ಪ್ರೇಮ್ 
ಸಿನಿಮಾ ಸುದ್ದಿ

ಫೀಲ್ಡ್ ಮಾರ್ಷಲ್ ಕಾರಿಯಪ್ಪ ಪಾತ್ರದಲ್ಲಿ ನಟಿಸಲಿರುವ ಪ್ರೇಮ್: ಪ್ರೇಮಂ ಪೂಜ್ಯಂ ತಂಡದಿಂದ 400 ಕೋಟಿ ರೂ. ಹಾಲಿವುಡ್ ಚಿತ್ರ

ಜನರಲ್ ಕಾರಿಯಪ್ಪ ವಿಶ್ವವೇ ಕೊಂಡಾಡುವ ಹೀರೋ ಆಗಿರುವುದರಿಂದ ಹಾಲಿವುಡ್ ಮಟ್ಟದಲ್ಲಿ ಈ ಸಿನಿಮಾವನ್ನು ನಿರ್ಮಿಸಲಾಗುವುದು ಎಂದು ಪ್ರೇಮ್ ಹೇಳಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಮಾಡುವುದರಲ್ಲಿ ತಲೆಕೆಡಿಸಿಕೊಳ್ಳುತ್ತಿರುವ ಹೊತ್ತಿನಲ್ಲಿ ನಟ ಪ್ರೇಮ್ ಈ ಹಾಲಿವುಡ್ ಬಾಂಬ್ ಸಿಡಿಸಿದ್ದಾರೆ.

ಬೆಂಗಳೂರು: ನಟ ಪ್ರೇಮ್ ಅವರ 25 ನೇ ಸಿನಿಮಾ ಪ್ರೇಮಂ ಪೂಜ್ಯಂ ಬಿಡುಗಡೆಗೆ ಸಿದ್ಧವಾಗುತ್ತಿರುವ ಸಂದರ್ಭದಲ್ಲೇ ಅವರು ಕರ್ನಾಟಕದ ಹೆಮ್ಮೆಯ ಕಲಿ ಫೀಲ್ಡ್ ಮಾರ್ಷಲ್ ಕಾರಿಯಪ್ಪ ಪಾತ್ರದಲ್ಲಿ ನಟಿಸುವ ಸುದ್ದಿ ಹೊರಬಿದ್ದಿದೆ. ಈ ಸಿನಿಮಾವನ್ನೂ ಪ್ರೇಮಂ ಪೂಜ್ಯಂ ನಿರ್ಮಾಪಕರೇ ಮಾಡುತ್ತಿರುವುದು ವಿಶೇಷ.

ಈ ಹೊಸ ಸಿನಿಮಾವನ್ನು ಜಾಗತಿಕ ಪ್ರೇಕ್ಷಕರಿಗಾಗಿ ನಿರ್ಮಿಸಲಾಗುವುದೆಂದು ಸಿನಿಮಾ ತಂಡ ಹೇಳಿಕೊಂಡಿದೆ. ಪ್ರೇಮಂ ಪೂಜ್ಯಂ ತಂಡವೇ ಕಾರಿಯಪ್ಪ ಜೀವನಾಧರಿತ ಸಿನಿಮಾಗೂ ಕೆಲಸ ಮಾಡಲಿದೆ. ಪ್ರೇಮಂ ಪೂಜ್ಯಂ ನಿರ್ದೇಶಕ ಬಿ ಎಸ್ ರಾಘವೇಂದ್ರ ಅವರೇ ಹೊಸ ಸಿನಿಮಾಗೂ ಆಕ್ಷನ್ ಕಟ್ ಹೇಳಲಿದ್ದಾರೆ.

ಭಾರತದ ಮೊತ್ತಮೊದಲ ಕಮಾಂಡರ್ ಇನ್ ಚೀಫ್ ಎನ್ನುವ ಖ್ಯಾತಿಗೆ ಪಾತ್ರರಾದ ಕೊಡಗಿನ ಕಾರಿಯಪ್ಪ ಅವರ ಜೀವನ ಪಯಣವನ್ನು ಸಾರುವ ಈ ಸಿನಿಮಾ ಬರೋಬ್ಬರಿ 400 ಕೋಟಿ ಬಜೆಟ್ ನ ಸಿನಿಮಾ ಎಂದು ಹೇಳುವ ಮೂಲಕ ಪ್ರೇಮ್ ಎಲ್ಲರನ್ನೂ ದಂಗುಬಡಿಸಿದ್ದಾರೆ.

ಕಾರಿಯಪ್ಪ ವಿಶ್ವವೇ ಕೊಂಡಾಡುವ ಹೀರೋ ಆಗಿರುವುದರಿಂದ ಹಾಲಿವುಡ್ ಮಟ್ಟದಲ್ಲಿ ಈ ಸಿನಿಮಾವನ್ನು ನಿರ್ಮಿಸಲಾಗುವುದು ಎಂದು ಪ್ರೇಮ್ ಹೇಳಿದ್ದಾರೆ. ಅದಕ್ಕಾಗಿ ಹಾಲಿವುಡ್ ಸಿನಿಮಾಗಳಲ್ಲಿ ಕೆಲಸ ಮಾಡಿರುವ ತಂತ್ರಜ್ನರನ್ನು ಬಳಸಿಕೊಳ್ಲಲಾಗುವುದು ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ವಿಯೆಟ್ನಾಂ ದೋಣಿ ದುರಂತ: 15 ಭಾರತೀಯ ಪ್ರವಾಸಿಗರು ಸಾವು; ತಮಿಳುನಾಡು, ಆಂಧ್ರ ಮಂದಿ ಸಮುದ್ರಪಾಲು; Video

HMT ಆದಾಗ ನಾನು ಹುಟ್ಟಿರ್ಲಿಲ್ಲ, ನೀವೇನು? ಅರಣ್ಯ ಭೂಮಿ ಅಂತ ದಾಖಲೆ ತೋರಿಸಿ ಕುಮಾರಸ್ವಾಮಿಗೆ ಈಶ್ವರ್ ಖಂಡ್ರೆ ಟಾಂಗ್

'10 Snakes' ಪೋಸ್ಟ್ ಗೆ ಶ್ರೇಷ್ಠ ಅಯ್ಯರ್‌ ಲೈಕ್, ಭಾರಿ ವಿವಾದಕ್ಕೆ ಗುರಿಯಾದ ಶ್ರೇಯಸ್ ಅಯ್ಯರ್! ನೆಟ್ಟಿಗರು ತೀವ್ರ ಚರ್ಚೆ

INS Mahendragiri: ಪ್ರಾಜೆಕ್ಟ್ 17A; ಕೇವಲ 18 ತಿಂಗಳಲ್ಲಿ 6ನೇ ಯುದ್ಧನೌಕೆ ನೌಕಾಪಡೆಗೆ ಸೇರ್ಪಡೆ; Video

ಜೈಪುರ ಮಹಿಳೆ ಕೊಲೆ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್: ತಾಯಿಗೂ ಮೊದಲೇ ತಂದೆಯನ್ನೂ ಕೊಂದಿದ್ದಳೇ ಹಂತಕ ಪುತ್ರಿ? ಸೋದರಮಾವ ಹೇಳಿದ್ದೇನು?