ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕಾಡಾನೆ ದಾಳಿ: ಆತಂಕದಲ್ಲಿ ಗ್ರಾಮಸ್ಥರು

Srinivasa Murthy VN
Updated On : 13 Mar 2013, 10:19 am

ಕ.ಪ್ರ.ವಾರ್ತೆ ಟಿ ಮೂಡಿಗೆರೆ ಟಿ  ಮಾ.12
ತಾಲೂಕಿನ ಬೆಳಗೋಡು ಗ್ರಾಮದಲ್ಲಿ ಕಳೆದ 12 ದಿನಗಳಿಂದ ಆರು ಕಾಡಾನೆಗಳ ಹಿಂಡು ತೋಟಗಳ ಮೇಲೆ ಧಾಳಿ ನಡೆಸುತ್ತಿದ್ದು. ಬೆಳೆಗಾರರು ಆತಂಕಕ್ಕಿಡಾಗಿದ್ದಾರೆ. ಕೂಲಿ ಕಾರ್ಮಿಕರು ತೋಟದ ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿರುವ ಘಟನೆ ವರದಿಯಾಗಿದೆ. ಬೆಳಗೋಡು ಗ್ರಾಮದ ಬಿ.ಇ. ದೇವಣ್ಣಗೌಡ ಮತ್ತು ಬಿ.ಡಿ. ರವಿ ಅವರ ತೋಟಗಳಿಗೆ ಲಗ್ಗೆ ಹಾಕಿರುವ ಕಾಡನೆಗಳ ಹಿಂಡು ಅಡಿಕೆ, ಕಾಫಿ, ಏಲಕ್ಕಿ ಹಾಗೂ ಮೆಣಸನ್ನು ನಾಶ ಪಡಿಸಿವೆ. ಲಕ್ಷಾಂತರ ರೂ ನಷ್ಟ ಉಂಟಾಗಿದೆ ಎಂದು ತೋಟದ ಮಾಲೀಕ ಬಿ.ಡಿ. ರವಿ ಪತ್ರಿಕೆಗೆ ತಿಳಿಸಿದ್ದಾರೆ.
ಕಳೆದ ರಾತ್ರಿ ಮನೆಯ ಮುಂಬಾಗಕ್ಕೆ ಆಗಮಿಸಿದ ಆರು ಆನೆಗಳ ಹಿಂಡು ನೀರಿನ ಪೈಪ್‌ಗಳನ್ನು ತುಳಿದು ಹಾಕಿದೆ. ಮನೆಯ ಎದುರಿನಲ್ಲಿರುವ ಗ್ರಾಮದ ವ್ಯಕ್ತಿಯೋರ್ವರ ತೋಟದ ಮೂರು ಮರಗಳು ಅಪಾಯದಂಚಿನಲ್ಲಿದ್ದು. ಕತ್ತಲೆಯಲ್ಲಿ ಬಂದು ಆನೆಗಳು ಎಳೆದರೆ ಮನೆಯ ಮೇಲೆ ಬೀಳುವುದರೊಂದಿಗೆ ಅಪಾಯ ಸಂಭವಿಸುವ ಸಾಧ್ಯತೆಯಿದ್ದು. ಆನೆಗಳಿಂದ ಶಾಶ್ವತ ಪರಿಹಾರ ಹಾಗೂ ಮರಗಳನ್ನು ತೆರವುಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

'ಆನೆ ಹಾವಳಿ ತಡೆಯುವಲ್ಲಿ ಸರ್ಕಾರ ವಿಫಲ'
ಮೂಡಿಗೆರೆ: ಆನೆಗಳ ಹಾವಳಿ ತಡೆಯುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಆನೆ ಹಾವಳಿಗೆ ತುತ್ತಾದ ಇಬ್ಬರು ಅಂಗವಿಕಲರಾಗಿದ್ದು, ಅವರಿಗೆ ಶಾಶ್ವತ ಪರಿಹಾರ ನೀಡುವಂತೆ ಕಾಫಿ ಮಂಡಳಿಯ ಮಾಜಿ ಉಪಾಧ್ಯಕ್ಷ ಡಿ.ಕೆ. ಉದಯಶಂಕರ್ ಒತ್ತಾಯಿಸಿದ್ದಾರೆ.
ಪತ್ರಿಕೆಯೊಂದಿಗೆ ಮಾತನಾಡಿದ ಅವರು, ತಾಲೂಕಿನಲ್ಲಿ ಆನೆಗಳ ಹಾವಳಿಯಿಂದ ಕೋಟ್ಯಂತರ ರು. ನಷ್ಟ ಉಂಟಾಗುತ್ತಿದೆ. ಆನೆಗಳ ಹಾವಳಿಯಿಂದ ಕಾಫಿ ತೋಟಕ್ಕೆ ಕಾರ್ಮಿಕರು ಬರಲು ಹೆದರುತ್ತಿದ್ದಾರೆ ಎಂದರು.
ಕಾಡಾನೆಗಳ ಹಾವಳಿಯಿಂದ ಸಣ್ಣ ಬೆಳೆಗಾರರು ಮತ್ತು ರೈತಾಪಿ ವರ್ಗ ತತ್ತರಿಸಿದ್ದಾರೆ. ಆನೆಗಳ ಹಾವಳಿಯಿಂದ ಶಾಶ್ವತ ಪರಿಹಾರ ನೀಡುವುದರೊಂದಿಗೆ ಶ್ರೀಲಂಕ ಮಾದರಿಯ ಆನೆ ಪಾರ್ಕ್ ನಿರ್ಮಾಣ ಮಾಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಕಾಫಿ ಮಂಡಲಿ ಸದಸ್ಯ ಪಟ್ಟದೂರಿನ ಪಿ.ಬಿ. ಚಂದ್ರಶೇಖರ್, ಪ್ಲಾಂಟರ್ಸ್ ಬ್ಯಾಂಕ್ ನಿರ್ದೇಶಖ ಉದುಸೆ ಚಂದ್ರೇಗೌಡ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement