ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ನೇತಾಜಿ ಅಪ್ರತಿಮ ದೇಶ ಭಕ್ತ: ದೇವೇಂದ್ರ

Srinivasa Murthy VN
Updated On : 5 Feb 2014, 11:06 am

ಕಡೂರು: ಜೈ ಹಿಂದ್ ಘೋಷ ವಾಕ್ಯದಿಂದ ದೇಶದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಹೊಸ ಸಂಚಲನ ತಂದಿತ್ತ ನೇತಾಜಿ ಸುಭಾಷ್ ಚಂದ್ರಬೋಸ್ ದೇಶ ಕಂಡ ಅತ್ಯಂತ ಪ್ರಭಾವ ಶಾಲಿ ಕ್ರಾಂತಿಕಾರಕ ನಾಯಕ ಎಂದು ಮಾನಸ ಮಹಿಳಾ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ಸಂಚಾಲಕ ಕಡೂರು ದೇವೇಂದ್ರ ಹೇಳಿದರು.
ಅವರು ಪಟ್ಟಣದಲ್ಲಿರುವ ಸಂಸ್ಥೆಯ ಕಾರ್ಯಾಲಯದಲ್ಲಿ ಸುಭಾಷ್ ಚಂದ್ರ ಬೋಸರ 115ನೇ  ಜನ್ಮ ದಿನೋತ್ಸವ ಆಚರಣಾ ಸಮಾರಂಭದಲ್ಲಿ ಮಾತನಾಡಿ, ನೇತಾಜಿಯವರು ಶ್ರೀಮಂತ ಕುಟುಂಬದಲ್ಲಿ ಜನಿಸಿದ್ದರು.ದೇಶಕ್ಕೆ ಸ್ವಾತಂತ್ರ್ಯ ಗಳಿಸಬೇಕೆಂಬ ಸದುದ್ದೇಶದಿಂದ ಸ್ವಾತಂತ್ರ್ಯ ಸಂಗ್ರಾಮಕ್ಕೆ ದೇಶ ವಿದೇಶಗಳಲ್ಲೆಲ್ಲಾ ಸಂಚರಿಸಿ
ತಮ್ಮದೇ ಆದ ಯುವಕರ ಪಡೆ ಕಟ್ಟಿ ಬ್ರಿಟೀಷರನು ವಿರುದ್ಧ ದೊಡ್ಡ ತಂತ್ರಗಳನು ಹೆಣೆದಿದ್ದರು. ಆದರೆ, ಅನಿರೀಕ್ಷಿತ ಬೆಳವಣಿಗೆಯಲ್ಲಿ ದೇಶ ಸ್ವಾತಂತ್ರ್ಯ ಕಾಣುವ ಮುನವೇ ಅವರು ನಮ್ಮಿಂದ ಕಾಣದೆ ಹೋದರು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷೆ ಎಸ್.ಪಿ. ಜ್ಯೋತಿ ಮಾತನಾಡಿ, ದೇಶಾಭಿಮಾನ ಶಿಸ್ತು, ಆದರ್ಶ, ತ್ಯಾಗ ಮತ್ತು  ಕ್ರಾಂತಿಕಾರಕ ಗುಣಗಳನು ಮೈಳೈಸಿರುವ ಏಕೈಕ ವ್ಯಕ್ತಿಯೆಂದರೆ ನೇತಾಜಿಯವರು. ಅವರ ಗುಣಗಳನೆಲ್ಲ ಅಳವಡಿಸಿಕೊಳ್ಳುವ ಮೂಲಕ ಸಮಾಜದ ಉನತಿಗಾಗಿ ಎಲ್ಲರೂ ಶ್ರಮಿಸಬೇಕು ಎಂದರು.
ಸಂಸ್ಥೆಯ ಸದಸ್ಯ ಎಸ್. ರಾಜು ಮಾತನಾಡಿದರು. ಕಾರ್ಯಕ್ರಮದಲ್ಲಿ ಕೆ.ಜೆ. ರಾಮಪ್ರಸಾದ್, ಲೀಲಾವತಮ್ಮ, ಪದ್ಮ, ಮಂಗಳ, ಶಿಲ್ಪ, ಇರ್ಶಾದ್ ಬಾನು ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement