ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಮಹಿಳೆ ಮೇಲೆ ನಿಲ್ಲದ ದೌರ್ಜನ್ಯ: ವಿಷಾದ

Srinivasa Murthy VN
Updated On : 13 Mar 2013, 10:19 am

ಕ.ಪ್ರ.ವಾರ್ತೆ ಟಿ ನರಸಿಂಹರಾಜಪುರ ಟಿ  ಮಾ.12
ಮಹಿಳೆಯರು ಅಬಲೆಯರಲ್ಲ, ಸಬಲೆಯರು ಎಂಬುದನ್ನು ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡಿ ತೋರಿಸಿದರೂ ಮಹಿಳೆಯ ಮೇಲೆ ಇಂದಿಗೂ ಲೈಂಗಿಕ ದೌರ್ಜನ್ಯ ಹಾಗೂ ಕೌಟುಂಬಿಕ ದೌರ್ಜನ್ಯ ಮಾತ್ರ ನಿಂತಿಲ್ಲ ಎಂದು ವಕೀಲೆ ಎಂ.ಸಿ. ಸುಮಾ ವಿಷಾದ ವ್ಯಕ್ತಪಡಿಸಿದರು.
ಅವರು ಮಂಗಳವಾರ ಸೋಷಿಯಲ್ ವೆಲ್‌ಫೇರ್ ಸೊಸೈಟಿ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸೋಷಿಯಲ್ ವೆಲ್‌ಫೇರ್ ಸೊಸೈಟಿ, ಕಾನೂನು ಸೇವಾ ಪ್ರಾಧಿಕಾರ ಹಾಗೂ ಸಿಂಸೆಯ ಸಿಎಂಎಸ್‌ಎಸ್‌ಎಸ್ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ನಡೆದ ಅಂತರ ರಾಷ್ಟೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.
ಸಮಾಜದಲ್ಲಿ ನೈತಿಕ ಮಟ್ಟ ಕುಸಿದಿರುವುದರಿಂದಲೇ ಮಹಿಳೆಯ ಮೇಲೆ ಅತ್ಯಾಚಾರ, ಲೈಂಗಿಕ ಕಿರುಕುಳ ಜಾಸ್ತಿಯಾಗುತ್ತಿದೆ. ಮಹಿಳೆಯರನ್ನು ಕಂಡಾಗ ಮಾತೃಭಾವ ಮೂಡಿದಾಗ ಮಾತ್ರ ಲೈಂಗಿಕ ಕಿರುಕುಳ ಕಡಿಮೆಯಾಗಬಹುದು. ಅನೇಕ ಸಂದರ್ಭ ಮಹಿಳೆಯರಿಗೆ ಮಹಿಳೆಯರೇ ಶತ್ರುಗಳಾಗುತ್ತಿದ್ದಾರೆ. ಹಿಂದೆ ಅವಿಭಕ್ತ ಕುಟಂಬ ಇತ್ತು. ಈಗ ಕುಟುಂಬಗಳು ಸಣ್ಣಗಾಗಿದೆ. ಮಕ್ಕಳಿಗೆ ಸಹೋದರ, ಸಹೋದರಿಯರ ಪ್ರೀತಿಯೇ ಗೊತ್ತಾಗುತ್ತಿಲ್ಲ. ಸಾಮಾಜಿಕ ಪರಿವರ್ತನೆಯೇ ಈ ಸಮಸ್ಯೆಗೆ ಪರಿಹಾರವಾಗಬಹುದು ಎಂದರು.
ಹೊಂದಾಣಿಕೆ ಇರಲಿ: ಮಹಿಳೆಯರು ಸಮಾನತೆಗಾಗಿ ಹೋರಾಟ ಮಾಡಲಿ. ಆದರೆ, ಸಂಸಾರದಲ್ಲಿ ಸಣ್ಣ ಹೊಂದಾಣಿಕೆ ಇರಲಿ. ಇತ್ತೀಚಿನ ದಿನಗಳಲ್ಲಿ ಮದುವೆಯಾಗಿ 3 ತಿಂಗಳಿಗೆ ಡೈವೋರ್ಸ್‌ಗೆ ಅರ್ಜಿ ಸಲ್ಲಿಸುತ್ತಾರೆ. ಇದರಿಂದ  ಕೌಟುಂಬಿಕ ಸಮಸ್ಯೆ ಜಾಸ್ತಿಯಾಗುತ್ತದೆ. ದಂಪತಿಗಳು ಪರಸ್ಪರ ಹೊಂದಾಣಿಕೆ ಮಾಡಿಕೊಂಡು ಬದುಕಬೇಕು ಎಂದು ಕಿವಿಮಾತು ಹೇಳಿದರು.
ಸಮಾರಂಭವನ್ನು ಉದ್ಘಾಟಿಸಿದ ಜಿಲ್ಲಾ ಪಂಚಾಯ್ತಿ ಸದಸ್ಯೆ ಸುಜಾತಾ ಮಾತನಾಡಿ, ಮಹಿಳೆಯರು ಹಾಗೂ ವಿದ್ಯಾರ್ಥಿಯರು ತಮ್ಮ ಉಡುಪುಗಳ ಬಗ್ಗೆ ಜಾಗೃತೆ ವಹಿಸಬೇಕು. ಇತಿಹಾಸದಲ್ಲಿ ಮಹಿಳೆಯರು ಸಭ್ಯ ಉಡುಪು ಧರಿಸುತ್ತಿದ್ದರು. ಇದರಿಂದ ಸಹಜವಾಗೇ ಮಹಿಳೆಯರನ್ನು ಗೌರವ ಭಾವದಿಂದ ಕಾಣಲಾಗುತ್ತಿತ್ತು ಎಂದರು.
ಕಾವಲು ಸಮಿತಿ: ಶಿಶು ಅಭಿವೃದ್ಧಿ ಯೋಜನಾಧಿಕಾರಿ ಜ್ಯೋತಿಲಕ್ಷ್ಮಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ತ್ರೀ ಭ್ರೂಣ ಹತ್ಯೆಯಿಂದ  ಗಂಡು ಮತ್ತು ಹೆಣ್ಣಿನ ನಡುವೆ ಅನುಪಾತ ಉಂಟಾಗುತ್ತಿದೆ. ಮಹಿಳೆಯರ ಸಂಖ್ಯೆ ಕುಸಿಯುತ್ತಿದೆ. ಮಹಿಳೆಯರನ್ನು ಸಾಗಾಣಿಕೆ ಮಾಡಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ತಾಲೂಕು ಮಟ್ಟ ಹಾಗೂ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಮಹಿಳೆ ಮತ್ತು ಮಕ್ಕಳ ಸಾಗಾಣಿಕೆ ತಡೆ ಕಾವಲು ಸಮಿತಿ ರಚನೆಯಾಗಿದೆ. ಮಹಿಳೆಯರ ಮೇಲೆ ದೌರ್ಜನ್ಯ ಆದಾಗ ಕಾವಲು ಸಮಿತಿ ಅವರ ನೆರವಿಗೆ ಬರಬೇಕು. ಮಹಿಳೆಯರು ಸ್ವ ರಕ್ಷಣಾ ತಂತ್ರವನ್ನು ಸಹ ಕಲಿತಿರಬೇಕು ಎಂದು ಸಲಹೆ ನೀಡಿದರು.  
ಜಯಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಅ ಸಂತೋಷ್‌ಕುಮಾರ್, ಪೌಲ್‌ಚೆರಿಯನ್, ಸೇವಾ ಸಂಸ್ಥೆಯ ಸುಲೋಚನಾ, ದೊನ್ಸಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement