ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ವಿವೇಕ, ಲೋಕಜ್ಞಾನ ಮೂಡಿಸುತ್ತದೆ

Srinivasa Murthy VN
Updated On : 14 May 2013, 11:41 am

ಶಿವಮೊಗ್ಗ:  ಭಾರತದ ವೈವಿದ್ಯತೆಯಲ್ಲಿ ಭಾಷೆಯೂ ಒಂದು. ಭಾಷೆ ಸಂವಾದಕ್ಕೆ ಮಾತ್ರವಿದೆ ಎನ್ನುವ ತಪ್ಪು ತಿಳುವಳಿಕೆ ಮೂಡಿಸುವ, ಭಾಷೆಯ ಬಗ್ಗೆ ಅಪಕಲ್ಪನೆ ಬರುವಂತೆ ಮಾಡುವ ಪ್ರಯತ್ನಗಳು ನಿರಂತರ ನಡೆದುಬಂದಿದೆ. ಅದು ಸರಿಯಲ್ಲ, ಭಾಷೆ ವಿವೇಕ, ಲೋಕಜ್ಞಾನ, ತಿಳುವಳಿಕೆ ಮೂಡಿಸುವ ಕಾರ್ಯಮಾಡುತ್ತದೆ ಕನ್ನಡ ಪ್ರಾಧ್ಯಾಪಕ, ಚಿಂತಕ ಡಾ. ಎಚ್.ಟಿ. ಕೃಷ್ಣಮೂರ್ತಿ ಹೇಳಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತು ಸಂಸ್ಥಾಪನಾ ದಿನಾಚರಣಾ ಅಂಗವಾಗಿ ಪರಿಷತ್ತು ನಡೆದುಬಂದ ದಾರಿಯ ಅವಲೋಕನ ಮತ್ತು ಸಂಕಲ್ಪ ದಿನ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಉಪನ್ಯಾಸ ನೀಡಿದರು. ಕುಮಾರವ್ಯಾಸನ ಕನ್ನಡದ ಮಹಾಭಾರತವನ್ನು ಉದಾಹರಿಸಿದ ಅವರು, ಅಭಿಮನ್ಯುವಿನ ಸಾವಿನ ವಿಚಾರವನ್ನು ಹೇಳುವ ಪರಿ ಬೇರೆಲ್ಲೂ ಸಿಗೊಲ್ಲ. ಆದರೆ ನಮ್ಮ ವಿದ್ವಾಂಸರು ಕೆಲವರು ಕನ್ನಡದಲ್ಲಿ ಹೇಳಿದ್ದೆಲ್ಲ ಮೊದಲೇ ಸಂಸ್ಕೃತದಲ್ಲಿ ಹೇಳಿದೆ ಎಂದು ತಪ್ಪಾಗಿ ಹೇಳುತ್ತಾರೆ. ಆದರೆ ಹಾಗೆ ಆಗೊಲ್ಲ. ಭಾಷಾಂತರದ ಸಂದರ್ಭದಲ್ಲೆ ಹೊಸ ಹೊಸ ಆಲೋಚನೆಗಳು, ಸನ್ನಿವೇಶಗಳು ರೂಪಗೊಳ್ಳುತ್ತವೆ ಎಂದರು.
ಭಾಷಾ ಕುಶಲತೆ ಮಾನವನ ಮೆದುಳಿನಲ್ಲಿ ಅಂತಸ್ಥವಾಗಿರುತ್ತದೆ ಎಂದರು.

ಇಂದು ಪ್ರಾತ್ಯಕ್ಷಿಕೆ
ಶಿವಮೊಗ್ಗ: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸಾಕಷ್ಟು ತಾಂತ್ರಿಕ ದೋಷಗಳಿದ್ದು, ಚುನಾವಣಾ ಆಯೋಗ ನಿವಾರಿಸುವಲ್ಲಿ ವಿಫಲವಾಗಿದೆ. ಈ ಬಗ್ಗೆ ಮಂಗಳವಾರ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟಪತಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಿವಮೊಗ್ಗ ನಗರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಸೈಯದ್ ತಿಳಿಸಿದ್ದಾರೆ. ಅವರು ಸೋಮವಾರ ಕನ್ನಡಪ್ರಭದೊಂದಿಗೆ ಮಾತನಾಡಿ, ಕಳೆದ 2 ಚುನಾವಣೆಗಳಿಂದ ಮತಚಲಾವಣೆಗೆ ಬಳಸುತ್ತಿರುವ ಎಲೆಕ್ಟ್ರಾನಿಂಕ್ ಓಟಿಂಗ್ ಮಷಿನ್‌ನಲ್ಲಿ ಸಾಕಷ್ಟು ತಾಂತ್ರಿಕ ಸಮಸ್ಯೆಗಳಿವೆ. ಒಬ್ಬ ಅಭ್ಯರ್ಥಿಗೆ ಬಂದಂತಹ ಮತಗಳನ್ನು ಮತ್ತೊಬ್ಬ ಅಭ್ಯರ್ಥಿಗೆ ರವಾನೆಯಾಗುವಂತಹ ಸಾಧ್ಯಗಳಿರುತ್ತವೆ. ಇದನ್ನು ಚುನಾವಣಾ ಆಯೋಗ ಕಂಡು ಹಿಡಿಯಬೇಕಿದೆ ಎಂದು ಒತ್ತಾಯಿಸಿದರು.

ಪಟಾಕಿ ಸಿಡಿಸಿ ಸಂಭ್ರಮ
ಶೃಂಗೇರಿ: ಪಟ್ಟಣದಲ್ಲಿ ಸೋಮವಾರ ಸಿದ್ದರಾಮಯ್ಯ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಕಾಂಗ್ರೇಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮ ಆಚರಿಸಿದರು. ಪಟ್ಟಣದ ಪ್ರಮುಖ ರಸ್ತೆಗಳು ಸೇರಿದಂತೆ ಗ್ರಾಮೀಣ ಪ್ರದೇಶದ ಕೆಲವೆಡೆ ಕಾರ್ಯಕರ್ತರು ಪಟಾಕಿ ಸಿಡಿಸಿ ಘೋಷಣೆ ಕೂಗಿ ಸಂಭ್ರಮ ಆಚರಿಸಿದರು.

23 ರಂದು ಕಳಸ ಸ್ಥಾಪನೆ
ತರೀಕೆರೆ: ಗ್ರಾಮ ದೇವತೆ ಸಾಲುಮರದಮ್ಮನವರ ದೇವಸ್ಥಾನ ಸಮಿತಿ ತರೀಕೆರೆ ವತಿಯಿಂದ ಮೇ 23 ರಂದು ಬೆಳಗ್ಗೆ 11 ಗಂಟಗೆ ದೇವಸ್ಥಾನದ ಆವರಣದಲ್ಲಿ ನೂತನವಾಗಿ ನಿರ್ಮಾಣವಾಗಿರುವ ವಿಮಾನ ಗೋಪುರ ಕಳಸ ಪ್ರತಿಷ್ಠಾಪನಾ ಸಮಾರಂಭವನ್ನು ಏರ್ಪಡಿಸಲಾಗಿದೆ.  ಗುರುವಾರ ಪ್ರಾತ-ಕಾಲ 5-30ರಿಂದ ಲೋಕಕಲ್ಯಾಣಾರ್ಥ ದೈವಾನುಗ್ರಹ ಮಹಾಸಂಕಲ್ಪ, ಕಲಾ ಹೋಮ ದುರ್ಗಾಹೋಮ, ಪುರುಷಸೂಕ್ತ ಹೋಮ, ಶ್ರೀಸೂಕ್ತ ಹೋಮ ಏರ್ಪಡಿಸಲಾಗಿದೆ. ಹಣ್ಣೇ ಶ್ರೀಶೈಲ ಶಾಖಾ ಮಠ ಶಿವಾನಂದ ಶಿವಾಚಾರ್ಯ ಶ್ರೀ ನೂತನ ವಿಮಾನ ಗೋಪುರ ಉದ್ಘಾಟನೆ ಹಾಗೂ ಕಳಶ ಸ್ಥಾಪನೆ  ನೆರವೇರಿಸಲಿದ್ದಾರೆ. ಸಾಲುಮರಮ್ಮನವರ ದೇವಸ್ಥಾನದ ಮಾಜಿ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಖಚಾಂಚಿಗಳು ಹಾಗೂ  ದೇವಸ್ಥಾನಕ್ಕೆ ಭೂದಾನ ಮಾಡಿದ ಮಹನೀಯರನ್ನು ಅಂದಿನ ಸಮಾರಂಭದಲ್ಲಿ ಸನ್ಮಾನಿಸಲಾಗುವುದು ಎಂದು ದೇವಸ್ಥಾನದ ಸಮಿತಿ ಅಧ್ಯಕ್ಷರು ಎಂ. ಮಂಜುನಾಥ್ ತಿಳಿಸಿದ್ದಾರೆ.  

ರಾಯರ ಮಠದಲ್ಲಿ ವಿಶೇಷ ಪೂಜೆ
ಶಿಕಾರಿಪುರ: ಹಿಂದೂ ಧಾರ್ಮಿಕ ಪದ್ಧತಿಯಲ್ಲಿ ಅತ್ಯಂತ ಶ್ರೇಷ್ಠವಾದ ಅಕ್ಷಯ ತೃತೀಯ ಅಂಗವಾಗಿ ಸೋಮವಾರ ಪಟ್ಟಣದ ಶ್ರೀ ಹುಚ್ಚೂರಾಯಸ್ವಾಮಿ ಕೆರೆಯ ದಡದಲ್ಲಿರುವ ನಂಜನಗೂಡು ಶಾಖಾ ಮಠದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳು ನೆರವೇರಿದವು. ಅಲ್ಪಸಂಖ್ಯಾತ ಭಕ್ತರು ಶ್ರೀ ಮಠಕ್ಕೆ ಧಾವಿಸಿ ರಾಯರ ದರ್ಶನ ಪಡೆದು ಪುನೀತರಾದರು. ಅಕ್ಷಯ ತೃತೀಯ ಅಂಗವಾಗಿ ಪ್ರಾತಃಕಾಲದಲ್ಲಿ ರಾಯರ ವೃಂದಾವನಕ್ಕೆ ನೈರ್ಮಲ್ಯ ಪೂಜೆ, ಅಷ್ಟೋತ್ತರ ಸಹಿತ ಅರ್ಚನೆ, ಪಂಚಾಮೃತ ಅಭಿಷೇಕ,ಶ್ರೀಗಂಧ ಲೇಪನದಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು.  ಧಾರ್ಮಿಕ ಕಾರ್ಯದ ನಂತರದಲ್ಲಿ ಸಂಜೆ ಸ್ವಸ್ತಿ ವಾಚನ ಉಪನ್ಯಾಸವು ಪಂಡಿತ ವಾದಿರಾಜಾಚಾರ್ಯರವರಿಂದ ನಡೆಯಿತು.

ಶೃಂಗೇರಿ ಸುತ್ತಮುತ್ತ ಧಾರಾಕಾರ ಮಳೆ
ಶೃಂಗೇರಿ: ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದ ಕೆಲವೆಡೆ ಭಾನುವಾರ ಭಾನುವಾರ ಸಂಜೆ ಗುಡುಗು ಸಹಿತ ಧಾರಾಕರ ಮಳೆ ಸುರಿಯಿತು. ಬೆಳಿಗ್ಗೆಯಿಂದ ಉರಿ ಬಿಸಿಲ ವಾತಾವರಣ ಉಂಟಾಗಿತ್ತು. ಕಳೆದ ಕೆಲದಿನಗಳಿಂದ ಬಿಸಿಲು ಉಂಟಾಗಿತ್ತು. ಭಾನುವಾರದ ಮಳೆ ತಂಪೆರೆದು ಹೋಯಿತು.

ಶಾಸಕರಿಗೆ ಅಭಿನಂದನೆ
ಶಿವಮೊಗ್ಗ: ಶಿವಮೊಗ್ಗ ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘ ಶಿವಮೊಗ್ಗದ ನೂತನ ಶಾಸಕ ಕೆ.ಬಿ. ಪ್ರಸನ್ನ ಕುಮಾರ್ ಅವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿತು.  ಈ ಸಂದರ್ಭದಲ್ಲಿ ಎಕೆಬಿಎಂಎಸ್ ಸಂಘಟನಾ ಕಾರ್ಯದರ್ಶಿ ಮ.ಸ. ನಂಜುಂಡಸ್ವಾಮಿ, ಸಂಘದ ಅಧ್ಯಕ್ಷ ಆರ್. ಅಚ್ಯುತರಾವ್, ಉಪಾಧ್ಯಕ್ಷ ಯು.ಎಸ್. ಕೇಶವಮೂರ್ತಿ, ಕಾರ್ಯದರ್ಶಿ ಜಿ.ಎಸ್. ಅನಂತ, ಖಜಾಂಚಿ ಎಚ್.ಎನ್. ಛಾಯಾಪತಿ, ಸಂಘಟನಾ ಕಾರ್ಯದರ್ಶಿ ಶೇಷಗಿರಿ, ಎಚ್.ಸಿ. ರವಿಕುಮಾರ್ ಮೊದಲಾದವರು  ಇದ್ದರು.

ಸಂಭ್ರಮಾಚರಣೆ
ಸೊರಬ: ರಾಜ್ಯದ 28ನೇ ಮುಖ್ಯಮಂತ್ರಿಯಾಗಿ ಹಿಂದುಳಿದ ವರ್ಗಗಳ ನಾಯಕ ಸಿದ್ದರಾಮಯ್ಯ ಅಧಿಕಾರ ಸ್ವೀಕರಿಸಿದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಕಾಂಗ್ರೆಸ್ ಮುಖಂಡರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಮುಖಂಡ ಎಲ್. ಗಿರೀಶ್ ಮಾತನಾಡಿ, ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಪದವಿ ದೊರೆತಿದ್ದು ಹರ್ಷ ತಂದಿದೆ. ಕುಮಾರ್ ಬಂಗಾರಪ್ಪ ಗೆಲ್ಲದಿದ್ದರೂ ಮುಖ್ಯಮಂತ್ರಿಗಳ ಮೂಲಕ ತಾಲೂಕು ಅಭಿವೃದ್ಧಿಗೋಸ್ಕರ ಶ್ರಮಿಸುತ್ತಾರೆ. ಪ್ರಸಕ್ತ ಚುನಾವಣೆಯಲ್ಲಿನ ಜೆಡಿಎಸ್ ಗೆಲವು ಕೇವಲ ಅನುಕಂಪದ ಗೆಲವು ಅಷ್ಟೆ ಎಂದರು. ಪಪಂ ಸದಸ್ಯ ಎಂ.ಡಿ. ಉಮೇಶ್ ಮಾತನಾಡಿ, ನೂತನ ಮುಖ್ಯಮಂತ್ರಿಗಳ ಅವಧಿಯಲ್ಲಿ ರಾಜ್ಯ ಅಭಿವೃದ್ಧಿ ಪಥದತ್ತ ಸಾಗುವುದರಲ್ಲಿ ಅನುಮಾನವಿಲ್ಲ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement