ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ವೀರಭದ್ರಸ್ವಾಮಿ ದೇವಾಲಯದಲ್ಲಿ ಕೆಂಡೋತ್ಸವ

Srinivasa Murthy VN
Updated On : 27 Nov 2013, 11:19 am

ಚಿಕ್ಕಮಗಳೂರು: ನಗರದ ಬಸವನಹಳ್ಳಿಯ ಕುಂಬಾರ ಬೀದಿಯಲ್ಲಿರುವ ಶ್ರೀ ವೀರಭದ್ರಸ್ವಾಮಿ ದೇವಾಲಯ ಆವರಣದಲ್ಲಿ ಮಂಗಳವಾರ ಕೆಂಡೋತ್ಸವ ನಡೆಯಿತು.
ಬೆಳಿಗ್ಗೆ ಶ್ರೀ ವೀರಭದ್ರಸ್ವಾಮಿಯವರ ಉತ್ಸವದೊಂದಿಗೆ ಗಂಗಾ ಕಳಸಾ ಪೂಜೆ, ಅಗ್ನಿಕುಂಡ ಪೂಜೆ ನಡೆದ ಬಳಿಕ ಮನೋಬಿಷ್ಟೆ ಈಡೇರಿಸಿಕೊಳ್ಳಲು ಮಹಿಳೆಯರು ಸೇರಿದಂತೆ ಭಕ್ತರು ಬರೀಗಾಲಿನಲ್ಲಿ ಕೆಂಡವನ್ನು ಹಾಯ್ದರು.
ಈ ದೇವಾಲಯದಲ್ಲಿ ಸೋಮವಾರದಿಂದ ಒಂದು ವಾರಗಳ ಕಾಲ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಸೋಮವಾರದಂದು ಧ್ವಜಾರೋಹಣ, ಗಂಗಾ ಕಳಸಾ ಪೂಜೆ, ವಿನಾಯಕ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಮಂಗಳವಾರದಂದು ಕೆಂಡೋತ್ಸವದ ಬಳಿಕ ಪ್ರಸಾದ ವಿನಿಯೋಗ ನಡೆಯಿತು. ಬುಧವಾರ ಸಂಜೆ 7 ಗಂಟೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ರಸಮಂಜರಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ನ.28ರಂದು ಸಂಜೆ 7 ಗಂಟೆಗೆ ಶ್ರೀ ವಾಗ್ದೇವಿ ಸಂಗೀತ ನೃತ್ಯ ಶಾಲೆಯ ಎ.ಎಸ್. ಧನಂಜಯ ಮತ್ತು ಶಿಷ್ಯವೃಂದದಿದಂ ಭರತನಾಟ್ಯ ಮತ್ತು ನೃತ್ಯ ಕಾರ್ಯಕ್ರಮ ನಡೆಯಲಿದೆ.
ನ.29 ರಂದು ಅಂಬಳೆಯ ಶ್ರೀ ರೇಣುಕಾದೇವಿ ತೊಗಲುಗೊಂಬೆ ಕಲಾ ತಂಡದಿಂದ ತೊಗಲುಗೊಂಬೆ ಆಟ ಕಾರ್ಯಕ್ರಮ ನಡೆಯಲಿದ್ದು, ನ.30 ರಂದು ರಂಗೋಲಿ ಸ್ಪರ್ಧೆ ಹಾಗೂ ಅದೇ ದಿನ ಸ.7 ಗಂಟೆಗೆ ಸ್ಥಳೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ. ಡಿ.1 ರಂದು ಎನ್.ಬಿ. ರೇಣುಕಮೂರ್ತಿ ಮತ್ತು ತಂಡದಿಂದ ಭಜನಾ ಕಾಯಕ್ರಮ ಜರುಗಲಿದೆ. ಅಂದು ರಾತ್ರಿ 9 ಗಂಟೆಗೆ ಕಾರ್ತಿಕ ದೀಪೋತ್ಸವ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement