ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಅವ್ಯವಹಾರ; ತನಿಖೆಗೆ ಆಗ್ರಹ

Srinivasa Murthy VN
Updated On : 13 Aug 2013, 11:00 am

ಕಪ್ರ ವಾರ್ತೆ ಚಿಕ್ಕಮಗಳೂರು ಆ.12
ತಾಲೂಕು ಆವುತಿ ಹೋಬಳಿಯಲ್ಲಿ ಜಿಪಂನಿಂದ 2012-13 ನೇ ಸಾಲಿನಲ್ಲಿ ಕುಡಿಯುವ ನೀರು ಸರಬರಾಜು ಯೋಜನೆಯಲ್ಲಿ ಲಕ್ಷಾಂತರ ರು.ಗಳ ಅವ್ಯವಹಾರಗಳಾಗಿದ್ದು ತನಿಖೆಗೆ ಆದೇಶ ನೀಡುವಂತೆ ಜಿಲ್ಲಾಧಿಕಾರಿಗಳು, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಜಿಪಂ ಅಧ್ಯಕ್ಷರನ್ನು ಎಚ್.ಡಿ. ಕುಮಾರಸ್ವಾಮಿ ಅಭಿಮಾನಿಗಳ ಸಂಘ ಒತ್ತಾಯಿಸಿದೆ.
 ಹಿಂದೆ ಹಲವಾರು ಬಾರಿ ಅವ್ಯವಹಾರದ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಸಂಸದ ಜಯಪ್ರಕಾಶ್ ಹೆಗ್ಡೆಯವರಿಗೆ ಈ ಅವ್ಯವಹಾರದ ಬಗ್ಗೆ ಅವರ ಗಮನಕ್ಕೆ ತರಲಾಗಿತ್ತು. ಅವರೂ ವಿಶೇಷ ತನಿಖಾಧಿಕಾರಿಗಳಿಂದ ತನಿಖೆ ಮಾಡಿಸುವುದಾಗಿ ಭರವಸೆ ನೀಡಿದ್ದರು ಎಂದು ಸಂಘದ ಜಿಲ್ಲಾಧ್ಯಕ್ಷ ಹೊಲದಗದ್ದೆ ಗಿರೀಶ್ ಹೇಳಿಕೆಯಲ್ಲಿತಿಳಿಸಿದ್ದಾರೆ.
ಲೆಕ್ಕದ ವಿವರ: ಈಗ ಮಲ್ಲಂದೂರು ಗ್ರಾಮಕ್ಕೆ ಕುಡಿಯುವ ನೀರಿನ ಯೋಜನೆಯಲ್ಲಿ 19.68,000 ರು.ಗಳ ಬಿಲ್ ಮಾಡಿಸಿದ್ದು ಗ್ರಾಮಕ್ಕೆ ಒಂದು ತೊಟ್ಟು ನೀರು ಬಂದಿರುವುದಿಲ್ಲ. ಸಂತೆ ಮೈದಾನ ಗ್ರಾಮಕ್ಕೆ 2,85,576,  ಕೆಳ ಮಲ್ಲಂದೂರು, ಕೆಳ ಹೊಲದಗದ್ದೆ  4,28,395, ಸಿರಗೂರು ಗ್ರಾಮಕ್ಕೆ 9,40,433, ನಿಡಗೋಡು ಗ್ರಾಮಕ್ಕೆ  4,80,000, ತೋಟದಮಕ್ಕಿ 4,15,000, ನರೀಗುಡ್ಡೆ 13,86,000, ದಾನಿಹಳ್ಳಿ ಗ್ರಾಮಕ್ಕೆ 7,93,000, ಮಸಗಲಿ ಗ್ರಾಮಕ್ಕೆ 3,44,000, ಬಸರಹಳ್ಳಿ ಗ್ರಾಮಕ್ಕೆ 2,29,000, ಆನಿಗನಹಳ್ಳಿ ಗ್ರಾಮಕ್ಕೆ 2,01,000, ಬೈಗೂರು ಗ್ರಾಮಕ್ಕೆ 6,65,000, ಹಾವರೆ ಗ್ರಾಮಕ್ಕೆ 4,73,000 ರು. ಕುಡಿಯುವ ನೀರಿನ ಯೋಜನೆಯಡಿಯಲ್ಲಿ ಬಿಲ್ ಪಾವತಿಯಾಗಿದೆ.
ಸಂಪೂರ್ಣ ಬಿಲ್: ಇಷ್ಟೆಲ್ಲಾ ಅವ್ಯವಹಾರಗಳ ಬಗ್ಗೆ ಜಿಪಂ ಕಾರ್ಯಪಾಲಕ ಅಭಿಯಂತರರಿಗೆ ಮತ್ತು ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳಿಗೆ ಸಂಪೂರ್ಣ ಕಾಮಗಾರಿ ಮುಗಿಯುವವರೆಗೂ ಬಿಲ್ ಪಾವತಿಸದೇ ಇರಲು ತಡೆ ಹಿಡಿಯುವಂತೆ ಕಳೆದ ಮಾರ್ಚ್ ತಿಂಗಳಿನಲ್ಲಿ ಸಂಘದ ವತಿಯಿಂದ ಮನವಿ ಪತ್ರ ಸಲ್ಲಿಸಿರುತ್ತೇವೆ. ಆದರೂ ಅದನ್ನು ಲೆಕ್ಕಿಸದೇ ಈ ವ್ಯವಹಾರಗಳಿಂದ ಅಧಿಕಾರಿಗಳು ಶಾಮೀಲಾಗಿರುವುದರಿಂದ ಸಂಪೂರ್ಣ ಬಿಲ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
 ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮತ್ತು ಎಂಜಿನಿಯರ್ ಹಾಗೂ ಗುತ್ತಿಗೆದಾರರ ವಿರುದ್ಧ ವಿಶೇಷ ತನಿಖಾಧಿಕಾರಿಗಳಿಂದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ರೀತಿಯ ಕೈಗೊಳ್ಳುವುದರ ಜೊತೆಗೆ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಗುಳುಂ ಮಾಡಿರುವ ಸುಮಾರು 70 ಲಕ್ಷಕ್ಕೂ ಹೆಚ್ಚು ಹಣವನ್ನು ವಶಪಡಿಸಿಕೊಳ್ಳದಿದ್ದಲ್ಲಿ ಜಿಪಂ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement