ಅಕಾಲಿಕ ಮಳೆ: ಮಲೆನಾಡ ರೈತರಲ್ಲಿ ಆತಂಕ
ಶೃಂಗೇರಿ: ತಾಲೂಕಿನ ವಿವಿದೆಡೆ ಕಳೆದೆರೆಡು ದಿಗಳಿಂದ ಮೋಡಕವಿದ ವಾತಾವರಣ, ಸಾಧಾರಣೆ ಮಳೆ ಆಗಾಗ ಬರುತ್ತಿರುವುದರಿಂದ ರೈತರಲ್ಲಿ ಆತಂಕ ಮೂಡಿಸಿದೆ.
ಈಗಾಗಲೇ ಅತಿವೃಷ್ಟಿ, ಕೊಳೆರೋಗದಿಂದ, ಹಳದಿ ಎಲೆ ರೋಗದಿಂದ ಬಹುತೇಕ ಅಡಕೆ ಫಸಲು ನಾಶವಾಗಿದ್ದು ಉಳಿದ ಅತ್ಯಲ್ಪ ಅಡಕೆ ಫಸಲಿನ ಕೊಯಿಲು ಆರಂಭವಾಗಿತ್ತು.
ಕಳೆದ ಒಂದು ವಾರದಿಂದ ಉತ್ತಮ ಬಿಸಿಲ ವಾತಾವರಣವಿತ್ತು. ರೈತರ ಮೊಗದಲ್ಲಿ ಮಂದಹಾಸ ಮೂಡಿತ್ತು. ಅಡಕೆ ಕೊಯಿಲು ಭರದಿಂದ ಸಾಗಿತ್ತು. ಆದರೆ, ಕಳೆದೆರೆಡು ದಿನಗಳಿಂದ ಅಕಾಲಿಕ ಮಳೆಯಾಗುತ್ತಿದ್ದು ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಬತ್ತದ ಗೆದ್ದಗಳು ಕಟಾವಿಗೆ ಸಿದ್ದವಾಗಿದ್ದು ಮಳೆ ಹೀಗೆಯೇ ಮುಂದುವರೆದರೆ ರೈತರಿಗೆ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿಸಲಿದೆ. ಒಂದೆಡೆ ಕಾರ್ಮಿಕರ ಸಮಸ್ಯೆಯಿಂದ ಕಂಗೆಟ್ಟ ರೈತರು ಮಳೆಯಿಂದ ಇನ್ನಷ್ಟು ಕಂಗಾಲಾಗಿದ್ದಾರೆ.
ಮಂಗಳವಾರ ಬೆಳಿಗ್ಗೆಯಿಂದಲೇ ಮೋಡಕವಿದ ವಾತಾವರಣವಿದ್ದು ಮಧ್ಯಾಹ್ನ ಸಾಧಾರಣ ಮಳೆ ಬಂದಿತ್ತು. ಮತ್ತೆ ಮಳೆಗಾಲದ ವಾತಾವರಣ ಉಂಟಾಗಿದೆ.