ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಸ್ವಾವಲಂಬಿ ಬದುಕಿಗೆ ಕೆಜೆಪಿ

Srinivasa Murthy VN
Updated On : 3 May 2013, 12:13 pm

ಕಾಂಗ್ರೆಸ್, ಜೆಡಿಎಸ್‌ನಿಂದ ಹಲವರು ಕೆಜೆಪಿ ಸೇರ್ಪಡೆ
ಕಡೂರು: ಕ್ಷೇತ್ರದ ಜನ ಸ್ವಾವಲಂಬಿ ಮತ್ತು ನೆಮ್ಮದಿಯ ಬದುಕು ಕಂಡುಕೊಳ್ಳಲು ಎಲ್ಲಾ ಸಮುದಾಯದ ಮತದಾರರು ಕೆಜೆಪಿಯತ್ತ ಒಲವು ತೋರಿಸುವ ಮೂಲಕ ನನ್ನ ಗೆಲವಿಗೆ ಬೆಂಬಲಿಸುತ್ತಿದ್ದಾರೆ ಎಂದು ಕೆಜೆಪಿ ಅಭ್ಯರ್ಥಿ ಬೆಳ್ಳಿ ಪ್ರಕಾಶ್ ಹೇಳಿದರು.     
 ಅವರು ಕಡೂರು ಪಟ್ಟಣದಲ್ಲಿ ಕಾಂಗ್ರೆಸ್, ಜೆಡಿಎಸ್‌ನಿಂದ ಕೆಜೆಪಿಗೆ ಸೇರ್ಪಡೆಯಾದ ವಿವಿಧ ಮುಖಂಡರು ಹಾಗು ಕಾರ್ಯಕರ್ತರಿಗೆ ಬಾವುಟ ನೀಡಿ ಕೆಜೆಪಿಗೆ ಬರಮಾಡಿಕೊಂಡು ಮಾತನಾಡಿದರು.
   ಕೇವಲ ಎರಡು ತಿಂಗಳಲ್ಲಿ ರಾಜ್ಯದಲ್ಲಿ ಹುಟ್ಟಿದ ಕೆಜೆಪಿಗೆ ಎಲ್ಲಾ ಸಮುದಾಯದ ಜನ ಸೇರ್ಪಡೆಯಾಗುವ ಮೂಲಕ ಹಿಂದಿನ ಯಾವ ರಾಜಕೀಯ ಪಕ್ಷಕ್ಕೂ ಸಿಗದ ಈ ಮಟ್ಟದ ಪ್ರತಿಕ್ರಿಯೆ ಸಿಗಲು ಕಾರಣರಾಗಿದ್ದಾರೆ.  ಹಿಂದುಳಿದವರು, ಅಲ್ಪಸಂಖ್ಯಾತರು, ಪರಿಶಿಷ್ಟ ವರ್ಗ, ಪಂಗಡದವರು ಸೇರಿದಂತೆ ಎಲ್ಲರೂ ಕೆಜೆಪಿಗೆ ಸೇರ್ಪಡೆಯಾಗಿದ್ದು, ಇಂದು ಪಕ್ಷ ಆಲದ ಮರದಂತೆ ಬೆಳೆದಿದೆ ಎಂದರು.
 ಆಭಾರಿ: ಕಡೂರು ಕ್ಷೇತ್ರದಲ್ಲಿ ಎಲ್ಲ ಸಮುದಾಯದ ಮತದಾರರು ಜಾತಿ, ಮತಭೇದ ಮರೆತು ನನಗೆ ಬೆಂಬಲಿಸುತ್ತಿರುವುದಕ್ಕೆ ನಾನು ಆಭಾರಿಯಾಗಿದ್ದೇನೆ. ಮತದಾರರು ಬೆಳ್ಳಿ ಪ್ರಕಾಶ್‌ಗೆ ಮತನೀಡುವ ಮೂಲಕ ಕೆಜೆಪಿ ಪಕ್ಷವನ್ನು ಗೆಲ್ಲಿಸಿ ಕ್ಷೇತ್ರದ ಜನಸಾಮಾನ್ಯರ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
  ಕೆಜೆಪಿ ಮುಖಂಡ ಎಚ್.ಎಂ. ರೇವಣ್ಣಯ್ಯ, ಶಾಮಿಯಾನ ಚಂದ್ರು, ಸಿ. ಸುರೇಶ್, ಓಂಕಾರ್, ಮಂಜುನಾಥ್,ನಟರಾದ್, ಎಂ.ಎಂ. ಪುಟ್ಟಸ್ವಾಮಿ, ಶಿವಕುಮಾರ್, ಶಿವು, ಮಹೇಶ್, ಮಲ್ಲೇಶ್, ಹರೀಶ್ ಮೊದಲಾದವರು  ಉಪಸ್ಥಿತರಿದ್ದರು.

ಕಾಂಗ್ರೆಸ್, ಜೆಡಿಎಸ್‌ಗೆ ತಕ್ಕ ಪಾಠ
ಕ.ಪ್ರ.ವಾರ್ತೆ, ಶೃಂಗೇರಿ, ಮೇ.2 ಕ್ಷೇತ್ರದಲ್ಲಿ ಕಾಂಗ್ರೆಸ್, ಜೆಡಿಎಸ್ ಅಪಪ್ರಚಾರ, ಆರೋಪಗಳಲ್ಲಿ ತೊಡಗಿದ್ದು, ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಅವೆರಡು ಪಕ್ಷಕ್ಕೂ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ತಿಳಿಸಿದರು.
 ಅವರು ಗುರುವಾರ ಪಟ್ಟಣದಲ್ಲಿ ಬಹಿರಂಗ ಚುನಾವಣಾ ಸಭೆ ಉದ್ದೇಶಿಸಿ ಮಾತನಾಡಿದರು.
   ಈಗಾಗಲೇ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ. ನನ್ನ ವೈಯಕ್ತಿಕ ಸಾಧನೆಗಳೆಂದು ಹೇಳಿಲ್ಲ. ಶಾಸಕನಾಗಿ, ಸಚಿವನಾಗಿ ನನ್ನ ಕರ್ತವ್ಯ ನಿರ್ವಹಿಸಿದ್ದೇನೆ. ಜನರ ಪ್ರತಿನಿಧಿಯಾಗಿ ಕೆಲಸ  ಮಾಡಿದ್ದೇನೆ. ಕಾಂಗ್ರೆಸ್, ಜೆಡಿಎಸ್ ಇಲ್ಲ ಸಲ್ಲದ ಆರೋಪ ಹೊರಿಸಿ ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂದರು.
 ಅಭಿವೃದ್ಧಿ ಕಾರ್ಯ: ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ನಡೆದಿವೆ. ಜನರು ಅಭಿವೃದ್ಧಿಗೆ ಮತ ನೀಡುತ್ತಾರೆ. ತಾನು ಬ್ರಾಹ್ಮಣ ಸಮುದಾಯದವರನ್ನು ಅವಹೇಳನ ಮಾಡಿಲ್ಲ. ಇದು ನನ್ನ ವಿರುದ್ಧ ಮಾಡುತ್ತಿರುವ ಅಪಪ್ರಚಾರವಾಗಿದೆ. ಜನರು ಇಂತಹ ಅಪಪ್ರಚಾರಗಳಿಗೆ ಕಿವಿಗೊಡಬಾರದು. ಈ ಬಾರಿ ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
 ತಾಲೂಕು ಬಿಜೆಪಿ ಅಧ್ಯಕ್ಷ ನಯನ, ಜಿಪಂ ಮಾಜಿ ಉಪಾಧ್ಯಕ್ಷ ಮಾವಿನಕಾಡು ರಂಗನಾಥ್, ಪರಾಶರ,ಅರುಣ್ ಕುಮಾರ್, ಡಿ.ಸಿ. ಶಂಕರಪ್ಪ ಮೊದಲಾದರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ನಂತರ ಪಟ್ಟಣದಲ್ಲಿ ಮನೆ ಮನೆಗೆ ತೆರಳಿ ಮತ ಯಾಚನೆ ಮಾಡಲಾಯುತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement