ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

'ಕೃಷಿ ಮಾಹಿತಿಗಾಗಿ ಕ್ಷೇತ್ರೋತ್ಸವದಲ್ಲಿ ಪಾಲ್ಗೊಳ್ಳಿ'

Srinivasa Murthy VN
Updated On : 30 Nov 2013, 11:25 am

ಕ.ಪ್ರ.ವಾರ್ತೆ ನರಸಿಂಹರಾಜಪುರ ನ. 29
ಕೃಷಿ ಇಲಾಖೆಯ ಆತ್ಮ ಯೋಜನೆಯಡಿ ಶಿರಿಗಳಲೆಯ ಜಗದೀಶ್ ಅವರ ಬತ್ತದ ಗದ್ದೆಯಲ್ಲಿ ರೈತ ಕ್ಷೇತ್ರ ಪಾಠಶಾಲೆಯ ಪ್ರಾತ್ಯಕ್ಷಿಕೆ ಶುಕ್ರವಾರ ನಡೆಯಿತು.
ಕೃಷಿ ಇಲಾಖೆಯ ಆತ್ಮ ಯೋಜನೆಯ ವೀಣಾ ಪ್ರಾಸ್ತಾವಿಕವಾಗಿ ಮಾತನಾಡಿ, ಆತ್ಮ ಯೋಜನೆಯಡಿ ರೈತ ಕ್ಷೇತ್ರ ಪಾಠಶಾಲೆ ನಡೆಸುತ್ತಾ ಬಂದಿದ್ದೇವೆ. ಕ್ಷೇತ್ರೋತ್ಸವಕ್ಕೆ ಎಲ್ಲಾ ರೈತರು ಆಗಮಿಸಿ ವೀಕ್ಷಿಸಿದರೆ ಬೇರೆ ರೈತರೂ ಸ್ಫೂರ್ತಿ ಪಡೆದು ಉತ್ತಮ ಇಳುವರಿ ಪಡೆಯಬಹುದು ಎಂಬ ಉದ್ದೇಶದಿಂದ ರೈತ ಕ್ಷೇತ್ರೋತ್ಸವ ಹಮ್ಮಿಕೊಂಡಿದ್ದೇವೆ ಎಂದರು.
ಸಮಗ್ರ ಮಾಹಿತಿ: ಕೃಷಿ ಇಲಾಖೆಯ ಸಹಾಯಕ ಅಧಿಕಾರಿ ವಿ.ಎಸ್. ಶಿವಮೂರ್ತಿ ಮಾಹಿತಿ ನೀಡಿ, ರೈತ ಕ್ಷೇತ್ರ ಪಾಠ ಶಾಲೆಯಲ್ಲಿ ಸಮಗ್ರ ಮಾಹಿತಿ ನೀಡಿದ್ದೇವೆ. ಕೃಷಿ ಇಲಾಖೆಯಿಂದ ಶಿರಗಳಲೆಯ ಸ್ನೇಹ ಸ್ವಸಹಾಯ ಸಂಘಕ್ಕೆ ರು. 10,000 ರುಪಾಯಿ ಸುತ್ತು ನಿಧಿ ನೀಡಿದ್ದೇವೆ. ಕೃಷಿ ಇಲಾಖೆ ಅಲ್ಲದೆ ತೋಟಗಾರಿಕೆ, ಪಶು ವೈದ್ಯ ಇಲಾಖೆಯವರಿಂದಲೂ ರೈತರಿಗೆ ಮಾಹಿತಿ ಕೊಡಿಸಿದ್ದೇವೆ. ಜೊತೆಗೆ ಆ ಇಲಾಖೆಗಳೂ ಸಹ ಫಲಾನುಭವಿ ರೈತರನ್ನು ಗುರುತಿಸಿ ಬಹುಮಾನ ನೀಡುತ್ತಾರೆ ಎಂದರು.
ಅಧ್ಯಕ್ಷತೆಯನ್ನು ಶಿರಗಳಲೆಯ ರೈತ ಜಗದೀಶ್ ವಹಿಸಿದ್ದರು. ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಪುರುಷೋತ್ತಮ್ ಕಾರ್ಯಕ್ರಮ ಉದ್ಘಾಟಿಸಿದರು. ಸಾವಯವ ಕೃಷಿಕ ಒ.ಎಂ. ಜೋಸೆಫ್, ಸ್ನೇಹ ಸ್ವಸಹಾಯ ಸಂಘದ ಅಧ್ಯಕ್ಷೆ ಸುನೀತಾ, ಕೃಷಿ ಇಲಾಖೆ ಅಧಿಕಾರಿ ಎಂ.ಆರ್. ಶ್ರೀಧರ್, ವಿಕಸನ ಸಂಸ್ಥೆಯ ಕ್ಷೇತ್ರಾಧಿಕಾರಿ ಶ್ರೀನಿವಾಸ್ ಉಪಸ್ಥಿತರಿದ್ದರು.
ಬಹುಮಾನ ವಿತರಣೆ: ರೈತರಾದ ಶಿರಗಳಲೆ ಎಸ್.ವಿ. ರಮೇಶ್ ಅವರನ್ನು ಗುರುತಿಸಿ ಕೃಷಿ ಇಲಾಖೆಯಿಂದ ರು. 10,000 ಚೆಕ್ ಬಹುಮಾನವಾಗಿ ನೀಡಲಾಯಿತು. ರೈತರ ಕ್ಷೇತ್ರ ಪಾಠಶಾಲೆಯಲ್ಲಿ ಭಾಗವಹಿಸಿದ್ದ ಶೈನಿ ಮತ್ತು ಮಮತ ಜಗದೀಶ್ ಅನಿಸಿಕೆ ವ್ಯಕ್ತಪಡಿಸಿದರು. ಕು. ವಾಸುಕಿ ಸ್ವಾಗತಿಸಿದರು. ವಿ.ಎಸ್. ಶಿವಮೂರ್ತಿ ನಿರೂಪಿಸಿದರು. ಕು.ವೀಣಾ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement