ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

'ಸಂಘ ರಚನೆಯಿಂದ ಯುವಕರಿಗೆ ಮಾರ್ಗದರ್ಶನ'

Srinivasa Murthy VN
Updated On : 3 Feb 2014, 11:39 am

ಕಡೂರು:  ಸಂಘ ರಚಿಸುವ ಮೂಲಕ ಯುವಕರಿಗೆ ಮಾರ್ಗದರ್ಶಕವಾಗಿ ಸಮಾಜದಲ್ಲಿರುವ ಹಿಂದುಳಿದಿರುವವರನ್ನು ಗುರುತಿಸಿ, ಸಂಘದ ಮುಖೇನ ಸಹಾಯ ಹಸ್ತ ನೀಡುವ ಪ್ರಮುಖ ಉದ್ದೇಶದಿಂದ ಕಡೂರು ಪಟ್ಟಣದಲ್ಲಿ ಗಂಗಾಪರಮೇಶ್ವರಿ ಯುವಕ ಸಂಘ ರಚನೆ ಮಾಡುತ್ತಿರುವುದಾಗಿ ಸಂಘದ ಅಧ್ಯಕ್ಷ ರೇಣುಕಾಮೂರ್ತಿ ಹೇಳಿದರು.
ಪಟ್ಟಣದ ಛತ್ರದ ಬೀದಿಯ ಬೆಂಕಿ ಕಾಲೋನಿಯ ಕಲ್ಲತ್ತಿಗಿರಿ ಚೌಡಮ್ಮನವರ ದೇವಾಲಯದ ಸಮುದಾಯ ಭವನದಲ್ಲಿ ನೂತನ ಸಂಘದ ರಚನೆ ನಂತರ ಮಾತನಾಡಿದ ಅವರು, ಗಂಗಾಮತಸ್ಥ ಸಮಾಜದಲ್ಲಿ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಹಿಂದುಳಿದಿರುವವರನ್ನು ಗುರುತಿಸಿ, ಅಂತಹ ಕುಟುಂಬಗಳನ್ನು ಆಸರೆ ಸಹಾಯ ಮಾಡುವ ಸದಾಶಯ ಹೊತ್ತು ಯುವಕರನ್ನು ಹೊಂದಿರುವ ಸಂಘವನ್ನು ಸಮಾಜದ ಹಿರಿಯರ ಮತ್ತು ಮುಖಂಡರ ಸಲಹೆ ಸಹಕಾರದೊಂದಿಗೆ ಅಧಿಕೃತ ರಚಿಸಲಾಗಿದೆ ಎಂದರು.
ರಾಜ್ಯದಲ್ಲಿ ಸುಮಾರು 50 ಲಕ್ಷ ಜನಸಂಖ್ಯೆ ಹೊಂದಿರುವ ಗಂಗಾಮತಸ್ಥ ಸಮಾಜ ಹಿಂದುಳಿದ ವರ್ಗಗಳಲ್ಲಿಯೇ ಇದೆ. ರಾಜಕೀಯ ಪ್ರಾತಿನಿಧ್ಯದಲ್ಲೂ ಹಿಂದುಳಿದಿದ್ದು, ಇತರೆ ಹಿಂದುಳಿದ ಸಮಾಜದೊಂದಿಗೆ ಅನ್ಯೋನ್ಯತೆಯಿಂದ ಹಿಂದುಳಿದವರ ಪರವಾಗಿಯೇ ಹೋರಾಟ ಮಾಡುತ್ತಾ ಬಂದಿದೆ ಎಂದರು.
ಇದೀಗ ಸಮಾಜದ ಎಲ್ಲಾ ಯುವ ಸಮೂಹ ಎಚ್ಚೆತ್ತುಕೊಂಡು ಗಂಗಾಮತಸ್ಥ ಸಮಾಜದಲ್ಲಿರುವ ಅಬಲರು, ನೊಂದವರನ್ನು ರಕ್ಷಿಸುವ, ಸಂಘಟಿಸುವ ಮತ್ತು ಹೋರಾಟಕ್ಕೆ ಸಜ್ಜು ಮಾಡುವ ಹಿನ್ನೆಲೆಯಲ್ಲಿ ಪ್ರತೀ ತಾಲೂಕುಗಳಲ್ಲೂ ಸಮಾಜದ ಧ್ಯೇಯೋದ್ದೇಶಗಳೊಂದಿಗೆ ಒಂದಾಗಬೇಕಾದ ಅವಶ್ಯಕತೆಯಿದೆ ಎಂದವರು ಹೇಳಿದರು.
ತಾಲೂಕಿನ ಸಮಾಜದ ಎಲ್ಲ ಭಾಂಧವರು, ಯುವಕರು, ಮುಖಂಡರು ಸಹಕಾರ ಸಲಹೆ ನೀಡಬೇಕು ಎಂದು ಕೋರಿ ತಮ್ಮ ಆಯ್ಕೆಗೆ ಸಹಕರಿಸಿದ ಸಮಾಜ ಬಾಂಧವರಿಗೆ ರೇಣುಕಾಮೂರ್ತಿ ವಂದಿಸಿದರು.
ಇದೇ ಸಂದರ್ಭದಲ್ಲಿ ಸಂಘದ ನೂತನ ನಾಮಫಲಕ ಉದ್ಘಾಟಿಸಲಾಯಿತು. ಕಾರ್ಯಕ್ರಮದಲ್ಲಿ ಸಂಘದ ಹಿರಿಯ ಮುಖಂಡ ಕೋಳಿ ಮೂರ್ತಿ, ಉಪಾಧ್ಯಕ್ಷ ಮಂಜುನಾಥ್, ಖಜಾಂಚಿ ಕೆ.ಜಿ. ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಕೆ.ಸಿ. ರಾಜು, ಸಹಕಾರ್ಯದರ್ಶಿ ರಂಗನಾಥ್, ಸದಸ್ಯ ಕೆ.ಸಿ. ಕೃಷ್ಣಮೂರ್ತಿ, ಶೇಖರಪ್ಪ, ಲೋಕೇಶ್, ನಾಗರಾಜ್, ಜಗದೀಶ್, ಚಂದ್ರಶೇಖರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದು ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement