ ಸಿಎಂ ನಿವಾಸದ ಬಳಿ ಬ್ಯಾರಿಕೇಡ್ ಮುರಿದ ವಿದ್ಯಾರ್ಥಿಗಳು, ಜಲಫಿರಂಗಿಗೆ ಜಗ್ಗದೆ ರೇನ್ ಡ್ಯಾನ್ಸ್ ಮಾಡಿ ಪ್ರತಿಭಟನೆ!

'ಕಾಂಗ್ರೆಸ್ ಸರ್ಕಾರದ ವೈಫಲ್ಯ' ವಿರೋಧಿಸಿ ಸೆಪ್ಟೆಂಬರ್ 1 ರಿಂದ 10ರವರೆಗೆ ರಾಯಚೂರಿನಿಂದ ಬಳ್ಳಾರಿಗೆ BJP-JDS ಪಾದಯಾತ್ರೆ!