ದೇಶದಲ್ಲಿ ಹೆಚ್ಚಿದ ಭ್ರಷ್ಟಾಚಾರ: ವಿಷಾದ
ಕ.ಪ್ರ.ವಾರ್ತೆ ಕೊಪ್ಪ ಫೆ.2
ಸ್ವಾತಂತ್ರ್ಯ ಬಂದ ನಂತರದ ಭಾರತದಲ್ಲಿ ಧರ್ಮಕ್ಕೆ ಮಹತ್ವವಿಲ್ಲದಂತಾಗಿ ದೇಶದಲ್ಲಿ ಭ್ರಷ್ಟಾಚಾರ, ಅರಾಜಕತೆ ತಂಡವಾಡುತ್ತಿದೆ ಎಂದು ನಿವೃತ್ತ ನ್ಯಾಯಮೂರ್ತಿ ಡಾ. ರಾಮಾಜೋಯಿಸ್ ವಿಷಾದ ವ್ಯಕ್ತಪಡಿಸಿದರು.
ತಾಲೂಕಿನ ಬಾಳಗಡಿಯಲ್ಲಿ ಫಾಲಚಂದ್ರ ಯಜ್ಞ ಕ್ಷೇತ್ರ ಟ್ರಸ್ಟ್ ನೂತನವಾಗಿ ನಿರ್ಮಿಸಿರುವ ಮಹಾಗಣಪತಿ, ಶನೈಶ್ಚರ, ದುರ್ಗಾಪರಮೇಶ್ವರಿ ದೇವಸ್ಥಾನ ಹಾಗೂ ಭಾರತೀತೀರ್ಥ ಸಭಾಭವನದ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು.
ಸಂಪದ್ಭರಿತವಾಗಿತ್ತು; ಭಾರತ ಎಂಬುದಕ್ಕೆ ಅತ್ಯಂತ ಮಹತ್ವವಿದೆ. ಉತ್ತರದಲ್ಲಿ ಶಿಖರವಿದ್ದು, ದಕ್ಷಿಣದಲ್ಲಿ ಸಮುದ್ರ ವಿದ್ದು ಇದರ ಮಧ್ಯದಲ್ಲಿರುವುದೇ ಭಾರತ ಸ್ವತಂತ್ರ ಪೂರ್ವದಲ್ಲಿ ಭಾರತ ಎಂಬ ಹೆಸರಿದ್ದ ದೇಶದಲ್ಲಿ ಎಲ್ಲರೂ ಧರ್ಮಪಾಲನೆ ಮಾಡುತ್ತಿದ್ದರಿಂದ ದೇಶ ಸಂಪತ್ತು ಭರಿತವಾಗಿ ಧರ್ಮ ರಾರಾಜಿಸುತ್ತಿತ್ತು ಅದರೆ ಭಾರತವನ್ನು ಇಂಡಿಯಾ ಎಂದು ನಾಮಕಾರಣವಾದ ನಂತರದ ದೇಶದಲ್ಲಿ ಧರ್ಮಕ್ಕೆ ಹೆಚ್ಚು ಮಹತ್ವವಿಲ್ಲದಂತೆ ಅಗಿಹೋಯಿತು ಎಂದು ವಿಷಾದ ವ್ಯಕ್ತಪಡಿಸಿದರು.
ಶೃಂಗೇರಿ ಜಗದ್ಗುರು ಭಾರತೀತೀರ್ಥ ಶ್ರೀಗಳು ಮಾತನಾಡಿ, ಒಳ್ಳೆಯ ಮತ್ತು ಕೆಟ್ಟ ಕೆಲಸಗಳನ್ನು ನಿರ್ಧಾರಮಾಡಿ ಫಲ ನೀಡುವ ಭಗವಂತನಲ್ಲಿ ಭೇದವಿಲ್ಲ.
ಅವನ ದೃಷ್ಟಿಯಲ್ಲಿ ಎಲ್ಲರೂ ಒಂದೇ. ಯಾರು ನಿಷ್ಕಲ್ಮಷ ಮನಸ್ಸಿನ ಭಕ್ತಿಯಿಂದ ದೇವರನ್ನು ಆರಾಧಿಸುತ್ತಾನೋ ಅವನಿಗೆ ದೇವರು ಅನುಗ್ರಹಿಸುತ್ತಾನೆ ಎಂದರು. ಡಾ.ವಿ.ಆರ್. ಗೌರೀಶಂಕರ್, ಶಾಸಕ ಡಿ.ಎನ್. ಜೀವರಾಜ್, ಜಿಪಂ ಮಾಜಿ ಅಧ್ಯಕ್ಷ ರಾಜೇಗೌಡ, ಮುಂಬಯಿಯ ಉದ್ಯಮಿ ಆರ್.ಕೆ. ಶೆಟ್ಟಿ ಸೇರಿದಂತೆ ಹಲವರು ಇದ್ದರು.