ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಡಿ.3ರಂದು ವಿಕಲಚೇತನರ ದಿನ

Srinivasa Murthy VN
Updated On : 27 Nov 2013, 11:20 am

ಚಿಕ್ಕಮಗಳೂರು: ವಿಶ್ವ ವಿಕಲಚೇತನರ ದಿನಾಚರಣೆಯನ್ನು ಡಿಸೆಂಬರ್ 3 ರಂದು ಜಿಲ್ಲಾಡಳಿತದ ವತಿಯಿಂದ ಆಚರಿಸಲಾಗುವುದೆಂದು ಜಿಲ್ಲಾಧಿಕಾರಿ ಬಿ.ಎಸ್. ಶೇಖರಪ್ಪ ಹೇಳಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ವಿಶ್ವ ವಿಕಲಚೇತನರ ದಿನಾಚರಣೆಯ ಪೂರ್ವ ಸಿದ್ಧತಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಡಿಸೆಂಬರ್ 3 ರಂದು ನೇತಾಜಿ ಸುಭಾಷ್‌ಚಂದ್ರ ಬೋಸ್ ಆಟದ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದೆ. ನಂತರ ವಿಕಲ ಚೇತನ ಮಕ್ಕಳಿಗೆ ವಿವಿಧ ಸ್ಪರ್ಧೆಗಳು ನಡೆಯಲಿದ್ದು, ಸ್ಪರ್ಧೆಯ ನಂತರ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಶಿಕ್ಷಣ ಇಲಾಖೆಯಿಂದ ಅಂದು ಶಿಕ್ಷಕರನ್ನು ನೇಮಿಸುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ ಅವರು, ತಾಲೂಕುಗಳಲ್ಲಿ ಅಂದೇ ಕಾರ್ಯಕ್ರಮ ಏರ್ಪಡಿಸಲು ಆಯಾ ತಾಲೂಕುಗಳ ಸಿ.ಡಿ.ಪಿ.ಒ ಗಳಿಗೆ ಸೂಚಿಸಿ ಕಾರ್ಯಕ್ರಮಕ್ಕೆ ಆಯಾ ತಾಲೂಕುಗಳ ಜನಪ್ರತಿನಿಧಿಗಳನ್ನು ಆಹ್ವಾನಿಸುವಂತೆ ತಿಳಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಹೆಚ್.ಜಿ. ಚಂದ್ರಶೇಖರಯ್ಯ, ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಮಾರುಕಟ್ಟೆ ಸಪ್ತಾಹ
ತರೀಕೆರೆ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ ಮಾರುಕಟ್ಟೆ ಆವರಣದಲ್ಲಿ ಮಾರುಕಟ್ಟೆ ಸಪ್ತಾಹ ಏರ್ಪಡಿಸಲಾಗಿತ್ತು. ಸಮಿತಿ ಅಧ್ಯಕ್ಷ ಶಿವಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೃಷಿ ಉತ್ಪನ್ನ ಮಾರುಕಟ್ಟೆ ರೈತರಿಂದ ರೈತರಿಗಾಗಿ ಮತ್ತು ರೈತರಿಗೋಸ್ಕರವಾಗಿಯೇ ಇರುವ ಸಂಸ್ಥೆ. ಮಾರುಕಟ್ಟೆ ಸಪ್ತಾಹದಲ್ಲಿ ಅನೇಕ ರೀತಿಯ ಬದಲಾವಣೆ ಅಗಿದೆ. ಬೇಡಿಕೆ ಮತ್ತು ಪೂರೈಕೆಗೆ ಅನುಗುಣವಾಗಿ ಸರ್ಕಾರ ರೈತರು ಬೆಳೆದ ಬೆಳೆಗೆ ಬೆಲೆ ನಿಗದಿಗೊಳಿಸಬೇಕು. ಬೆಳೆ ವಿಮೆ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು. ಉಪನ್ಯಾಸಕ ದೀನ್ ದಯಾಳ್ ಮಾತನಾಡಿದರು. ಸಮಿತಿ ನಿರ್ದೇಶಕರು, ಸಮಿತಿ ಕಾರ್ಯದರ್ಶಿ ಮಲ್ಲೇಶಪ್ಪ, ನಾಗೇಂದ್ರಪ್ಪ, ಧರ್ಮರಾಜ್, ರೈತರು ಉಪಸ್ಥಿತರಿದ್ದರು.

30ಕ್ಕೆ ವಾಲಿಬಾಲ್ ಪಂದ್ಯಾವಳಿ
ನರಸಿಂಹರಾಜಪುರ: ತಾಲೂಕಿನ ಮೆಣಸೂರಿನ ಆದರ್ಶ ಯುವಕ ಸಂಘದ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ರಾಜ್ಯ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯನ್ನು ನ.30 ರ ಶನಿವಾರ ಸಂಜೆಯಿಂದ ಏರ್ಪಡಿಸಲಾಗಿದೆ ಎಂದು ಆದರ್ಶ ಯುವಕ ಸಂಘದ ಪ್ರಕಟಣೆ ತಿಳಿಸಿದೆ. ಮೆಣಸೂರಿನ ಕ್ರೀಡಾಂಗಣದಲ್ಲಿ ನಡೆಯುವ  ರಾಜ್ಯ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯ  ಆಸಕ್ತ ತಂಡಗಳು ಭಾಗವಹಿಸಬಹುದು. ಮಾಹಿತಿಗಾಗಿ  9448392901.

ದೀಪೋತ್ಸವ ಕಾರ್ಯಕ್ರಮ
ಶೃಂಗೇರಿ: ಪಟ್ಟಣದ ಜೈನಮಂದಿರದ ಆವರಣದಲ್ಲಿ ಮಲೆನಾಡು ಜೈನನ್ಮಿಲನ್ ಆಶ್ರಯದಲ್ಲಿ ದೀಪೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಂಗವಾಗಿ ಜೈನ ಸಾಹಿತ್ಯದಲ್ಲಿ ಜಾತ್ಯಾತೀತ ಮೌಲ್ಯಗಳು ವಿಷಯದ ಕುರಿತು ಸರ್ಕಾರಿ ಜೂನಿಯರ್ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮಂದಾರ ಉಪನ್ಯಾಸ ನೀಡಿದರು. ಡಾ.ನಿರಂಜನ್ ಸ್ಪರ್ಶ್ವವಾಯು ಖಾಯಿಲೆ ಮತ್ತು ಅದಕ್ಕೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಮಾಹಿತಿ ನೀಡಿದರು. ಸಂತೋಷ್‌ಜೈನ್ ಮತ್ತಿತರರು ಉಪಸ್ಥಿತರಿದ್ದರು. ದೀಪೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ವಿಧಾನಗಳು ನೆರವೇರಿತು.

28ರಿಂದ ಸಾಗರದಲ್ಲಿ ಖರೀದಿ ಕೇಂದ್ರ
ಶಿವಮೊಗ್ಗ: ಜಿಲ್ಲೆಯಲ್ಲಿ ಬತ್ತ ಹಾಗೂ ಜೋಳವನ್ನು ಬೆಂಬಲಯಲ್ಲಿ ಖರೀದಿಸಲು ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು, ಈಗಾಗಲೇ ಶಿವಮೊಗ್ಗ, ಶಿಕಾರಿಪುರ, ಶಿರಾಳಕೊಪ್ಪ, ಭದ್ರಾವತಿ, ಆನವಟ್ಟಿ, ಸೊರಬದಲ್ಲಿ ಕೇಂದ್ರ ಆರಂಭಿಸಲಾಗಿದೆ. ನ.28ರ ನಂತರ ತೀರ್ಥಹಳ್ಳಿ, ಹೊಸನಗರ, ಸಾಗರದಲ್ಲೂ ಆರಂಭಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಸಸಿಕಾಂಥ್ಸೆಂಥಿಲಲ್ತಿಳಿಸಿದ್ದಾರೆ.
 ಕ್ವಿಂಟಾಲ್‌ಗೆ 1310 ರುಪಾಯಿಯಂತೆ ಜೋಳ ಹಾಗೂ 1600 ರುಪಾಯಿಯಂತೆ ಬತ್ತವನ್ನು ಸಣ್ಣ ಹಾಗೂ ಅತಿ ಸಣ್ಣ ಹಿಡುವಳಿದಾರರಿಂದ ಖರೀದಿಸುವಂತೆ ಸರ್ಕಾರದಿಂದ ಆದೇಶ ಬಂದಿದೆ. ಮೊದಲು ರೈತರು ಸ್ಯಾಂಪಲ್ ತಂದು ತೋರಿಸಿ ಗ್ರೇಡರ್ ಮೂಲಕ ದೃಢೀಕರಿಸಿಕೊಳ್ಳಬೇಕು. ನಂತರ ಒಪ್ಪಿಗೆಯಾದರೆ ಪಹಣಿ ಜೊತೆಗೆ ಸಣ್ಣ ಹಾಗೂ ಅತಿ ಸಣ್ಣ ರೈತರೆಂದು ಉಪ ತಹಶೀಲ್ದಾರ್, ತಹಶೀಲ್ದಾರ್ ದೃಢೀಕರಣ ತರಬೇಕಾಗುತ್ತದೆ ಎಂದು ಅವರು ವಿವರಿಸಿದ್ದಾರೆ.  ಜೋಳಕ್ಕೆ ಫಂಗಸ್ ತಲುಪಿರುವ ಕಾರಣ ಶೇ.4.5ರಷ್ಟು ಹಾನಿಯಾಗಿರುವ ಜೋಳವನ್ನು ಖರೀದಿಸಲು ಒಪ್ಪಿಗೆ ಸಿಕ್ಕಿದೆ. ಶೇ.10ರವರೆಗೂ ಅವಕಾಶಕೊಡಿ ಎಂದು ರೈತರು ಬೇಡಿಕೆ ಮುಂದಿಟ್ಟಿದ್ದಾರೆ. ಜಿಲ್ಲಾಡಳಿತದ ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದು ನಿರ್ದೇಶನ ಪಡೆಯಲಿದೆ ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement