ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

7ರಂದು ದುರ್ಗಾಂಬಿಕಾ ದೇವಿ ರಥೋತ್ಸವ

Srinivasa Murthy VN
Updated On : 5 Feb 2014, 11:06 am

ಕಡೂರು: ಫೆ.7ರಂದು ಪಟ್ಟಣದ ಸುಭಾಷ್ ನಗರದ ಶ್ರೀ ದುರ್ಗಾಂಬಿಕಾ ದೇವಿಯವರ ಮಹಾರಥೋತ್ಸವವು  ಅದ್ಧೂರಿಯಾಗಿ ನಡೆಯಲಿದೆ.
ಫೆಬ್ರವರಿ 3ರಿಂದ ಚಾಲನೆಗೊಂಡಿರುವ ಶ್ರೀ ದೇವಿಯವರ ಜಾತ್ರಾ ಮಹೋತ್ಸವಕ್ಕೆ ಕುಂತಿಹೊಳೆ ಪೂಜೆಯೊಂದಿಗೆ ಜಾತ್ರೆಗೆ ಚಾಲನೆ ಸಿಕ್ಕಿದ್ದು, ಫೆಬ್ರವರಿ 5ರ ಬುಧವಾರ ಕಳಸ ಸ್ಥಾಪನೆ ನಡೆಯಲಿದೆ. 7ರ ಶುಕ್ರವಾರ ಬೆಳಿಗ್ಗೆ 10.30ಕ್ಕೆ ಶ್ರೀ ಅಮ್ಮನವರಿಗೆ ಮದುವಣಿಗಿತ್ತಿ ಶಾಸ್ತ್ರ ನಡೆಯಲಿದ್ದು, ಸಂಜೆ ಬಾವುಟದ ಹರಾಜು ನಡೆಯಲಿದೆ. ಸಂಜೆ 5.30ಕ್ಕೆ  ಶ್ರೀ ಅಮ್ಮನವರ ಮಹಾರಥೋತ್ಸವವು ಸರ್ವ ಭಕ್ತಾಧಿಗಳ ಸಮ್ಮುಖದಲ್ಲಿ ನಡೆಯಲಿದೆ. 8ರ ಶನಿವಾರ ಶ್ರೀ ಅಮ್ಮನವರ ಉತ್ಸವ ನಡೆಯಲಿದೆ. ರಾತ್ರಿ 8.30ಕ್ಕೆ ದೇವಾಲಯದ ಅವರಣದಲ್ಲಿ ಅರಸೀಕರೆಯ ಶ್ರೀ ನಾಟ್ಯಾಂಜಲಿ ನೃತ್ಯ ವೃಂದದಿಂದ ಜನಪ್ರಿಯ ಗೀತೆಗಳ ನೃತ್ಯ ಪ್ರದರ್ಶನ ನಡೆಯಲಿದೆ.
ಶ್ರೀ ದೇವಿಯವರ ಜಾತ್ರಾ ಮಹೋತ್ಸವದ ಅಂಗವಾಗಿ 8 ರ ಶನಿವಾರ ರಾತ್ರಿ 8 ಗಂಟೆಗೆ ಕರ್ನಾಟಕ ರಾಜ್ಯದ ಸುಪ್ರಸಿದ್ದ ಮದ್ದೂರು ರಂಗಭೂಮಿ ಕಲಾವಿದರ ಸಂಘದಿಂದ ಬೆಸಗರಹಳ್ಳಿ ಡಾ ಆಗ್.ಡಿ. ಈಶ್ವರಾಚಾರ್ ರಚಿತ ತಂಡದ ವ್ಯವಸ್ಥಾಪಕರಾದ ಹೆಮ್ಮನಹಳ್ಳಿ ಪುಟ್ಟಸ್ವಾಮಿಯವರ 71ನೇ ಪ್ರಯೋಗವಾದ ಕುರಿದೊಡ್ಡಿ ಕುರುಕ್ಷೇತ್ರ ಎಂಬ ಸಾಮಾಜಿಕ ನಾಟಕ ಪ್ರದರ್ಶನ ನಡೆಯಲಿದೆ.
ಪಾತ್ರವರ್ಗದಲ್ಲಿ ಕಡೂರು ಆಹಾರ ಇಲಾಖೆ ನಿರೀಕ್ಷಕರಾದ ಎಂ.ವಿ. ಚಂದ್ರಮೂರ್ತಿ ಮತ್ತಿತರ ತಂಡವು ಅಭಿನಯಿಸಲಿದೆ ಎಂದು ದೇವಾಲಯದ ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement