ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಆಶೋದಯ ಸಂಸ್ಥೆ ಪ್ರತಿಭಟನೆ
ಚಿಕ್ಕಮಗಳೂರು: ಎ.ಆರ್.ಟಿ., ಐಸಿಟಿಸಿ ಮತ್ತು ಎಸ್.ಟಿ.ಐ. ಆಪ್ತ ಸಮಾಲೋಚಕರ ಬೇಡಿಕೆಗಳನು ಈಡೇರಿಸುವಂತೆ ಆಗ್ರಹಿಸಿ ಆಶೋದಯ ಸಂಸ್ಥೆಯವರು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಸಂಸ್ಥೆಯ ಅಧ್ಯಕ್ಷೆ ಭಾನು ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಆಶೋದಯ ಸಂಸ್ಥೆ, ಮಹಿಳಾ, ಪುರುಷ ಹಾಗೂ ಮಂಗಳಮುಖಿ ಸಮುದಾಯದೊಂದಿಗೆ ಆರೋಗ್ಯ, ಸಾಮರ್ಥ್ಯ ಬೆಳವಣಿಗೆ ಹಾಗೂ ಮುಖ್ಯವಾಹಿನಿಗೆ ತರುವ ದೃಷ್ಟಿಯಿಂದ ಮೈಸೂರು, ಮಂಡ್ಯ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಆಶೋದಯ ಸಂಸ್ಥೆ ಎಚ್.ಐ.ವಿ. ನಿಯಂತ್ರಣ ಕಾರ್ಯದಲ್ಲಿ ತೊಡಗಿದ್ದು, ಕಳೆದ ಒಂದು ವಾರಗಳಿಂದ ಎ.ಆರ್.ಟಿ., ಐಸಿಟಿಸಿ ಮತ್ತು ಎಸ್.ಟಿ.ಐ. ಆಪ್ತ ಸಮಾಲೋಚಕರು ಬೇಡಿಕೆಗಳನು ಈಡೇರಿಸುವಂತೆ ಆಗ್ರಹಿಸಿ ಧರಣಿ ನಡೆಸುತ್ತಿದ್ದಾರೆ.
ಅದರಿಂದ ಎಚ್.ಐ.ವಿ. ಬಾಧಿತರಿಗೆ ತುಂಬಾ ತೊಂದರೆಯಾಗಿದ್ದು, ಯಾವುದೇ ರೀತಿ ಎಆರ್‌ಟಿ, ಎಸ್.ಟಿಐ ಚಿಕಿತ್ಸೆಯಾಗಲೀ, ಔಷಧಿಗಳಾಗಲಿ, ಆಪ್ತ ಸಮಾಲೋಚನೆಯಾಗಲಿ ದೊರೆಯುತ್ತಿಲ್ಲ. ಆದುದರಿಂದ ಆಪ್ತ ಸಮಾಲೋಚಕರ ಬೇಡಿಕೆಗಳನು ಈಡೇರಿಸಬೇಕೆಂದು ಆಗ್ರಹಿಸಿದ್ದಾರೆ.