ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಭಾಷಣದಿಂದ ಪರಿಸರ ರಕ್ಷಣೆ ಸಾಧ್ಯವಿಲ್ಲ'

Srinivasa Murthy VN
Updated On : 24 Dec 2013, 10:17 am

ಚಿಕ್ಕಮಗಳೂರು: ಪರಿಸರ, ಭಾಷಣದಿಂದ ಉಳಿಯಲು ಸಾಧ್ಯವಿಲ್ಲ. ಅದನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಉಳಿಸಿಕೊಳ್ಳಲು ಸಾಧ್ಯ ಎಂದು ಕರ್ನಾಟಕ ಮಾಲಿನ್ಯ ನಿಯಂತ್ರಣಾ ಮಂಡಳಿ ಅಧ್ಯಕ್ಷ ಡಾ. ವಾಮನ ಆಚಾರ್ಯ ಕಿವಿ ಮಾತು ಹೇಳಿದ್ದಾರೆ.
ಕರ್ನಾಟಕ ವಿಜ್ಞಾನ ಪರಿಷತ್, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣಾ ಮಂಡಳಿ, ಜಿಲ್ಲಾ ವಿಜ್ಞಾನ ಕೇಂದ್ರ, ಸಾರ್ವಜನಿಕ ಶಿಕ್ಷಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ  ಇಲ್ಲಿನ ಜಿಲ್ಲಾ ಸ್ಕೌಟ್ ಭವನದಲ್ಲಿ ಸೋಮವಾರ ನಡೆದ  ಪರಿಸರ ಮಿತ್ರ ಶಾಲಾ ಪ್ರಶಸ್ತಿ ಕುರಿತು ಶಿಕ್ಷಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಳೆದ ವರ್ಷದಿಂದ ಪರಿಸರ ಮಿತ್ರ ಶಾಲಾ ಪ್ರಶಸ್ತಿಯನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣಾ ಮಂಡಳಿ ರಾಜ್ಯಾದ್ಯಂತ ಕಾರ್ಯಗತಗೊಳಿಸಿದ್ದು, ಮಕ್ಕಳಲ್ಲಿ ಪರಿಸರದ ಬಗ್ಗೆ ಹೆಚ್ಚಿನ ಜ್ಞಾನವನ್ನು ಮೂಡಿಸಲು ಸಹಕಾರಿಯಾಗಿದ್ದು ಉತ್ತಮ ಪ್ರಕ್ರಿಯೆ ಬಂದಿದೆ. ಇದಕ್ಕೆ ಶಿಕ್ಷಕರು ಹಾಗೂ ನಾಗರಿಕರ ಸಹಕಾರಿ ಅತ್ಯಗತ್ಯವೆಂದರು.
ಸ್ವಚ್ಛ ಪರಿಸರ ನಿರ್ಮಿಸಿ: ಅಮೆರಿಕದಲ್ಲಿ ಪ್ರತಿ ಮನೆಗೆ ಎರಡು ಕಾರುಗಳಿವೆ. ಭಾರತ ಹಾಗೂ ಚೀನಾ ಅದೇ ಮಾದರಿಯನ್ನು ಅನುಸರಿಸಿದರೆ ಪ್ರಕೃತಿಯ ಮೇಲೆ ಅಗಾಧವಾದ ಪರಿಣಾಮ ಬೀರಲಿದ್ದು, ಭೂಮಿಗೆ ನಾವು ಎಷ್ಟು ಹತ್ತಿರವಾಗುತ್ತೇವೆಯೋ ಭೂಮಿಯ ಮೇಲೆ ಪ್ರೀತಿ ಬೆಳೆಸಿಕೊಂಡು ಮುಂದಿನ ಸ್ವಚ್ಛ ಪರಿಸರಕ್ಕೆ ಹಾದಿಯಾಗಬೇಕು ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಬಿ.ಎಸ್. ಶೇಖರಪ್ಪ, ನೀರಿನ ಸದ್ಭಳಕೆ ಬಗ್ಗೆ ಹಾಗೂ ಪರಿಸರದ ಬಗ್ಗೆ ಶಿಕ್ಷಣವನ್ನು ಬರಿಯ ಪುಸ್ತಕದಲ್ಲಿ ನೀಡುವುದರ ಬದಲು ಶಿಕ್ಷಕರು ಬದುಕುವ ಶಿಕ್ಷಣ ಕಲಿಸುವುದರ ಕಡೆ ಹೆಚ್ಚು ಆದ್ಯತೆ ನೀಡುವುದು ಒಳಿತೆಂದರು.
550 ಶಾಲೆಗಳ ನೋಂದಾವಣಿ: ಕಾರ್ಯಕ್ರಮದ ಆಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಜಿಲ್ಲಾ ವಿಜ್ಞಾನ ಕೇಂದ್ರದ ಗೌರವಾಧ್ಯಕ್ಷ ಎ.ಎನ್. ಮಹೇಶ್ ಕಳೆದ ವರ್ಷ ಪರಿಸರ ಮಿತ್ರ ಶಾಲಾ ಪ್ರಶಸ್ತಿಗೆ 550 ಶಾಲೆಗಳ ನೋಂದಾಯಿತವಾಗಿದ್ದು ಉತ್ತಮ ಪ್ರಕ್ರಿಯೆ ವ್ಯಕ್ತವಾಗಿದ್ದು, ಕೊಲ್ಲಿಬೈಲಿನ ಸರ್ಕಾರಿ ಶಾಲೆಗೆ ಪ್ರಥಮ ಬಹುಮಾನ ಪಡೆದಿದ್ದು, ಸಂತಸವೆಂದರಲ್ಲದೆ ಇದಕ್ಕಾಗಿ ಸಹಕರಿಸುವಂತೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಲ್ಲಿ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿರಾಜ್ ನಾರಾಯಣ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ದಾಸಪ್ಪ, ಜಿಲ್ಲಾ ವಿಜ್ಞಾನ ಕೇಂದ್ರದ ಮಹಾ ಪೋಷಕ ಎಂ.ಎನ್. ಷಡಕ್ಷರಿ, ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಗೌಡ, ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಗೋಪಾಲಕೃಷ್ಣ, ಸಂಪನ್ಮೂಲ ವ್ಯಕ್ತಿ ಜನಾರ್ಧನ ಹಾಗೂ ಹರಿಪ್ರಸಾದ್, ಟಿ.ಜಿ.ಕೆ. ಅರಸ್, ಪ್ರಾದೇಶಿಕ ಮಾಲಿನ್ಯ ನಿಯಂತ್ರಣಾ ಮಂಡಳಿ ಅಧಿಕಾರಿ ನಾರಾಯಣಸ್ವಾಮಿ ಉಪಸ್ಧಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement