ಉಚಿತ ಮೂಳೆ ಸಾಂದ್ರತಾ ತಪಾಸಣಾ ಶಿಬಿರ
ಶೃಂಗೇರಿ: ಮುಂಬಯಿ ಗುಫಿಕ್ ಬಯೋಸೆನ್ಸ್, ರೋಟರಿ ಕ್ಲಬ್, ಇನ್ನರ್ ವೀಲ್ ಹಾಗೂ ವಿದ್ಯಾಶ್ರಿ ಕ್ಲಿನಿಕ್ ಸಹಯೋಗದೊದಿಗೆ ಪಟ್ಟಣದ ರೋಟರಿ ಭವನದಲ್ಲಿ ಉಚಿತ ಮೂಳೆ ಸಾಂದ್ರತಾ ತಪಾಸಣ ಶಿಬಿರ ಆಯೋಜಿಸಲಾಗಿತ್ತು.
ರೋಟರಿ ಕ್ಲಬ್ ಅಧ್ಯಕ್ಷ ಮಹೇಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಉತ್ತಮ ಆರೋಗ್ಯದಿಂದ ಉತ್ತಮ ಜೀವನ ನಡೆಸಬಹುದು. ಮೂಳೆಗಳು ಗಟ್ಟಿಯಾಗಿದ್ದರೆ ಮನುಷ್ಯನಿಗೆ ಬಲ. ಆದ್ದರಿಂದ ಮೂಳೆ ಬಗ್ಗೆ ರಕ್ಷಣೆ ಅಗತ್ಯ. ನೋವುಗಳು ಕಂಡಾಗ ಆಗಾಗ ತಪಾಸಣೆ ಮಾಡಿಸಿಕೊಳ್ಳಬೇಕು. ಇಂತಹ ಶಿಬಿರಗಳ ಸದುಪಯೋಗಪಡೆದುಕೊಳ್ಳಬೇಕು ಎಂದರು.
ಡಾ. ಅನಿತ್ ಕುಮಾರ್ ಮೊಳೆಗಳ ಸಂರಕ್ಷಣೆ ಬಗ್ಗೆ ವಿಶೇಷ ಮಾಹಿತಿ ನೀಡಿ, 30 ವರ್ಷಕ್ಕೆ ಮೇಲ್ಪಟ್ಟ ಎಲ್ಲಾ ಮಹಿಳೆ, ಪುರುಷರು ಕಡ್ಜಾಯವಾಗಿ ಮೂಳೆ ಸಾಂದ್ರತಾ ತಪಾಸಣೆ ಮಾಡಿಸಿಕೊಳ್ಳಬೇಕು. ಹೀಗೆ ತಪಾಸಣೆ ಮಾಡಿಸಿಕೊಳ್ಳುವುದರಿಂದ ಸಂದಿ ನೋವು, ಕೀಲು ನೋವು, ಮೂಳೆ ಸಾಂದ್ರತೆ ಬಗ್ಗೆ ತಿಳಿದುಕೊಳ್ಳಬಹುದಾಗಿದೆ. ವೈದ್ಯರ ಸಲಹೆ, ಸೂಚನೆ ಪಾಲಿಸಬೇಕು. ಮೂಳೆಗಳ ವಿಷಯದಲ್ಲಿ ನಿರ್ಲಕ್ಷ್ಯ ಮಾಡಬಾರದು ಎಂದರು.
ಇನ್ನರ್ ವೀಲ್ ಅಧ್ಯಕ್ಷೆ ಪೂರ್ಣಿಮಾ ಸಿದ್ದಪ್ಪ, ರಾಘವೇಂದ್ರ, ಗಣೇಶ್, ಕೃಪೇಶ್ ಮೊದಲಾದವರು ಉಪಸ್ಥಿತರಿದ್ದರು. ಶಿಬಿರದಲ್ಲಿ ಪಾಲ್ಗೊಂಡ ಶಿಬಿರಾರ್ಥಿಗಳಿಗೆ ಮೂಳೆ ಸಾಂದ್ರತೆ ತಪಾಸಣೆ ಹಾಗೂ ಚಿಕಿತ್ಸೆ ನೀಡಲಾಯಿತು. ಗಣೇಶ್ ಸ್ವಾಗತಿಸಿದರು.