ಚುನಾವಣಾ ಪ್ರಭಾರಿ ನೇಮಕ
ಚಿಕ್ಕಮಗಳೂರು: ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಶಕ್ತಿಕೇಂದ್ರಗಳ ಚುನಾವಣಾ ಪ್ರಭಾರಿಗಳನ್ನು ನೇಮಕ ಮಾಡಿದೆ.
ಬಿಜೆಪಿ ಕಾರ್ಯಲಯದಲ್ಲಿ ಪಕ್ಷದ ನಗರ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಚಿಕ್ಕಮಗಳೂರು ಕ್ಷೇತ್ರಗಳಿಗೆ ಚುನಾವಣಾ ಪ್ರಭಾರಿಗಳ ತಂಡವನ್ನು ಘೋಷಿಸಲಾಯಿತು. ಮುಂಬರುವ ಲೋಕಸಭಾ ಕ್ಷೇತ್ರದ ಸಂಪೂರ್ಣವಾಗಿ ಚುನಾವಣೆ ಸಜ್ಜಾಗಲು ಈ ತಂಡವನ್ನು ಘೋಷಿಸಿದ್ದು, ಈ ತಂಡದ ನೇತೃತ್ವದಲ್ಲಿ ಚುನಾವಣೆ ಎದುರಿಸಲು ಸನ್ನದ್ಧರಾಗಿದ್ದಾರೆ ಎಂದು ವರಸಿದ್ಧಿ ವೇಣುಗೋಪಾಲ್‌ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ವಕ್ತಾರ ಎಚ್.ಡಿ. ತಮ್ಮಯ್ಯ, ಜಿಲ್ಲಾ ಕಾರ್ಯದರ್ಶಿ ಟಿ. ರಾಜಶೇಖರ್, ಹಂಪಯ್ಯ, ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷರಾದ ಕನಕರಾಜ್ ಅರಸ್, ಜಿಲ್ಲಾ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶ ಬಿ.ಜಿ. ಸೋಮಶೇಖರ್, ನಗರಸಭಾ ಅಧ್ಯಕ್ಷ ಕೆ.ಎಸ್. ಪುಷ್ಪರಾಜ್, ಉಪಾಧ್ಯಕ್ಷ ಅಪ್ಸರ್ ಅಹಮ್ಮದ್, ನಗರ ಪ್ರಧಾನ ಕಾರ್ಯದರ್ಶಿ ರವೀಂದ್ರನಾಥ ಪ್ರಭು, ಸುಧೀರ್, ದೇವರಾಜ್ ಶೆಟ್ಟಿ, ಮಧುಕುಮಾರ್ ರಾಜ್ ಅರಸ್, ನಗರಸಭಾ ಸದಸ್ಯ ಸಿ.ಎಸ್. ರವಿ, ಕೃಷ್ಣಪ್ಪ, ಗ್ರಾಮಾಂತರ ಮಂಡಲ ಅಧ್ಯಕ್ಷ ಚಿಕ್ಕದೇವನೂರು ರವಿ, ಪ್ರಧಾನ ಕಾರ್ಯದರ್ಶಿ ಬಸವರಾಜು, ಹೇಮರಾಜು ಉಪಸ್ಥಿತರಿದ್ದರು.