ಚುತುಷ್ಪಥಕ್ಕಾಗಿ ಮನವಿ
ಕ.ಪ್ರ.ವಾರ್ತೆತರೀಕೆರೆ ಆ.12
ಪಟ್ಟಣದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಯನ್ನು ಚತುಷ್ಪದ ರಸ್ತೆಯನ್ನಾಗಿ ಪರವರ್ತಿಸಲು ಕಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ತಿಳಿಸಿದ್ದಾರೆ.
ವಕೀಲರ ಸಂಘದ ವತಿಯಿಂದ ಸಂಘದ ಆವರಣದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ಮುಖ್ಯ ರಸ್ತೆ ದುರಸ್ತಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಡಿವೈಡರ್ ಅಳವಡಿಸಿ ನಾಲ್ಕು ಮುಖದ ರಸ್ತೆ ನಿರ್ಮಾಣವಾಗಬೇಕು. ಮಳೆಗಾಲ ಮುಗಿಯುತ್ತಿದ್ದ ಹಾಗೆ ಸೀಮೆಂಟು, ಡಾಂಬರೀಕರಣದ ಮೂಲಕ ಪಟ್ಟಣದ ಎಲ್ಲ ಮುಖ್ಯ ರಸ್ತೆಗಳನ್ನು ಅಭಿವೃದ್ದಿ ಪಡಿಸಲಾಗುವುದು. ಇದಕ್ಕಾಗಿ ಎರಡು ಮೂರು ಕೋಟಿ ರು.ಗಳ ನೆರವನ್ನು ಕೇಳಲಾಗಿದೆ. ಪಟ್ಟಣದಲ್ಲಿ ಸಮರ್ಪಕವಾಗಿ ಕುಡಿಯುವ ನೀರು ಸರಬರಾಜು ಮಾಡಲು ನೀರು ಸಂಗ್ರಹಣೆಯ ಓವರ್ ಹೆಡ್ ಟ್ಯಾಂಕ್ ನಿರ್ಮಾಣವಾಗಬೇಕು ಎಂದರು.
ವಕೀಲರ ಸಂಘದ ಅಧ್ಯಕ್ಷ ಸಿ.ಎಸ್.ಶಿವಪ್ರಸಾದ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ವಕೀಲರಾದ ಜಿ.ಎನ್.ಚಂದ್ರಶೇಖರ್, ಎಸ್.ಸುರೇಶ್‌ಚಂದ್ರ, ರವಿಶ್ಯಾನುಬೋಗ್, ಲಿಂಗರಾಜು, ಕೆ.ಆರ್.ರೇವಣಸಿದ್ದಪ್ಪ, ಟ.ಎಂ.ರಾಜು, ಜಗದೀಶ್, ಮಲ್ಲೇಗೌಡ, ಬಿ.ವಿ.ದಿನೇಶ್‌ಕುಮಾರ್ ಮತ್ತಿತರರು ಮಾತನಾಡಿದರು. ಶಾಸಕ ಜಿ.ಎಚ್.ಶ್ರೀನಿವಾಸ್ ಅವರನ್ನು ಸನ್ಮಾನಿಸಲಾಯಿತು.
ವಕೀಲರಾದ ಎಸ್.ಸುರೇಶ್‌ಚಂದ್ರ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.