ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಜ. ತಿಮ್ಮಯ್ಯ ಸ್ಮರಣಾರ್ಥ ಸಾಂಸ್ಕೃತಿಕ ಸ್ಪರ್ಧೆ

Srinivasa Murthy VN
Updated On : 30 Nov 2013, 11:25 am

ಕ.ಪ್ರ.ವಾರ್ತೆ  ಕಡೂರು  ನ. 29
ಮಾಜಿ ಪುರಸಭಾಧ್ಯಕ್ಷ ಹಾಗೂ ಸಮಾಜ ಸೇವಕರಾಗಿದ್ದ ದಿ. ಜನರಲ್ ತಿಮ್ಮಯ್ಯನವರ ಸ್ಮರಣಾರ್ಥ ಮತ್ತು ಪಟ್ಟಣದ ಕನ್ನಡ ಕಲಾ ಸಂಘದ ಆಶ್ರಯದಲ್ಲಿ ಶಾಲಾ ಮಕ್ಕಳಿಗೆ ಸಾಂಸ್ಕೃತಿಕ ಸ್ಪರ್ಧೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕನ್ನಡ ಕಲಾ ಸಂಘದ ಕಟ್ಟಡದಲ್ಲಿ ನಡೆದ ಕಾರ್ಯಕ್ರಮವನ್ನು ತಾಲೂಕು ಕುರುಬ ಸಮಾಜದ ಅಧ್ಯಕ್ಷ ಕೆ.ಎಸ್. ರಮೇಶ್ ಉದ್ಘಾಟಿಸಿ ಮಾತನಾಡಿ, ಬಡತನದಲ್ಲಿ ಹುಟ್ಟಿ ಜನರ ನಡುವೆಯೇ ಇದ್ದು, ಜನರ ಸೇವೆಗೆ ತಮ್ಮ ಜೀವನ ಮುಡಿಪಾಗಿಟ್ಟುಕೊಂಡು ಎಲ್ಲ ಸಮುದಾಯಗಳ ಪ್ರೀತಿ ಗಳಿಸಿ ಜನರಿಂದಲೇ ಜನರಲ್ ತಿಮ್ಮಯ್ಯ ಎಂದು ಬಿರುದು ಗಳಿಸಿಕೊಂಡ ಅವರ ಸೇವೆ ಸ್ಮರಣೀಯ. ವ್ಯಾಪಾರೀಕರಣದ ಮನೋಭಾವದ ಇಂದಿನ ದಿನಗಳಲ್ಲಿ ಜನರ ಪ್ರೀತಿ ಸಂಪಾದಿಸುವುದು ಕಷ್ಟ. ಪ್ರತಿಫಲ ಅಪೇಕ್ಷೆ ಇಲ್ಲದೆ ಸಮಾಜ ಸೇವೆಗೆ ತಮ್ಮ ಸುದೀರ್ಘ ಜೀವನ ಮೀಸಲಿಟ್ಟು ಜನರಿಂದ ಸಂಪಾದಿಸಿದ ಪ್ರೀತಿಯಿಂದಲೇ ಮೂರು ಬಾರಿ ಕಡೂರು ಪುರಸಭೆ ಸದಸ್ಯರಾಗಿ ಆಯ್ಕೆಯಾಗಿ ಅಧ್ಯಕ್ಷರೂ ಆಗಿ ಸಲ್ಲಿಸಿದ ಸೇವೆ ನಿಜಕ್ಕೂ ಶ್ಲಾಘನೀಯ. ಅವರ ಹೆಸರಲ್ಲಿ ಮಕ್ಕಳಿಗೆ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಿರುವುದು ಶ್ಲಾಘನೀಯ ಎಂದರು.
ಸೇವೆ ಮಾದರಿ: ಜಿಲ್ಲಾ ನೇಕಾರರ ಸಂಘದ ಅಧ್ಯಕ್ಷ ಬೆಂಕಿ ಶೇಖರಪ್ಪ ಮಾತನಾಡಿ, ಸಮಾಜ ಸೇವೆಯೇ ತಮ್ಮ ಉಸಿರು ಎಂದು ತಿಳಿದು ತಮ್ಮನ್ನು ಸಮಾಜಕ್ಕೆ ಅರ್ಪಿಸಿಕೊಂಡಿದ್ದ ಜನರಲ್ ತಿಮ್ಮಯ್ಯ ಅವರ ಸೇವೆಯು ಮಾದರಿಯಾಗಿದ್ದು, ಹಣ ಇಲ್ಲದೆಯೂ ಸಮಾಜ ಸೇವೆ ಮಾಡಬಹುದು ಎಂಬುದನ್ನು ತಿಮ್ಮಯ್ಯ ಅವರು ತೋರಿಸಿಕೊಟ್ಟರು ಎಂದರು.
ಕನ್ನಡ ಕಲಾ ಸಂಘದ ಉಪಾಧ್ಯಕ್ಷ ಜಿ.ವಿ. ಮಂಜುನಾಥಸ್ವಾಮಿ ಮಾತನಾಡಿದರು. ಕನ್ನಡ ಕಲಾ ಸಂಘದ ಅಧ್ಯಕ್ಷ ಪಿ.ಕೆ. ರೇವಣ್ಣಯ್ಯ ಅಧ್ಯಕ್ಷತೆ ವಹಿಸಿದ್ದರು. ತಿಮ್ಮಯ್ಯನವರ ಪತ್ನಿ ಈರಮ್ಮ, ತಾಲೂಕು ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್, ಚಂದ್ರಶೇಖರ್, ಪುಂಡಲೀಕರಾವ್, ಮಂಜುನಾಥ್, ಶಿಕ್ಷಕರಾದ ಚಂದ್ರಪ್ಪ, ಕೆ.ಆರ್. ಮಹೇಶ್, ಶೋಭಾ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement