ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕಟ್ಟೆಹೊಳೆಯಲ್ಲಿ ಸಂಭ್ರಮದ ರಾಜ್ಯೋತ್ಸವ

Srinivasa Murthy VN
Updated On : 30 Nov 2013, 11:26 am

ಕ.ಪ್ರ.ವಾರ್ತೆ ತರೀಕೆರೆ  ನ. 29
ತಾಲೂಕು ಕಸಾಪ ವತಿಯಿಂದ ಸಮೀಪದ ಕಟ್ಟೆಹೊಳೆಯಲ್ಲಿ ಆನಂದ್ ಅವರ ಮನೆ ಆಂಗಳದಲ್ಲಿ ರಾಜ್ಯೋತ್ಸವ-ನಿತ್ಯೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕನ್ನಡಶ್ರೀ ಬಿ.ಎಸ್. ಭಗವಾನ್ ಮಾತನಾಡಿ, ಸಂಸ್ಕೃತಿ ಸಂಸ್ಕಾರ ಮನುಷ್ಯನ ಉನ್ನತಿಗೆ ಅತಿ ಅವಶ್ಯಕ.   ಮಕ್ಕಳಿಗೆ ನಮ್ಮ ಪರಂಪರೆ ಇತಿಹಾಸದ ನೆನಪು ಮಾಡಿಕೊಡುವುದು ಅಗತ್ಯವಾಗಿದೆ.
ಗ್ರಾಮಗಳು ಇಂದು ನಗರ ಪ್ರದೇಶದ ಪ್ರಭಾವಕ್ಕೆ ಒಳಗಾಗಿ ಆಚಾರ ವಿಚಾರದಿಂದ ದೂರ ಉಳಿಯುತ್ತಿರುವುದು ವಿಷಾದಕರ ಎಂದರು.  
ಬೇಲೇನಹಳ್ಳಿ ಗ್ರಾಪಂ ಅಧ್ಯಕ್ಷೆ ಗಿರಿಜಮ್ಮ ಆನಂದ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಚಿಕ್ಕ ಗ್ರಾಮಗಳಿಗೂ ಸಾಹಿತ್ಯ ಪರಿಷತ್ತು ಚಟುವಟಿಕೆ ವಿಸ್ತರಿಸುತ್ತಿರುವುದು ಸ್ವಾಗತಾರ್ಹ ಎಂದರು.
ಬದಲಾವಣೆ ಪರ್ವ: ದಸಂಸ ಸಂಚಾಲಕ ಆನಂದ್ ಮಾತನಾಡಿ, ಕನ್ನಡ ಕಟ್ಟುವ ಕಾರ್ಯಕ್ರಮದಲ್ಲಿ ಪ್ರತಿ ಮನೆ ಬಾಗಿಲಿಗೆ ತೆರಳಿ ಕನ್ನಡ ಕಾರ್ಯಕ್ರಮ ಮಾಡುತ್ತಿರುವುದು ಬದಲಾವಣೆಯ ಪರ್ವ ಎಂದು ತಿಳಿಸಿದರು.
ಹೋಬಳಿ ಕಸಾಪ ಅಧ್ಯಕ್ಷ ಎನ್. ವೆಂಕಟೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮಗಳಲ್ಲಿನ ಕ್ರೀಡೆಗಳು ಧಾರ್ಮಿಕ ಆಚರಣೆಗಳು ಕಾಣೆಯಾಗುತ್ತಿದೆ. ಇದನ್ನು ಉಳಿಸಿ ಮುಂದಿನ ಪೀಳಿಗೆಗೂ ವರ್ಗಾಯಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಸಾಪ ಅಧ್ಯಕ್ಷ ಜಿ. ಸುಬ್ರಹ್ಮಣ್ಯ, ಜಯ್ಯಣ್ಣ ಮೊದಲಾದವರು ಭಾಗವಹಿಸಿದ್ದರು. ಕನ್ನಡ ಗೀತೆ ಗಾಯನ ಕಾರ್ಯಕ್ರಮ ನಡೆಯಿತು.

ಡಿ. 2ರಂದು ಕಾರ್ತಿಕ ದೀಪೋತ್ಸವ
ಚಿಕ್ಕಮಗಳೂರು: ಎಂ.ಜಿ. ರಸ್ತೆ ತಿರುವಿನ ಪೇಟೆ ಆಂಜನೇಯಸ್ವಾಮಿ ಮತ್ತು ಬನಶಂಕರಿ ದೇವಾಲಯದಲ್ಲಿ ವಾರ್ಷಿಕ ಕಾರ್ತಿಕ ದೀಪೋತ್ಸವ ಡಿ. 2 ರಂದು ಜರುಗಲಿದೆ.ದೀಪೋತ್ಸವದ ಅಂಗವಾಗಿ ಪೇಟೆ ಆಂಜನೇಯಸ್ವಾಮಿ ಮತ್ತು ಬನಶಂಕರಿ ದೇವಿಗೆ ಅಭಿಷೇಕ, ವಿಶೇಷ ಪೂಜೆ ಹಾಗೂ ರಾತ್ರಿ 7.30ಕ್ಕೆ ದೀಪೋತ್ಸವ ನಡೆಯಲಿದೆ ಎಂದು ನಾರಾಯಣ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement