ಜೆನಿಫರ್ ಆನಿಸ್ಟನ್ ಮತ್ತು ಡೇವಿಡ್ ಶ್ವಿಮ್ಮರ್ 
ಸಿನಿಮಾ ಸುದ್ದಿ

ಫ್ರೆಂಡ್ಸ್ ಖ್ಯಾತಿಯ ಜೋಡಿ ಜೆನಿಫರ್ ಮತ್ತು ಡೇವಿಡ್ ಡೇಟ್ ಮಾಡುತ್ತಿಲ್ಲ: ವಿ ಆರ್ ಜಸ್ಟ್ ''ಫ್ರೆಂಡ್ಸ್'' ಎಂದ ನಟಿ!

ಫ್ರೆಂಡ್ಸ್ ಧಾರಾವಾಹಿ ತೆರೆಕಂಡು ದಶಕಗಳೇ ಉರುಳಿದ್ದರೂ ಅಭಿಮಾನಿಗಳು ಅದರ ಗುಂಗಿನಿಂದ ಹೊರಬಂದಿಲ್ಲ. ಹೀಗಾಗಿ ನಿಜಜೀವನದಲ್ಲಿ ತಾವು ಮತ್ತು ಡೇವಿಡ್ ಒಂದಾಗಬೇಕು ಎಂದು ಅವರು ಬಯಸುತ್ತಿದ್ದಾರೆ ಎಂದು ನಟಿ ಅಭಿಪ್ರಾಯಪಟ್ಟಿದ್ದಾರೆ

ಹಾಲಿವುಡ್: ಕಾಲೇಜು ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಫ್ರೆಂಡ್ಸ್ ಧಾರಾವಾಹಿ ಸರಣಿಯಲ್ಲಿ ಜೋಡಿಗಳಾಗಿ ಕಾಣಿಸಿಕೊಂಡಿದ್ದ ಜೆನಿಫರ್ ಆನಿಸ್ಟನ್ ಮತ್ತು ದೇವಿಡ್ ಶ್ವಿಮ್ಮರ್ ಈಗ ನಿಜ ಜೀವನದಲ್ಲಿ ಪ್ರಣಯ ಪಕ್ಷಿಗಳಾಗಿದ್ದಾರೆ ಎನ್ನುವ ಸುದ್ದಿಗಳು ಹರಿದಾಡಿದ್ದವು. ಇದು ಫ್ರೆಂಡ್ಸ್ ಅಭಿಮಾನಿಗಳಲ್ಲಿ ರೋಮಾಂಚನ ಸೃಷ್ಟಿಸಿತ್ತು.

ತಮ್ಮ ಸಂಬಂಧದ ಬಗ್ಗೆ ಸ್ಪಷ್ಟೀಕರಣ ನೀಡಿರುವ ನಟಿ ಜೆನಿಫರ್ ಆನಿಸ್ಟನ್ ಅದು ಸುಳ್ಳೆಂದು ತಿಳಿಸಿದ್ದಾರೆ. ಜನರು ಫ್ರೆಂಡ್ಸ್ ಧಾರಾವಾಹಿಯನ್ನು ಎಷ್ಟು ಗಂಭೀರವಾಗಿ ಪರಿಗಣಿಸಿದ್ದಾರೆ ಎನ್ನುವುದಕ್ಕೆ ಉದಾಹರಣೆ ಎಂದು ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ. 

ಫ್ರೆಂಡ್ಸ್ ಧಾರಾವಾಹಿ ತೆರೆಕಂಡು ದಶಕಗಳೇ ಉರುಳಿದ್ದರೂ ಅಭಿಮಾನಿಗಳು ಅದರ ಗುಂಗಿನಿಂದ ಹೊರಬಂದಿಲ್ಲ. ಧಾರಾವಾಹಿಯ ಕಲ್ಪನಾಲೋಕದಲ್ಲೇ ವಿಹರಿಸುತ್ತಿದ್ದಾರೆ. ಹೀಗಾಗಿ ನಿಜಜೀವನದಲ್ಲಿ ತಾವು ಮತ್ತು ಡೇವಿಡ್ ಒಂದಾಗಬೇಕು ಎಂದು ಅವರು ಬಯಸುತ್ತಿದ್ದಾರೆ ಎಂದು ನಟಿ ಅಭಿಪ್ರಾಯಪಟ್ಟಿದ್ದಾರೆ. ಜೆನಿಫರ್ ಆನಿಸ್ಟನ್ ಅವರು ಹಾಲಿವುಡ್ ನಟ ಬ್ರಾಡ್ ಪಿಟ್ ಅವರ ಮಾಜಿ ಪತ್ನಿ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Video: ಶ್ರೀಲಂಕಾ ಕರಾವಳಿಯಲ್ಲಿ ಇರಾನ್ ಯುದ್ಧನೌಕೆ ಮೇಲೆ ಅಮೆರಿಕ ದಾಳಿ; ಕನಿಷ್ಠ 87 ನಾವಿಕರು ಸಾವು

T20 World Cup 2026: Allen ದಾಖಲೆ ಶತಕ; ಅಜೇಯ ಆಫ್ರಿಕಾ ಮಣಿಸಿ ಫೈನಲ್‌ಗೆ ಲಗ್ಗೆ ಇಟ್ಟ ನ್ಯೂಜಿಲ್ಯಾಂಡ್!

'ನರಕ.. ಇರಾನ್ ಅಲ್ಲದವರಾದ್ರೆ ಮುಚ್ಕೊಂ*ರಿ': Khamenei ಸಾವಿಗೆ ಅಳುವ ಭಾರತೀಯ ಮುಸ್ಲಿಂ ಮಹಿಳೆಯರ ಲೇವಡಿ ಮಾಡಿದ ಇರಾನ್ ಮಹಿಳೆಯರು!

ಸೌದಿ ಅರೇಬಿಯಾ ಮೇಲೆ ದಾಳಿ ಬೇಡ: ನಾವು ಯುದ್ಧಕ್ಕೆ ಇಳಿಯಬೇಕಾಗುತ್ತೆ; ಇರಾನ್‌ಗೆ ಪಾಕಿಸ್ತಾನ ನೇರ ಧಮ್ಕಿ!

ವಾಣಿಜ್ಯ, ಕೈಗಾರಿಕಾ ವಲಯಕ್ಕೆ ವಿದ್ಯುತ್ ದರ ಏರಿಕೆ ಶಾಕ್; ಆದ್ರೆ ರೈತರಿಗೆ ಗುಡ್ ನ್ಯೂಸ್!

SCROLL FOR NEXT