ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

'ಮಾತೃ ಭಾಷೆಗೆ ಅವಕಾಶ ನೀಡಿ'

Srinivasa Murthy VN
Updated On : 11 Mar 2013, 2:21 am

ಚಿಕ್ಕಮಗಳೂರು: ರಾಜ್ಯದ ಇತರ ಭಾಗಗಳಲ್ಲಿ ಇರುವ ಪದ್ದತಿಯಂತೆ ಚಿಕ್ಕಮಗಳೂರು- ಹಾಸನ ಧರ್ಮ ಪ್ರಾಂತ್ಯದ ಚರ್ಚ್‌ಗಳಲ್ಲೂ ಕ್ಯಾಥೋಲಿಕ್ ಕೊಂಕಣಿ ಸಮುದಾಯಕ್ಕೆ ತಮ್ಮ ಮಾತೃ ಭಾಷೆಯಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ  ಕಲ್ಪಿಸಬೇಕು ಎಂದು ಕೊಂಕಣಿ ಸಾಹಿತಿ ವಲ್ಲಿ ವಗ್ಗ ಒತ್ತಾಯಿಸಿದ್ದಾರೆ.
ಜಾಗತಿಕ್ ಕೊಂಕಣಿ ಸಂಘಟನ್ ಮತ್ತು ಕ್ಯಾಥೋಲಿಕ್ ಕೊಂಕಣಿ ರಾಕಣ್ ಸಂಚಾಲನ್ ನಗರದ ಕ್ಯಾಥೋಲಿಕ್ ಕ್ಲಬ್‌ನಲ್ಲಿ ಭಾನುವಾರ ಏರ್ಪಡಿಸಿದ್ದ ಕ್ಯಾಥೋಲಿಕ್ ಕೊಂಕಣಿ ಭಾಷಿಗರ ರಾಷ್ಟ್ರೀಯ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಕ್ಯಾಥೋಲಿಕ್ ಕೊಂಕಣಿ ಭಾಷಿಗರು ಚರ್ಚ್‌ಗಳಲ್ಲಿ ತಮ್ಮ ಮಾತೃ ಭಾಷೆಯಲ್ಲಿ ಪ್ರಾರ್ಥನೆ ಸಲ್ಲಿಸುವುದಕ್ಕೆ   ಭಾರತದ ಸಂವಿಧಾನ ಮತ್ತು ದೇಶದ ಚರ್ಚ್ ಸಂವಿಧಾನ ಅವಕಾಶ ನೀಡಿದೆ. ಅದರಂತೆ ರಾಜ್ಯದ ಎಲ್ಲಾ ಭಾಗಗಳ ಚರ್ಚ್‌ಗಳಲ್ಲೂ ಕೊಂಕಣಿ ಭಾಷೆಯಲ್ಲಿ ಪ್ರಾರ್ಥನೆ ಸಲ್ಲಿಸಲಾಗುತ್ತಿದೆ. ಆದರೆ, ಚಿಕ್ಕಮಗಳೂರು -ಹಾಸನ ಧರ್ಮಪ್ರಾಂತ್ಯದ ಚರ್ಚ್‌ಗಳಲ್ಲಿ ಮಾತ್ರ ಅದಕ್ಕೆ ಅವಕಾಶ ನೀಡುತ್ತಿಲ್ಲ ಎಂದು ವಿಷಾದಿಸಿದರು.
ಮಾತನಾಡುವುದು, ಹಾಡುವುದು ಸೇರಿದಂತೆ ತಮ್ಮ ದಿನನಿತ್ಯದ ಎಲ್ಲಾ ವ್ಯವಹಾರಗಳನ್ನೂ ತಮ್ಮ ಮಾತೃ ಭಾಷೆಯಲ್ಲೇ ಮಾಡುತ್ತಿರುವ ಕೊಂಕಣಿ ಭಾಷಿಗರ ಮನಸ್ಸಿಗೆ ಚರ್ಚ್‌ಗಳ ಈ ಧೋರಣೆಯಿಂದಾಗಿ ನೋವಾಗಿದೆ  ಎಂದು ತಿಳಿಸಿದರು.
ನ್ಯಾಯಾಲಯದ ಮೊರೆ: ಈ ಹಿನ್ನೆಲೆಯಲ್ಲಿ ಕ್ಯಾಥೋಲಿಕ್ ಕೊಂಕಣಿ ಭಾಷಿಗರಿಗೆ ತಮ್ಮ ಮಾತೃ ಭಾಷೆಯಲ್ಲೇ ಚರ್ಚ್‌ಗಳಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡುವಂತೆ ಜಾಗತಿಕ್ ಕೊಂಕಣಿ ಸಂಘಟನ್ ವತಿಯಿಂದ ಚಿಕ್ಕಮಗಳೂರು - ಹಾಸನ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಿಗೆ ಮನವಿ ಸಲ್ಲಿಸಲಾಗುವುದು. ಅದಕ್ಕೆ ಸ್ಪಂದಿಸದಿದ್ದಲ್ಲಿ ನ್ಯಾಯಾಲಯದ ಮೊರೆ ಹೋಗುವ ಮೂಲಕ ನ್ಯಾಯ ಪಡೆಯಲಾಗುವುದು ಎಂದು ಹೇಳಿದರು.
ಕ್ಯಾಥೋಲಿಕ್ ಸಮುದಾಯದ ನೂತನ ವೆಬ್‌ಸೈಟನ್ನು ಪತ್ರಕರ್ತ ಗ್ರೇಬಿಯೆಲ್ ವಾಝ್ ಉದ್ಟಾಟಿಸಿದರು. ನಂತರ ನಡೆದ ಗೋಷ್ಠಿಯಲ್ಲಿ ಕೊಂಕಣಿ ಭಾಷಿಗರ ಮತ್ತು ಕೊಂಕಣಿ ಭಾಷೆಯ ದೇಶದ ವಿವಿಧ  ಭಾಗಗಳಲ್ಲಿರುವ ಪ್ರಸ್ತುತ ಸ್ಥಿತಿ ವಿಷಯದ ಕುರಿತು ಪ್ರತಾಪ್ ನಾಯ್ಕ್, ನ್ಯಾಯವಾದಿ ವಿನೋದ್ ಪುಟ್ತಾದೋ,  ಲೇಖಕ ಲಾರೆನ್ಸ್ ಡಿಸೋಜ, ಕವಿ ಆನ್ಸಿ ಪಾಲಡ್ಕಾ, ಗೋವಾದ ಕೊಂಕಣಿ ಅಕಾಡೆಮಿ ಕಾರ್ಯದರ್ಶಿ ಜೋಸ್ ಸಲ್ವಾದೋರ್, ರಾಜು ಉಕ್ಕಿನಡ್ಕ ಮಾತನಾಡಿದರು.
ಜಾಗತಿಕ್ ಕೊಂಕಣಿ ಸಂಘಟನ್ ಕಾರ್ಯದರ್ಶಿ ಎರಿಕ್ ಒಝೇರ್, ಕ್ಯಾಥೋಲಿಕ್ ಕೊಂಕಣಿ ರಾಕಣ್ ಸಂಚಾಲನ್ ಅಧ್ಯಕ್ಷ ಪ್ರಮೋದ್ ಪಿಂಟೊ ಉಪಸ್ಥಿತರಿದ್ದರು. ಆಲ್ವಿನ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು. ಸಿರಿಲ್ ರೆಬೆಲ್ಲೊ ಸ್ವಾಗತಿಸಿ, ರಾಯ್ ಕ್ಯಾಸ್ಟಲಿನೊ ವಂದಿಸಿದರು.  

ಇಂದು ಹಿರೇನಲ್ಲೂರಿನಲ್ಲಿ ಎನ್‌ಎಸ್‌ಎಸ್ ಶಿಬಿರ
ಕಡೂರು: ಕಡೂರು ತಾಲೂಕಿನ ಹಿರೇನಲ್ಲೂರು ಗ್ರಾಮದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಶಿಬಿರದದಲ್ಲಿ ಎಚ್.ಎಂ. ಈಶ್ವರಪ್ಪನವರಿಂದ ಧ್ವಜಾರೋಹಣ ನಡೆಯಲಿದೆ.
ಸಂಜೆ 6 ಗಂಟೆಗೆ ಉಪನ್ಯಾಸ ನಡೆಯಲಿದ್ದು, ಹಿರೇನಲ್ಲೂರು ಗ್ರಾಪಂ ಸದಸ್ಯೆ ಸಿ.ಆರ್. ಸುನೀತಾ ಅಧ್ಯಕ್ಷತೆ ವಹಿಸಲಿದ್ದಾರೆ. ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಿ.ಸಿ. ಸಿದ್ದಪ್ಪ ಹಾಗೂ ತಾಲೂಕು ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ಕನ್ನಡ ಸಂಸ್ಕೃತಿ ಕುರಿತು ಉಪನ್ಯಾಸ ನೀಡಲಿದ್ದಾರೆ. ಗ್ರಾಪಂ ಸದಸ್ಯ ಎಚ್.ಬಿ. ಗಂಗಾಧರ್, ಎಚ್.ಎ. ತಿಮ್ಮಪ್ಪ, ಎಚ್.ಬಿ. ಬಸವರಾಜಪ್ಪ, ಎಚ್.ಜಿ. ಓಂಕಾರಪ್ಪ, ರಾಜೇಂದ್ರ, ಶಿವಕುಮಾರ್ ಮತ್ತು ರವಿಕುಮಾರ್ ಭಾಗಹಿಸಲಿದ್ದಾರೆ.
ನಂತರ  ಹೀರೇನಲ್ಲೂರಿನ ಮಲ್ಲಿಕಾರ್ಜುನ ಸ್ವಾಮಿ ಗ್ರಾಮಾಂತರ ಫ್ರೌಢಶಾಲೆ ಮತ್ತು ಶಿಬಿರಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement