ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಪಾಕ್ ನಿರ್ಲಕ್ಷ್ಯದಿಂದ ಸರಬ್ಜಿತ್ ಸಿಂಗ್ ಸಾವು: ಎಬಿವಿಪಿ

Srinivasa Murthy VN
Updated On : 3 May 2013, 12:14 pm

ಶಿವಮೊಗ್ಗ: ಪಾಕಿಸ್ತಾನದ ಜೈಲಿನಲ್ಲಿ ಸಹ ಖೈದಿಗಳಿಂದ ಹಲ್ಲೆಗೊಳಗಾಗಿ ಮೃತಪಟ್ಟ ಭಾರತದ ಸರಬ್ಜಿತ್ ಸಿಂಗ್ ಸಾವಿಗೆ ಪಾಕಿಸ್ತಾನ ಸರ್ಕಾರವೇ ನೇರ ಕಾರಣ ಎಂದು ಎಬಿವಿಪಿ ಆರೋಪಿಸಿದೆ.
 ಸರಬ್ಜಿತ್ ಬದುಕು- ಸಾವಿನ ಮಧ್ಯೆ ಹೋರಾಡುತ್ತಿದ್ದ ಸಂದರ್ಭದಲ್ಲಿ ಪಾಕಿಸ್ತಾನ ಸರ್ಕಾರ ಚಿಕಿತ್ಸೆ ನೀಡುವಲ್ಲಿ ನಿರ್ಲಕ್ಷ್ಯ ವಹಿಸಿತು. ಇದೇ ಸಾವಿಗೆ ಕಾರಣವಾಯಿತು, ಇದನ್ನು ಎಬಿವಿಪಿ ಖಂಡಿಸುತ್ತದೆ ಎಂದು ಸಂಘಟನೆಯ ಮುಖಂಡ ರಮೇಶ್ ತಿಳಿಸಿದ್ದಾರೆ.
 ಕೇಂದ್ರ ಸರ್ಕಾರ ಪಾಕಿಸ್ತಾನದಿಂದ ಸರಬ್ಜಿತ್ ಅವರನ್ನು ವಾಪಸ್ ಕರೆಸಿಕೊಳ್ಳುವಲ್ಲಿ ವಿಫಲವಾಗಿದೆ ಹಾಗೂ ದೃಢ ನಿರ್ಧಾರ ತೆಗೆದುಕೊಳ್ಳದೇ, ವಿಳಂಬ ನೀತಿ ಅನುಸರಿಸಿದ್ದೇ ಈ ಘಟನೆಗೆ ಕಾರಣ. ಕೇಂದ್ರ ಸರ್ಕಾರ ತಕ್ಷಣ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿ ಈ ದುಷ್ಕೃತ್ಯದಲ್ಲಿ ಭಾಗಿಯಾದ ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಅವರ ಮೇಲೆ ಕಠಿಣ ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ದಿಟ್ಟ ಉತ್ತರ ನೀಡಬೇಕೆಂದು ಎಬಿವಿಪಿ ಒತ್ತಾಯಿಸಿದೆ.
 ದೇಶದ ಪ್ರಧಾನಮಂತ್ರಿ ಮನಮೋಹನ್‌ಸಿಂಗ್ ಹಾಗೂ ವಿದೇಶಾಂಗ ವ್ಯವಹಾರಗಳ ಖಾತೆಯವರು ಎಚ್ಚೆತ್ತು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಪಾಕಿಸ್ತಾನದ ಜೊತೆ ಯಾವುದೇ ರಾಜತಾಂತ್ರಿಕ, ವ್ಯವಹಾರಿಕ ಸಂಬಂಧ ಮಾಡದೇ ತಕ್ಷಣ ಕಡಿತಗೊಳಿಸಬೇಕು. ಪಾಕಿಸ್ತಾನದ ಈ ಹೇಡಿ ದುಷ್ಕೃತ್ಯಕ್ಕೆ ತಕ್ಕ ಉತ್ತರ ನೀಡಬೇಕೆಂದು ರಾಜ್ಯ ಕಾರ್ಯದರ್ಶಿ ರಮೇಶ್ ತಿಳಿಸಿದ್ದಾರೆ.
 ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಸರಬ್ಜಿತ್‌ಸಿಂಗ್ ಕುಟುಂಬಕ್ಕೆ ನೆರವು ನೀಡಬೇಕೆಂದು ಎಬಿವಿಪಿ ಆಗ್ರಹಿಸುತ್ತದೆ. ಎಬಿವಿಪಿ ಪರವಾಗಿ  ಸರಬ್ಜಿತ್‌ಸಿಂಗ್ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಹಾಗೂ ಅವರ ಕುಟುಂಬಕ್ಕೆ ದುಖಃವನ್ನು ಭರಿಸುವ ಶಕ್ತಿಯನ್ನು ನೀಡಲೆಂದು ಪ್ರಾರ್ಥಿಸುತ್ತದೆ ಎಂದು ರಮೇಶ್ ಹೇಳಿದ್ದಾರೆ.

ಸಮರ್ಪಕ ದಾಖಲೆ ಒದಗಿಸದ ಅಭ್ಯರ್ಥಿ ಬಗ್ಗೆ ದಾಖಲೆ
ಮೂಡಿಗೆರೆ: ಬಿಜೆಪಿ ಅಭ್ಯರ್ಥಿಯೋರ್ವರು ನಾಮಪತ್ರ ಸಲ್ಲಿಕೆ ವೇಳೆ ಸಮರ್ಪಕ ದಾಖಲೆ ಒದಗಿಸದಿರುವ ಕುರಿತು ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾಧಿಕಾರಿ ಕಚೇರಿಯಿಂದ ಸೂಕ್ತ ಪ್ರತಿಕ್ರಿಯೆ ದೊರೆತಿದೆ ಎಂದು ಪತ್ರಕರ್ತ ಸುಂದರ ಬಂಗೇರ ತಿಳಿಸಿದ್ದಾರೆ.
 ಗುರುವಾರ ಈ ಬಗ್ಗೆ ಹೇಳಿಕೆ ನೀಡಿದ್ದು, ಮೂಡಿಗೆರೆ (ಮೀಸಲು) ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ಎಂ.ಪಿ. ಕುಮಾರಸ್ವಾಮಿ ನಾಮಪತ್ರ ಸಲ್ಲಿಸುವಾಗ ಘೋಷಣಾ ಪತ್ರದಲ್ಲಿ ಅವರ ಅವಲಂಬಿತರಾಗಿರುವ ತಾಯಿ ಬಿಳುಗಮ್ಮರವರ ಒಟ್ಟು ಆಸ್ತಿಯ ಪ್ರಮಾಣ ಮತ್ತು ಮೌಲ್ಯವನ್ನು ದಾಖಲಿಸದಿರುವ ಹಿನ್ನೆಲೆಯಲ್ಲಿ ಸೂಕ್ತ ತನಿಖೆ ನಡೆಸಿ ಕ್ರಮ ಜರುಗಿಸುವಂತೆ ಕೇಂದ್ರ ಮತ್ತು ರಾಜ್ಯ ಚುನಾವಣಾ ಆಯೋಗಕ್ಕೆ ಲಿಖಿತ ದೂರು ನೀಡಿದ್ದಾಗಿ ಹೇಳಿದ್ದಾರೆ.
 ದೂರಿನ ಕುರಿತು ಸ್ಥಳೀಯ ಚುನಾವಣಾಧಿಕಾರಿಗಳು ಅಫಿಡವಿಟ್‌ನಲ್ಲಿ ದೂರು ನೀಡುವಂತೆ ಹಿಂಬರಹ ನೀಡಿದ್ದರಾದರೂ, ಉಪಚುನಾವಣಾಧಿಕಾರಿಗಳು ಹಾಗೂ ಪದನಿಮಿತ್ತ ಸರ್ಕಾರದ ಉಪಕಾರ್ಯದರ್ಶಿ ಪಿ.ಟಿ. ಕುಲಕರ್ಣಿಯವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಬಿಜೆಪಿ ಅಭ್ಯರ್ಥಿ ಎಂ.ಪಿ. ಕುಮಾರಸ್ವಾಮಿಯವರ ಬಗ್ಗೆ ನಿಯಮಾನುಸಾರ ಪರಿಶೀಲನೆ ನಡೆಸುವಂತೆ ಚಿಕ್ಕಮಗಳೂರು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿರುವ ಬಗ್ಗೆ ಲಿಖಿತ ಮಾಹಿತಿ ನೀಡಿರುವುದಾಗಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement