ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಯಡಿಯೂರಪ್ಪರನ್ನು ಸೋಲಿಸಿ: ಮಧು ಬಂಗಾರಪ್ಪ

Srinivasa Murthy VN
Updated On : 17 Feb 2013, 1:46 am

ಶಿರಾಳಕೊಪ್ಪ: ಶಿಕಾರಿಪುರದಲ್ಲಿ ನಮ್ಮ ತಂದೆ ಬಂಗಾರಪ್ಪನವರನ್ನು ಸೋಲಿಸಿದ ಯಡಿಯೂರಪ್ಪನವರನ್ನು ಬರಲಿರುವ ಚುನಾವಣೆಯಲ್ಲಿ ಸೋಲಿಸದಿದ್ದರೆ ನಾನು ನಮ್ಮ ತಂದೆ ಬಂಗಾರಪ್ಪನವರ ಮಗನಾಗಿ ಹುಟ್ಟಿದ್ದು ತಪ್ಪಾಗುತ್ತದೆ ಎಂದು ರಾಜ್ಯ ಯುವ ಜೆಡಿಎಸ್  ಅಧ್ಯಕ್ಷ ಮಧುಬಂಗಾರಪ್ಪ ಹೇಳಿದರು.
ಶಿರಾಳಕೊಪ್ಪ ಪಟ್ಟಣದಲ್ಲಿ ಸರ್ಕಾರ ಸ್ಥಳೀಯ ಸಂಸ್ಥೆಗಳ ಚುನಾವಣೆ ಘೋಷಿಸಿದ ಹಿನ್ನೆಲೆಯಲ್ಲಿ ಚುನಾವಣೆ ಸಿದ್ದತೆಯ ಸಭೆ ಉದ್ದೇಶಿಸಿ ಇಲ್ಲಿಯ ಜೆಡಿಎಸ್ ಕಚೇರಿಯಲ್ಲಿ ಮಾತನಾಡಿ, ಶಿಕಾರಿಪುರದಲ್ಲಿ ಅಡ್ಜಸ್ಟ್‌ಮೆಂಟ್ ರಾಜಕಾರಣವಿದೆ. ಕಾಂಗ್ರೇಸ್ ಪಕ್ಷ ಹೊಂದಾಣಿಕೆಯ ರಾಜಕಾರಣ ಮಾಡುತ್ತಿದೆ. ಸೋಲಿಲ್ಲದ ಸರದಾರನಿಗೆ  ಸೋಲುಕೊಟ್ಟ ಶಿಕಾರಿಪುರದಲ್ಲಿ ಖೆಡ್ಡಾಕ್ಕೆ ಕೆಡವೋಣ ಎಂದರು.
ಹಳ್ಳಿ ಸುತ್ತಾಟ: ಕಳೆದ ನಾಲ್ಕು ವರ್ಷಗಳಿಂದ ಪ್ರವಾಸ ಮಾಡದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಇಂದು  ಜೆಡಿಎಸ್ ಶಿಕಾರಿಪುರ ತಾಲೂಕಲ್ಲಿ ನಿರೀಕ್ಷೆ ಮೀರಿ ಬೆಳೆಯುತ್ತಿರುವದರಿಂದ ಹಳ್ಳಿಯನ್ನು ಮರೆತಿದ್ದ ಅವರು ಹಳ್ಳಿ ಸುತ್ತುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಜೆಡಿಎಸ್ ಅಧ್ಯಕ್ಷ ನಾಗನಗೌಡ ವಹಿಸಿ ಮಾತನಾಡಿದರು. ಪ್ರಾರಂಭದಲ್ಲಿ ಜಿಲ್ಲಾ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ತಡಗಣಿ ಮಂಜಣ್ಣ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಕ್ಷದ ಪ್ರಮುಖರು ಇದ್ದರು. ಕಾರ್ಯಕ್ರಮದಲ್ಲಿ ತೊಗರ್ಸಿ, ಪ್ರಮುಖರು ಜೆಡಿಎಸ್ ಸೇರಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement