ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಮನೆಯಂಗಳದಿ ಶ್ರಾವಣ ಸಂಜೆ ಕಾರ್ಯಕ್ರಮ

Srinivasa Murthy VN
Updated On : 12 Aug 2013, 11:35 am

ವರ್ಣ ಭೇದಗಳನ್ನು ಅಳಿಸಲು ಅಸ್ಪೃಶ್ಯತೆ ವಿರುದ್ಧ ಶರಣರು ಹೋರಾಡಿದರು
ಕಡೂರು: ಕಾಯಕವೇ ಕೈಲಾಸ ಎಂದು ಬಸವಾದಿ ಶರಣರು 12ನೇ ಶತಮಾನದಲ್ಲಿ ಹೇಳುವ ಮೂಲಕ ಕಷ್ಟಪಟ್ಟು ದುಡಿದು ಬಂದದ್ದರಿಂದ ತಾನುಂಡು ಇತರರಿಗೂ ಹಂಚಿ ತಿನ್ನುವ ಪ್ರವೃತ್ತಿ ಕಲಿಸಿಕೊಟ್ಟರು ಎಂದು ಸಾಹಿತಿ ದಿಬ್ಬದಹಳ್ಳಿ ಶ್ಯಾಂಸುಂದರ್ ಹೇಳಿದರು.
 ತಾಲೂಕಿನ ಸಿಂಗಟಗೆರೆ ಹೋಬಳಿಯ ಬಿ. ಮಲ್ಲೇನಹಳ್ಳಿಯಲ್ಲಿ ಕಡೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಮನೆಯಂಗಳದಿ ಶ್ರಾವಣ ಸಂಜೆ ಕಾರ್ಯಕ್ರಮದಲ್ಲಿ ಶರಣರಿಂದ ಸಮಾಜಕ್ಕೆ ಕೊಡುಗೆ ವಿಷಯದ ಮೇಲೆ ಉಪನ್ಯಾಸ ನೀಡಿ, ಜಾತಿ, ವರ್ಣ ಭೇಧಗಳನ್ನು ಅಳಿಸಬೇಕೆಂಬ ಮೂಲ ಉದ್ದೇಶದಿಂದ ಅಸ್ಪೃಶ್ಯತೆ ವಿರುದ್ಧ ಹೋರಾಡಿದ ಶರಣರು ಸ್ತ್ರೀ ಸಮಾನತೆಗೆ ಅಂದೇ ಶ್ರಮಿಸಿದ್ದರು. ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸುವಲ್ಲಿ ವಚನ ಸಾಹಿತ್ಯ ಮತ್ತು ಜನಪದ ಸಾಹಿತ್ಯದ ಕೊಡುಗೆ ಅಪಾರ. ಕನ್ನಡ ಭಾಷೆ ಕರುಳಿನ ಭಾಷೆಯಾಗಿದ್ದು ಪೋಷಕರು ಇಂಗ್ಲಿಷ್ ವ್ಯಾಮೋಹ ತೊರೆದು ಕನ್ನಡ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಬೇಕು. ಕನ್ನಡದಲ್ಲಿ ಸೋಬಾನೆ ಗೀತೆ ಮರೆಯಾಗುತ್ತಿದ್ದು ಹೆಣ್ಣು ಮಕ್ಕಳು ಸೋಬಾನೆ ಗೀತೆಯನ್ನು ಕಲಿಯಬೇಕು ಎಂದರು.
 ಕಸಾಪ ಜಿಲ್ಲಾಧ್ಯಕ್ಷ ನಾ.ಸು. ಶಿವಸ್ವಾಮಿ ಮನೆಯಂಗಳದಿ ಶ್ರಾವಣ ಸಂಜೆ ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿ, ಕನ್ನಡ ಭಾಷೆ ಬೆಳೆದಿದೆ ನಾವು ಅದನ್ನು ಉಳಿಸಬೇಕು. ಇಂದು ಕನ್ನಡ ಉಳಿದಿದೆ ಎಂದರೆ ಅದು ಹಳ್ಳಿಗಳಲ್ಲಿ ಮಾತ್ರ. ವಿಶ್ವದಲ್ಲಿ ಸುಮಾರು 2 ಸಾವಿರ ಭಾಷೆಗಳಿವೆ. ಅವುಗಳಲ್ಲಿ ಅತೀ ಸುಂದರವಾಗಿ ಬರೆಯಬಹುದಾದ ಭಾಷೆ ಕನ್ನಡ ಮಾತ್ರ. ವಿಶ್ವ ಮಟ್ಟದಲ್ಲಿ ಕನ್ನಡ ಭಾಷೆ ಮಾನ್ಯತೆ ಪಡೆದಿದ್ದು ಪಟ್ಟಣಗಳಲ್ಲಿ ಯಾವ ಭಾಷೆಯನ್ನು ಬಳಸಲಾಗುತ್ತಿದೆ ಎಂಬ ಅನುಮಾನ ಮೂಡುತ್ತಿದೆ ಎಂದರು. ಕೆ. ಬಿದರೆ ದೊಡ್ಡಮಠದ ಪ್ರಭುಕುಮಾರ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ತಾಲೂಕು ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಂಚಾಲಕ ಕೆ.ಜಿ.ಶ್ರೀನಿವಾಸಮೂರ್ತಿ, ಕಾರ್ಯದರ್ಶಿ ವಿರೂಪಾಕ್ಷಪ್ಪ, ಸಿಂಗಟಗೆರೆ ಕಸಾಪ ಅಧ್ಯಕ್ಷ ಮರುಳಸಿದ್ದಪ್ಪ, ಶಿವಪ್ರಕಾಶ್, ಧರ್ಮಪ್ರಕಾಶ್, ಮಲ್ಲಿಕಾರ್ಜುನ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪ್ರಕಾಶ್ ಇದ್ದರು. ಇದೇ ಸಂದರ್ಭದಲ್ಲಿ ದೇವಾಲಯಕ್ಕೆ ಭೂದಾನ ಮಾಡಿದ ಮಲ್ಲೇಶಪ್ಪನವರ ಕುಟುಂಬ ಮತ್ತು ದೇವಾಲಯದ ಅಭಿವೃದ್ಧಿಗೆ ಶ್ರಮಿಸಿದ ಗ್ರಾಮಸ್ಥರನ್ನು ಸನ್ಮಾನಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement