ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಆಧಾರ್ ನೋಂದಣಿ: ಸಾರ್ವಜನಿಕರ ಗೊಂದಲ

Srinivasa Murthy VN
Updated On : 12 Aug 2013, 11:27 am

ಬಾಳೆಹೊನ್ನೂರು: ಇಲ್ಲಿನ ಬಿ.ಕಣಬೂರು ಗ್ರಾಪಂ ಕಾರ್ಯಾಲಯದಲ್ಲಿ ಕಳೆದ ಹತ್ತು ದಿನಗಳಿಂದ ಆರಂಭಗೊಂಡಿರುವ ಆಧಾರ್ ಕಾರ್ಡ್ ನೋಂದಣಿಗೆ ಸಾರ್ವಜನಿಕರು ಮುಗಿಬಿದ್ದಿದ್ದಾರೆ.
ಕೇಂದ್ರದಲ್ಲಿ ಪ್ರಸ್ತುತ ಮೂರು ಕಂಪ್ಯೂಟರ್‌ಗಳಿದ್ದು, ದಿನಕ್ಕೆ 90 ರಿಂದ 100 ಅರ್ಜಿಗಳನ್ನು ಸ್ವೀಕರಿಸಿ ಮಾಹಿತಿಗಳನ್ನು ಭರ್ತಿ ಮಾಡಬಹುದಾಗಿದೆ.
ಆದರೆ, ಸಾರ್ವಜನಿಕರು ಗೊಂದಲಕ್ಕೊಳಗಾಗಿ ಕೇಂದ್ರವನ್ನು ಇಲ್ಲಿಂದ ಬೇಗ ತೆರವುಗೊಳಿಸುತ್ತಾರೆ ಎಂದು ಆತುರವಾಗಿ ಅರ್ಜಿಗಳನ್ನು ಪಡೆದು ಇಂದೇ ಅರ್ಜಿಗಳನ್ನು ಭರ್ತಿ ಮಾಡಿಕೊಳ್ಳುವಂತೆ ಕೇಂದ್ರದ ಸಿಬ್ಬಂದಿಗೆ ಒತ್ತಡ ಹೇರುತ್ತಿದ್ದಾರೆ.
ಇದರಿಂದ ಪಡೆದಿರುವ ಅರ್ಜಿಗಳನ್ನು ನಿಗದಿತ ಸಮಯದಲ್ಲಿ ಭರ್ತಿ ಮಾಡಲು ಆಗುತ್ತಿಲ್ಲ ಎನ್ನುತ್ತಾರೆ ಕೇಂದ್ರದ ಸಿಬ್ಬಂದಿ.
ಇನ್ನು ಕೆಲವು ವ್ಯಕ್ತಿಗಳು ಅರ್ಜಿಗಳನ್ನು ಕೂಡಲೇ ನೋಂದಾಯಿಸಿಕೊಳ್ಳುವಂತೆ ಪದೇ ಪದೇ ಒತ್ತಡ ತರುತ್ತಿದ್ದು, ಕೆಲವರು ಮದ್ಯಪಾನ ಮಾಡಿ ಬಂದು ಅಸಭ್ಯವಾಗಿ ವರ್ತಿಸುತ್ತಿದ್ದಾರೆ ಹಾಗೂ ಗಲಾಟೆ ಮಾಡುತ್ತಿದ್ದಾರೆ ಎಂದು ಕೇಂದ್ರದ ಸಿಬ್ಬಂದಿ ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.
ಗೊಂದಲ ಬೇಡ: ಬಾಳೆಹೊನ್ನೂರು ವ್ಯಾಪ್ತಿಯಲ್ಲಿ ಆರಂಭಗೊಂಡಿರುವ ಆಧಾರ್ ನೋಂದಣಿಯನ್ನು ಇನ್ನೂ ಎರಡರಿಂದ ಮೂರು ತಿಂಗಳ ಕಾಲ ಮುಂದುವರೆಸಲಿದ್ದು, ಸಾರ್ವಜನಿಕರು ಆತಂಕ, ಗೊಂದಲಕ್ಕೊಳಗಾಗಬಾರದು.
ಕೇಂದ್ರದಲ್ಲಿ ಸೋಮವಾರದಿಂದ ಇನ್ನೂ ಎರಡು ಕಂಪ್ಯೂಟರ್‌ಗಳನ್ನು ಅಳವಡಿಸಲಿದ್ದು, ಆಗ ದಿನಕ್ಕೆ 150 ರಿಂದ 200 ಅರ್ಜಿಗಳನ್ನು ಪಡೆದುಕೊಳ್ಳಲಾಗುವುದು. ಭಾನುವಾರ, ಸರ್ಕಾರಿ ರಜೆಗಳೂ ಸೇರಿದಂತೆ ಎಲ್ಲಾ ದಿನವೂ ಕಾರ್ಯನಿರ್ವಹಿಸುವುದರಿಂದ ಯಾರಿಗೂ ತೊಂದರೆಯಾಗಲಾರದು.
 ಬಾಳೆಹೊನ್ನೂರು ವ್ಯಾಪ್ತಿಯಲ್ಲಿ ಸಂಪೂರ್ಣ ಆಧಾರ್ ನೋಂದಣಿ ಮುಗಿಸಿಯೇ ಕೇಂದ್ರವನ್ನು ಇಲ್ಲಿಂದ ತೆರವುಗೊಳಿಸಲಾಗುವುದು.
ಸಾರ್ವಜನಿಕರು ಕೇಂದ್ರದ ಸಿಬ್ಬಂದಿಯೊಂದಿಗೆ ಸಹಕರಿಸಬೇಕು ಎಂದು ಕೇಂದ್ರದ ಮುಖ್ಯಸ್ಥರು ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement