ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

'ಕನ್ನಡ ಉಳಿವಿಗೆ ಎಲ್ಲರೂ ಬದ್ಧರಾಗಲಿ'

Srinivasa Murthy VN
Updated On : 27 Nov 2013, 11:19 am

ಕಡೂರು: ಪರಭಾಷೆಗಳ ಹಾವಳಿ ನಡುವೆಯೂ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಉಳಿವಿಗೆ ಸಾವಿರಾರು ಹೋರಾಟಗಾರರು ತ್ಯಾಗ, ಬಲಿದಾನಗಳ ಮೂಲಕ ಕೊಡುಗೆ ನೀಡಿದ್ದು, ಅಂತಹ ಭಾಷೆ ಉಳಿಸಲು ಪ್ರತಿಯೊಬ್ಬ ಕನ್ನಡಿಗರೂ ಕಂಕಣಬದ್ಧರಾಗಬೇಕು ಎಂದು ತಾ. ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ರಮೇಶ್ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದ ರಸ್ತೆಯಲ್ಲಿರುವ ತಾಲೂಕು ವಿದ್ಯುತ್ ಗುತ್ತಿಗೆದಾರರ ಸಂಘದ ಕಚೇರಿ ಅವರಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜ್ಯದ ಗಡಿ ಭಾಗಗಳಲ್ಲಿ ನಮ್ಮ ಕನ್ನಡದ ಮೇಲೆ ಪರಭಾಷೆಗಳ ಆಕ್ರಮಣಕ್ಕೆ ತುತ್ತಾಗುತ್ತಿರುವ ಸಂಗತಿಗಳನ್ನು ದಿನೇ ದಿನೇ ನೋಡುತ್ತಿರುವ ನಡುವೆಯೇ ಕನ್ನಡ ಉಳಿವಿಗೆ ಪ್ರತಿಯೊಬ್ಬ ಕನ್ನಡಿಗರು ಜಾಗೃತರಾಗಿ ಭಾಷೆ ಉಳಿಸುವ ಕೆಲಸ ಮಾಡಬೇಕಾದ ಅನಿವಾರ್ಯತೆ ಉಂಟಾಗಿದೆ ಎಂದರು.
ಅಭಿಮಾನ ಇರಲಿ: ಕನ್ನಡ ನಮ್ಮದು, ನಮ್ಮ ನೆಲ, ಜಲ, ಭಾಷೆ ನಮ್ಮದೆಂಬ ಅಭಿಮಾನ ಮರೆಯದೆ ಕನ್ನಡ ತಾಯಿ ರಕ್ಷಣೆ ಹೊರಬೇಕಾದ ಜವಾಬ್ದಾರಿ ಎಲ್ಲರದ್ದಾಗಿದೆ. ಭಾಷೆ ಬೆಳೆಸಲು ಸಾವಿರಾರು ಜನ ತಮ್ಮ ಪ್ರಾಣ ಬಲಿದಾನಗೈದು ಕನ್ನಡದ ಉಳಿವಿಗೆ ಕೊಡುಗೆ ನೀಡಿದ್ದಾರೆ ಎಂದರು.
ಹಿರಿಯ ಗುತ್ತಿಗೆದಾರ ಪ್ರಭುಕುಮಾರ್ ಧ್ವಜಾರೋಹಣ ನೆರವೇರಿಸಿ, ಭಾಷೆಯ ಉಳಿವಿಗೆ ಕನ್ನಡಿಗರು ಕೈಗೊಳ್ಳಬೇಕಾದ ಕ್ರಮದ ಕುರಿತು ಮಾತನಾಡಿದರು. ಸಂಘದ ಕಾರ್ಯದರ್ಶಿ ಲೋಕೇಶ್, ಮುರಳಿ, ಅಪ್ಪು, ಜಗದೀಶ್, ಲೋಕನಾಥ್, ನಜೀರ್ ಅಹಮದ್, ರಾಜು, ಆರ್. ಕೃಷ್ಣಮೂರ್ತಿ, ಮಹೇಶ್, ಇಮ್ತಿಯಾಜ್ ಮಹೇಶ್, ಧರಣೇಶ್, ರವೀಶ್ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement