ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕವಿಗೋಷ್ಠಿಗೆ ಅರ್ಜಿ ಆಹ್ವಾನ

Srinivasa Murthy VN
Updated On : 3 Feb 2014, 11:40 am

ಬಾಳೆಹೊನ್ನೂರು: ಬಾಳೆಹೊನ್ನೂರಿನಲ್ಲಿ ಫೆ. 14 ಮತ್ತು 15 ರಂದು ನಡೆಯಲಿರುವ ನರಸಿಂಹರಾಜಪುರ ತಾಲೂಕು ಏಳನೇ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಭಾಗವಹಿಸಲು ತಾಲೂಕಿನ ಉದಯೋನ್ಮುಖ ಕವಿಗಳಿಂದ ಕವನ ಆಹ್ವಾನಿಸಲಾಗಿದೆ. ಗೋಷ್ಠಿಯಲ್ಲಿ ಭಾಗವಹಿಸಲಿಚ್ಛಿಸುವ ಕವಿಗಳು ಸ್ವರಚಿತ ಎರಡು ಕವನಗಳನ್ನು ಎಸ್.ಜಿ. ಕೃಷ್ಣಮೂರ್ತಿ, ಅಧ್ಯಕ್ಷರು, ನರಸಿಂಹರಾಜಪುರ ತಾಲೂಕು ಕಸಾಪ, ನಿಸರ್ಗ ನಿಲಯ, ಬಾಳೆಹೊನ್ನೂರು ಅಂಚೆ, ಈ ವಿಳಾಸಕ್ಕೆ ಫೆ. 10 ರೊಳಗೆ ಕಳುಹಿಸಬಹುದು. ಫೆ. 10ರ ನಂತರ ಬಂದ ಕವನಗಳನ್ನು ಗೋಷ್ಠಿಗೆ ಪರಿಗಣಿಸಲಾಗುವುದಿಲ್ಲ. ಕವನವನ್ನು ಕಳುಹಿಸುವವರು ತಮ್ಮ ಹೆಸರು, ಪೂರ್ಣ ವಿಳಾಸ ಹಾಗೂ ದೂರವಾಣಿ ಸಂಖ್ಯೆಗಳನ್ನು ಸ್ಪಷ್ಟವಾಗಿ ನಮೂದಿಸಬೇಕು. ಗೋಷ್ಠಿಗೆ ಆಯ್ಕೆಯಾದ ಕವಿಗಳಿಗೆ ಮುಂಚಿತವಾಗಿ ತಿಳಿಸಲಾಗುವುದು. ಮಾಹಿತಿಗಾಗಿ ಮೊ. 9481411189.

ಪಶ್ಚಿಮಘಟ್ಟ ಜಲ, ಜೀವ ವೈವಿಧ್ಯದ ತಾಣ
ಶೃಂಗೇರಿ:  ಜಗತ್ತಿನ ಅಪರೂಪದ ಸಸ್ಯ ಪ್ರಭೇದ, ಪ್ರಾಣಿ ಪ್ರಭೇದ, ಮಳೆಯ ಕಾಡುಗಳನ್ನು ಹೊಂದಿರುವ ಪಶ್ಚಿಮ ಘಟ್ಟ ಜಲ ಜೀವವೈವಿಧ್ಯದ ತಾಣವಾಗಿದೆ ಎಂದು ಪರಿಸರ ತಜ್ಞ ಡಾ.ಸುಭಾಷ್‌ಚಂದ್ರ ಹೇಳಿದರು. ತಾಲೂಕಿನ ಅಡ್ಡಗೆದ್ದೆಯಲ್ಲಿ ಆಯೋಜಿಸಲಾಗಿದ್ದ ಜಿಲ್ಲಾಮಟ್ಚದ ಪರಿಸರ ಮತ್ತು ಜೀವವೈವಿಧ್ಯ ಕಾರ್ಯಾಗಾರದಲ್ಲಿ ಡಾ.ಮಾದವ ಗಾಡ್ಗಿಳ್ ವರದಿ ಹಾಗೂ ಡಾ.ಕಸ್ತೂರಿ ರಂಗನ್ ವರದಿ ಬಗ್ಗೆ ಅವರು ಮಾತನಾಡಿದರು. ಇಲ್ಲಿ ಅಪರೂಪದ 2 ಸಾವಿರಕ್ಕಿಂತಲೂ ಹೆಚ್ಚಿನ ಸಸ್ಯಪ್ರಭೇದಗಳಿವೆ. ಇವು ನಾಶ ಹೊಂದಿದರೆ ಮತ್ತೆ ಬೆಳೆಸಲು ಸಾಧ್ಯವಿಲ್ಲ. ಇಂತಹ ಅಪರೂಪದ ಸಸ್ಯಪ್ರಭೇದಗಳನ್ನು ರಕ್ಷಿಸಿ ಉಳಿಸಬೇಕಿದೆ ಎಂದರು.
1920 ರಿಂದ 1980 ರವರೆಗೆ ಶೇ.40ರಷ್ಟು ಕಾಡುಗಳು ನಾಶವಾಗಿವೆ. ಭಾರತದಲ್ಲಿ ಬ್ರಿಟಿಷರ ಆಡಳಿತ ಅವಧಿಯಿಂದ ಅರಣ್ಯ ನಾಶವಾಗುತ್ತಾ ಬಂದಿದೆ. ಸಾಗವಾನಿ, ನಂದಿ, ಬೀಟೆ ಮೊದಲಾದ ಬೆಲೆಬಾಳುವ ಮರಗಳನ್ನು ಕಡಿದು ತಮ್ಮ ದೇಶಗಳಿಗೆ ಸಾಗಿಸುತ್ತಿದ್ದರು. ಕಾಡು ಪ್ರಾಣಿಗಳನ್ನು ಬೇಟೆಯಾಡುತ್ತಿತ್ತು ಎಂದರು.

ಮಡಿವಾಳ ಎಂದೇ ನಮೂದಿಸಿ
ಚಿಕ್ಕಮಗಳೂರು: ರಾಜ್ಯದಲ್ಲಿ ಜಾತಿವಾರು ಗಣತಿ ಆರಂಭವಾಗಿದ್ದು, ಮಡಿವಾಳ ಸಮುದಾಯದವರು ತಮ್ಮ ಜಾತಿಯನ್ನು ಮಡಿವಾಳ ಎಂಬುದಾಗಿ ನಮೂದಿಸಬೇಕು ಎಂದು ಜಿಲ್ಲಾ ಮಡಿವಾಳ ಸಂಘದ ಪ್ರಧಾನ ಕಾರ್ಯದರ್ಶಿ ಎಸ್. ರಾಮಚಂದ್ರ ಮನವಿ ಮಾಡಿದ್ದಾರೆ.
ಈ ಹಿಂದೆ ಮಡಿವಾಳ ಜನಾಂಗದ ಕೆಲವರು ಶಾಲಾ ದಾಖಲಾತಿ ಮತ್ತು ಜಾತಿ ಪ್ರಮಾಣಪತ್ರ ಪಡೆಯುವ ಸಂದರ್ಭಗಳಲ್ಲಿ ತಮ್ಮ ಜಾತಿಯನ್ನು ಮಡಿವಾಳ ಶೆಟ್ಟಿ ಎಂದು ಘೋಷಿಸಿಕೊಂಡಿದ್ದಾರೆ.
ಇದು, ತಪ್ಪಾಗಿದ್ದು, ಜಾತಿ ಗಣತಿಯಲ್ಲಿ ಮಡಿವಾಳ ಎಂಬುದಾಗಿ ನಮೂದಿಸಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement