ವಿದ್ಯುತ್ ತಂತಿ ತಗುಲಿ ಟ್ರ್ಯಾಕ್ಟರ್ನಲ್ಲಿದ್ದ ಹುಲ್ಲಿಗೆ ಬೆಂಕಿ
ನರಸಿಂಹರಾಜಪುರ: ಸೀತೂರು ಗ್ರಾಪಂ ವ್ಯಾಪ್ತಿಯ ದೇವಾಲೆ ಕುಣಜದ ಸೇತುವೆ ಸಮೀಪದ ಮುಖ್ಯ ರಸ್ತೆಯಲ್ಲಿ ಹುಲ್ಲು ತುಂಬಿದ ಟ್ರ್ಟಾಕ್ಟರ್ ಒಂದಕ್ಕೆ ವಿದ್ಯುತ್ ತಂತಿ ತಗುಲಿ ಟ್ರಾಕ್ಟರ್ ನಲ್ಲಿದ್ದ ಹುಲ್ಲಿಗೆ ಬೆಂಕಿ ಬಿದ್ದು ಒಂದು ಸಾವಿರ ಹುಲ್ಲಿನ ಕಟ್ಟು ಸುಟ್ಟು ಹೋದ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.
ಕುಣಜದ ಶ್ರೀಧರ್ ಎಂಬುವರಿಂದ ಶೃಂಗೇರಿಯ ಕೃಷ್ಣ ಎಂಬುವರು ಹುಲ್ಲು ಖರೀದಿಸಿ ಟ್ರಾಕ್ಟರ್ಗೆ ತುಂಬಿ ಶೃಂಗೇರಿಗೆ ಹೊರಟಿದ್ದರು. ವಿದ್ಯುತ್ ಲೈನಿಗೆ ಹುಲ್ಲು ತಾಗಿಕೊಂಡು ಹೋಗಿದ್ದು ಇದರಿಂದ ಎರಡು ತಂತಿ ಒಟ್ಟಾಗಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಟ್ರಾಕ್ಟರನ್ನು ನಿಲ್ಲಿಸಿ ಹುಲ್ಲಿಗೆ ಕಟ್ಟಿದ ಹಗ್ಗ ಬಿಚ್ಚುವ ಪ್ರಯತ್ನ ಮಾಡಿದಾಗ ಟ್ರಾಕ್ಟರ್ ಚಾಲಕ ಕೃಷ್ಣ ಎಂಬುವರ ಕೈಗೆ ಸ್ವಲ್ಪ ಸುಟ್ಟ ಗಾಯಗಳಾಗಿದೆ. ಟ್ರ್ಯಾಕ್ಟರ್ಗೆ ಹಾನಿಯಾಗಿಲ್ಲ. 800 ಕ್ಕೂ ಹೆಚ್ಚು ಹುಲ್ಲು ಮೆದೆ ಸುಟ್ಟು ಹೋಗಿದೆ.