ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ವಿಶ್ವ ಸ್ವಚ್ಛತಾ ದಿನಾಚರಣೆ

Srinivasa Murthy VN
Updated On : 30 Nov 2013, 11:27 am

ನರಸಿಂಹರಾಜಪುರ: ಈ ಹಿಂದೆ ಶೌಚಾಲಯ ನಿರ್ಮಿಸಲು ಸರ್ಕಾರದ ಅನುದಾನ ಕಡಿಮೆ ಇತ್ತು. ಈಗ ಶೌಚಾಲಯ ನಿರ್ಮಿಸಲು ಸರ್ಕಾರ ರು. 9,200 ನೀಡುತ್ತಿದೆ ಎಂದು ತಾಪಂ ಸದಸ್ಯೆ ಬಿ.ಎಚ್. ಸುಧಾ ತಿಳಿಸಿದರು. ಶುಕ್ರವಾರ ಆಡುವಳ್ಳಿ ಗ್ರಾಪಂ ವ್ಯಾಪ್ತಿಯ ಮೇಗರಮಕ್ಕಿ ಕಾಲೋನಿ ರಂಗಮಂದಿರದಲ್ಲಿ ನಡೆದ ವಿಶ್ವ ಸ್ವಚ್ಛತಾ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಆಡುವಳ್ಳಿ ಗ್ರಾಪಂ ಅಧ್ಯಕ್ಷ ಚೆನ್ನಪ್ಪಗೌಡ ಮಾತನಾಡಿ, ಆಡುವಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಎಲ್ಲರೂ ಶೌಚಾಲಯ ನಿರ್ಮಿಸಿಕೊಳ್ಳಬೇಕು ಎಂದರು. ಅತಿಥಿಯಾಗಿದ್ದ ತಾಪಂ ಕಾರ್ಯ ನಿರ್ವಹಣಾಧಿಕಾರಿ ಜಗದೀಶ್ ಮಾತನಾಡಿದರು. ಆಡುವಳ್ಳಿ ಗ್ರಾಪಂ ಸದಸ್ಯ ನಟರಾಜ್, ತಂಗಪ್ಪ, ಪ್ರಥ್ವಿರಾಜ್, ತಾಪಂ ವ್ಯವಸ್ಥಾಪಕಿ ಮೀನಾಕ್ಷಮ್ಮ, ಆಡುವಳ್ಳಿ ಗ್ರಾಪಂ ಪಿ.ಡಿ.ಒ ಸುಜಾತಾ ಉಪಸ್ಥಿತರಿದ್ದರು. ಸಭೆಯಲ್ಲಿ ಆರೋಗ್ಯ ಇಲಾಖೆ ಕಾರ್ಯಕತೆರ್ಯರು, ಸ್ತ್ರೀಶಕ್ತಿ ಸಂಘದ ಸದಸ್ಯರು ಭಾಗವಹಿಸಿದ್ದರು.

ಇಂದು ಖರೀದಿ ಕೇಂದ್ರ ಪ್ರಾರಂಭ
ಚಿಕ್ಕಮಮಗಳೂರು: ಬೆಂಬಲ ಬೆಲೆಯಡಿಯಲ್ಲಿ ಬತ್ತ ಖರೀದಿ ಕೇಂದ್ರಗಳ ಸ್ಥಾಪನೆ, ಬೆಂಬಲ ಬೆಲೆಯಡಿಯಲ್ಲಿ ಸರ್ಕಾರ ಘೋಷಿಸಿದ ಕ್ವಿಂಟಲ್‌ಗೆ 1600  ಬೆಲೆಯಂತೆ ಬತ್ತ ಖರೀದಿಸಲು ತರೀಕೆರೆ ಮತ್ತು ಎನ್.ಆರ್. ಪುರ ಸೇರಿದಂತೆ ಲಕ್ಕವಳ್ಳಿ ಹೋಬಳಿಯಲ್ಲಿ ಖರೀದಿ ಕೇಂದ್ರ, ಕೊಪ್ಪ ಮತ್ತು ಶೃಂಗೇರಿ ಸೇರಿದಂತೆ ಕೊಪ್ಪದ ಸಮುದಾಯಭವನದಲ್ಲಿ ನ. 30 ರಂದು ಹಾಗೂ ಮೂಡಿಗೆರೆಯ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಖರೀದಿ ಕೇಂದ್ರವು ಮುಂದಿನ ದಿನಗಳಲ್ಲಿ ಪ್ರಾರಂಭಗೊಳ್ಳಲಿವೆ. ಖರೀದಿ ಕೇಂದ್ರದಲ್ಲಿ ಸರ್ಕಾರದ ನಿಯಮಾನುಸಾರವಾಗಿ ಉತ್ತಮ ಗುಣಮಟ್ಟವನ್ನು ಪರಿಶೀಲಿಸಿ ಭತ್ತವನ್ನು ಖರೀದಿ ಮಾಡಲಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಟಾಸ್ಕ್‌ಪೋರ್ಸ್ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ಕಾರ್ಮಿಕನ ಮೇಲೆ ಹಲ್ಲೆ: ದೂರು
ತರೀಕೆರೆ: ಸಮೀಪದ ಎಂ.ಸಿ. ಹಳ್ಳಿಯ ವೈನ್ ಸ್ಟೋರ್‌ನಲ್ಲಿ ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ಕಾರ್ಮಿಕನಿಗೆ ಹಲ್ಲೆ ಮಾಡಿರುವ ಘಟನೆ ನಡೆದಿದೆ.ವೈನ್ ಸ್ಟೋರ್‌ಗೆ ವಾಹನದಲ್ಲಿ ಆಗಮಿಸಿದ ಕೆಲವರು ಹಣ ಪಾವತಿ ಮಾಡುವ ಸಂದರ್ಭದಲ್ಲಿ ಕಾರ್ಮಿಕನ ಮೇಲೆ ಥಳಿಸಿದ್ದಾರೆ. ಈ ಬಗ್ಗೆ ತರೀಕೆರೆ ಪೊಲೀಸ್ ಠಾಣೆಗೆ ದೂರು ದಾಖಲಾಗಿದೆ.

ಪರಮೇಶ್ವರಪ್ಪಗೆ ಬೀಳ್ಕೊಡುಗೆ
ತರೀಕೆರೆ: ಕರ್ನಾಟಕ ರಾಜ್ಯ ಪ್ರಾ.ಶಾ.ಶಿಕ್ಷಕರ ಸಂಘ, ಕ್ಷೇತ್ರ ಸಂಪನ್ಮೂಲ ಕೇಂದ್ರ ವತಿಯಿಂದ ಕೇಂದ್ರದ ಆವರಣದಲ್ಲಿ ವರ್ಗಾವಣೆಗೊಂಡ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಆರ್. ಪರಮೇಶ್ವರಪ್ಪ ಅವರಿಗೆ ಆತ್ಮೀಯ ಬೀಳ್ಕೊಡುಗೆ ಮತ್ತು ಹೊಸದಾಗಿ ತರೀಕೆರೆಗೆ ಆಗಮಿಸಿದ ಬಿ.ಇ.ಓ. ಹರಿಪ್ರಸಾದ್ ಅವರಿಗೆ ಸ್ವಾಗತ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಸಿ.ಆರ್. ಪರಮೇಶ್ವರಪ್ಪ ಅವರು ಮಾತನಾಡಿ, ಸರ್ಕಾರಿ ನೌಕರರಿಗೆ ವರ್ಗಾವಣೆ ಮತ್ತು ನಿವೃತ್ತಿ ಅನಿವಾರ್ಯ, ಸುದೀರ್ಘ ಕಾಲ ಸೇವೆ ಸಲ್ಲಿಸುವ ಸದವಕಾಶ ದೊರೆಯಿತು.  ಎಲ್ಲರೂ ಸಹಕರಿಸಿದ್ದೀರಿ, ಇದೇ ರೀತಿಯ ಸಹಕಾರವನ್ನು ಹೊಸ ಬಿ.ಇ.ಓ. ಹರಿಪ್ರಸಾದ್ ಅವರಿಗೂ ನೀಡಬೇಕೆಂದು ಅವರು ಮನವಿ ಮಾಡಿದರು. ವರ್ಗಾವಣೆಗೊಂಡ ಪರಮೇಶ್ವರಪ್ಪ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಹರಿಪ್ರಸಾದ್, ಸರ್ಕಾರಿ ನೌ.ಸಂಘದ ಅಧ್ಯಕ್ಷ ರಾಮಚಂದ್ರಪ್ಪ, ನಾಗರಾಜ್, ರಾಜಪ್ಪ, ರವೀಶ್, ಶಶಿಧರ್, ತಿಮ್ಮಯ್ಯ ಸಂಘದ ಸದಸ್ಯರು ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ರಾಜ್ಯಮಟ್ಟಕ್ಕೆ ಆಯ್ಕೆ
ಬಾಳೆಹೊನ್ನೂರು: ಇತ್ತೀಚೆಗೆ ಚಿಕ್ಕಮಗಳೂರಿನಲ್ಲಿ ನಡೆದ 21ನೇ ಅಖಿಲ ಕರ್ನಾಟಕ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಭಾಗವಹಿಸಿದ್ದ ಇಲ್ಲಿನ ಜಗದ್ಗುರು ರೇಣುಕಾಚಾರ್ಯ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳಾದ ವಿಘ್ನೇಶ್, ವಿಶ್ವಾಸ್ ಮತ್ತು ಜೀವನ್ ಅವರು ಮೂರು ಸಂಶೋಧನಾತ್ಮಕ ವೈಜ್ಞಾನಿಕ ಪ್ರಾಜೆಕ್ಟ್ ಮಂಡಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿಜ್ಞಾನ ಶಿಕ್ಷಕ ಬಿ.ಎಸ್. ಕುಮಾರಚಂದ್ರ ಅವರು ಈ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದರು ಎಂದು ಪ್ರಾಂಶುಪಾಲ ಪುರುಷೋತ್ತಮ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement