ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಅಂತರಘಟ್ಟಮ್ಮ ದೇವಿ ಮಹಾರಥೋತ್ಸವ

Srinivasa Murthy VN
Updated On : 5 Feb 2014, 11:04 am

ಬೀರೂರು: ಬೀರೂರು ಗ್ರಾಮದೇವತೆ ಶ್ರೀ ಅಂತರಘಟ್ಟಮ್ಮ ದೇವಿಯ ಮಹಾರಥೋತ್ಸವ ಮಂಗಳವಾರ ಶ್ರದ್ಧಾಭಕ್ತಿಗಳಿಂದ ವೈಭವದಿಂದ ನಡೆಯಿತು.
ಕಳೆದ ವರ್ಷ ನೂತನವಾಗಿ ನಿರ್ಮಿಸಿದ ರಥದಲ್ಲಿ ದೇವಿಯ ಉತ್ಸವ ಮೂರ್ತಿಯನು ಪ್ರತಿಷ್ಠಾಪಿಸಿ ವಿಶೇಷ ಹೂವಿನ ಅಲಂಕಾರಗಳೊಂದಿಗೆ ಪೂಜೆ ಅಲಂಕಾರಗಳ ನಂತರ ರಥವನು ಎಳೆಯಲಾಯಿತು. ವಿವಿಧ ವಾದ್ಯಗಳು ಹಾಗೂ ಸೋಮನಕುಣಿತ ಮಾರ್ಗದುದ್ದಕ್ಕೂ ಭಕ್ತಾದಿಗಳಿಗೆ ಹರ್ಷವನುಂಟು ಮಾಡಿತು. ಹಳೇಪೇಟೆ ಆಂಜನೇಯ ದೇವಾಲಯದ ವರೆಗೆ ರಥ ಎಳೆದು ನಂತರ ಶೃಂಗಾರಗೊಂಡಿದ್ದ ಜೋಡೆತ್ತುಗಳ ಪಾನಕದ ಬಂಡಿಗಳ ಓಟದ ನೋಟ ನೆರೆದಿದ್ದ ಸಾವಿರಾರು ಭಕ್ತರನು ರಂಜಿಸಿತು.
ಭಕ್ತರಿಗೆ ಗಾಯ: ಜೋಡೆತ್ತಿನ ಗಾಡಿಯ 60ಕ್ಕೂ ಹೆಚ್ಚಿನ ಗಾಡಿಗಳು ವೇಗವಾಗಿ ಮಾರನವಮಿ ಬಯಲಿನ ಓಡಿಸುವ ಭರದಲ್ಲಿ ಮಾರ್ಗದ ಎರಡು ಬದಿಯಲ್ಲಿ ನಿಂತಿದ್ದ ಸಾವಿರಾರು ಭಕ್ತರಿದ್ದು ಗಾಡಿ ನುಗ್ಗಿದ ರಭಸಕ್ಕೆ ದೇವರಾಜ್, ನಲ್ಲಯ್ಯ ಹಾಗೂ ಸುನಿಲ್ ಎಂಬುವವರ ಕೈಕಾಲುಗಳಿಗೆ ಪೆಟ್ಟು ಬಿದ್ದಿದ್ದು ಸ್ಥಳೀಯ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ರಥೋತ್ಸವದ ಅಂಗವಾಗಿ ಧ್ವಜಾರೋಹಣ ಕಂಕಣಧಾರಣೆ ಗಣಂಗಳ ಸೇವೆ, ದುಗ್ಗಳ ಸೇವೆ, ಭ್ರಹ್ಮರಥಾರೋಹಣ ನಡೆಯಿತು. ಬುಧವಾರ ದೇವಿಗೆ ಊರಿನ ರಾಜಬೀದಿಗಳಲ್ಲಿ ಉತ್ಸವ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement