ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ನವೀನ್‌ಕುಮಾರ್‌ಗೆ ಪ್ರಥಮ ಬಹುಮಾನ

Srinivasa Murthy VN
Updated On : 27 Nov 2013, 11:18 am

ಚಿಕ್ಕಮಗಳೂರು: ಕನ್ನಡ ರಾಜ್ಯೋತ್ಸವದ ಅಂಗವಾಗಿ ತಾಲೂಕಿನ ತೇಗೂರಿನಲ್ಲಿ ಸ್ಥಳೀಯ ಮಾರುತಿ ಯುವಕ ಸಂಘದಿಂದ ಭಾನುವಾರ ನಡೆದ ರಾಜ್ಯಮಟ್ಟದ ಜೋಡೆತ್ತಿನ ಗಾಡಿ ಓಟದ ಸ್ಪರ್ಧೆಯಲ್ಲಿ ತರೀಕೆರೆ ತಾಲೂಕಿನ ನಾರಾಯಣಪುರದ ನವೀನ್‌ಕುಮಾರ್ ಪ್ರಥಮ ಸ್ಥಾನ ಗಳಿಸಿದ್ದಾರೆ.
ತೇಗೂರಿನ ಯಜಮಾನ್ ದ್ವಿತೀಯ ಹಾಗೂ ಓಣಿಮನೆ ಲಕ್ಷ್ಮಣರಾಜು ತೃತೀಯ, ತರೀಕೆರೆಯ ಎಂ.ಎಚ್.ಎಸ್. ಖಲೀಲ್ ಅಹ್ಮದ್ ನಾಲ್ಕನೇ ಮತ್ತು ಹಂಪಾಪುರದ ಪುಟ್ಟೇಗೌಡ ಐದನೇ ಸ್ಥಾನ ಪಡೆದಿದ್ದಾರೆ.
76 ಜೋಡಿ ಎತ್ತುಗಳು: ಬೆಳಗಿನಿಂದ ಮಧ್ಯರಾತ್ರಿಯವರೆಗೆ ನಡೆದ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ 76 ಜೋಡಿ ಎತ್ತುಗಳು ಪಾಲ್ಗೊಂಡು ಮಿಂಚಿನವೇಗದಲ್ಲಿ ಓಡುವ ಮೂಲಕ ನೋಡುಗರ ಮೈನವಿರೇಳಿಸಿದವು.
ಸೋಮವಾರ ಸಂಜೆ ಗ್ರಾಮದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶರಾಜ್ ಅರಸ್ ವಿಜೇತರಿಗೆ ಬಹುಮಾನ ವಿತರಿಸಿದರು.
ನಗರಸಭೆ ಸದಸ್ಯ ಭುಜಂಗರಾಜ್ ಅರಸ್ ಮಾತನಾಡಿ, ಮುಂದಿನ ವರ್ಷದಿಂದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತಿಹೆಚ್ಚು ಅಂಕಗಳಿಸಿದ ಗ್ರಾಮದ ವಿದ್ಯಾರ್ಥಿಗಳಿಗೆ ಬಹುಮಾನ ನೀಡುವ ಮೂಲಕ ಅವರನ್ನು ಪ್ರೋತ್ಸಾಹಿಸುವಂತೆ ಕಾರ್ಯಕ್ರಮದ ಸಂಘಟಕರಿಗೆ ಸಲಹೆ ಮಾಡಿದರು.
ಜಾಗೃತಿ ಮೂಡಿಸಿ: ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ತೇಗೂರು ಜಗದೀಶ್ ಮಾತನಾಡಿ, ರಾಜ್ಯೋತ್ಸವ ಕಾರ್ಯಕ್ರಮ ಮತ್ತು ಓಟದ ಸ್ಪರ್ಧೆಗೆ ದೇಣಿಗೆ ನೀಡಿ ಸಹಕರಿಸಿದವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು
. ಸಿಡಿಎ ಮಾಜಿ ಸದಸ್ಯ ಮಧುಕುಮಾರ್ ರಾಜ್ ಅರಸ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಜನಕರಾಜ್ ಅರಸ್, ತಾಪಂ ಮಾಜಿ ಸದಸ್ಯ ಕನಕರಾಜ್ ಅರಸ್, ಗ್ರಾಮದ ಶ್ರೀ ವೀರಾಂಜನೇಯಸ್ವಾಮಿ ದೇವಾಲಯದ ಪ್ರಧಾನ ಅರ್ಚಕ ಮಹೇಶ್ ಭಟ್, ನಿವೃತ್ತ ಹಿರಿಯ ಪಶುಪರೀಕ್ಷಕ ಟಿ.ಎನ್. ಲಕ್ಷ್ಮಣರಾಜು, ನಾರಾಯಣರಾಜ್ ಅರಸ್, ಗ್ರಾಪಂ ಸದಸ್ಯರಾದ ರಮೇಶ್, ಶ್ರೀನಿವಾಸ್ ರಾಜ್ ಅರಸ್, ಪದ್ಮರಾಜ್ ಅರಸ್, ಲಕ್ಷ್ಮಣರಾಜ್ ಅರಸ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement