ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಸಂಭ್ರಮದ ಮಳಲೂರಮ್ಮ ರಥೋತ್ಸವ

Srinivasa Murthy VN
Updated On : 23 Mar 2014, 10:54 am

ಕ.ಪ್ರ.ವಾರ್ತೆ ಚಿಕ್ಕಮಗಳೂರು ಮಾ.22
ತಾಲೂಕಿನ ಮಲ್ಲಂದೂರಿನಲ್ಲಿ ಕಡಗಲು ನಾಡು ಮಳಲೂರಮ್ಮ ದೇವರ ರಥೋತ್ಸವ ಸಹಸ್ರಾರು ಭಕ್ತರ ನಡುವೆ ಶನಿವಾರ ಶ್ರದ್ಧಾ- ಭಕ್ತಿಯಿಂದ ನೆರವೇರಿತು.
ಕಳೆದ ಮೂರು ದಿನಗಳ ಹಿಂದೆ ಪೂಜಾ ಕೈಂಕರ್ಯಗಳೊಂದಿಗೆ ಆರಂಭವಾದ ಜಾತ್ರಾ ಮಹೋತ್ಸವದಲ್ಲಿ ಬೆಟ್ಟದಮಳಲಿ, ಆವತಿ, ಬ್ಯಾರವಳ್ಳಿ, ಬೈಗೂರು, ಕೆರೆಮಕ್ಕಿ, ಹೊಲದಗದ್ದೆ, ಉಳುವಾಗಿಲು ಮೂಡಿಗೆರೆ, ತರೀಕೆರೆ, ಶೃಂಗೇರಿ, ಮಾಕೋಡು ಸೇರಿದಂತೆ ವಿವಿಧೆಡೆಗಳಿಂದ ಆಗಮಿಸಿದ್ದ ಏಳೂರು ನಾಡಿನ ಹದಿನಾರುಹಳ್ಳಿ, ಇಪ್ಪತ್ತೊಂದು ಗ್ರಾಮಗಳಿಂದ ಭಕ್ತರು ಶ್ರದ್ಧಾ- ಭಕ್ತಿಯಿಂದ ಪಾಲ್ಗೊಂಡಿದ್ದರು.
ವೀರಭದ್ರೇಶ್ವರ, ಬೆಟ್ಟದಾಳಮ್ಮ, ದೊಡ್ಡಮ್ಮ, ಚಿಕ್ಕಮ್ಮ ಸೇರಿದಂತೆ ಏಳೂರು ನಾಡಿನ ದೇವರ ಅಡ್ಡೆಗಳನ್ನು ಹೊತ್ತ ಭಕ್ತರು ದೇವಾಲಯದ ಆವರಣದಲ್ಲಿ ನೆರೆದಿದ್ದವರ ಬಳಿ ಹೋದಾಗ ಪುರಿಯನ್ನು ಎರಚಿ ಭಕ್ತಿ ಸಮರ್ಪಿಸಿದರು.
ಇದೇ ಸಂದರ್ಭದಲ್ಲಿ ದೇವಾಲಯದ ಕಾರ್ಯದರ್ಶಿ ಎನ್.ಆರ್. ರಾಜಣ್ಣಗೌಡ ಮಾತನಾಡಿ, ಮೂರು ದಿನಗಳ ಹಿಂದೆ ಕಳಸ ಸ್ಥಾಪನೆ, ಉಡುಗೆ ಅಲಂಕಾರ, ಸಣ್ಣ ತೇರು ಉತ್ಸವ, ಪಂಚಾಮೃತ ಅಭಿಷೇಕ, ವಿಶೇಷ ಪೂಜೆಯೊಂದಿಗೆ ಉತ್ಸವಕ್ಕೆ ಚಾಲನೆ ನೀಡಿ ನಂತರ ಮಡಲಕ್ಕಿ ಸೇವೆ, ಹರಕೆ ಕಾಣಿಕೆ ಒಪ್ಪಿಸುವುದು, ಕುಂಕುಮಾರ್ಚನೆಯೊಂದಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ ಶನಿವಾರ ರಥೋತ್ಸವ ನಡೆಸಲಾಯಿತು ಎಂದರು.
ಮೂಡಿಗೆರೆ ಶಾಸಕ ಬಿ.ಬಿ. ನಿಂಗಯ್ಯ, ಪತ್ನಿ ತ್ರಿವೇಣಿ, ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ, ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ, ಎಚ್.ಡಿ. ಕುಮಾರಸ್ವಾಮಿ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ಹೊಲದಗದ್ದೆ ಗಿರೀಶ್, ಎಂ.ಎ. ರಮೇಶ್, ನಾಗೇಶ್, ಮಂಜೇಗೌಡ, ಸಿ.ಎಚ್. ಲೋಕೇಶ್, ಎಂ.ಎಸ್. ಭೋಜೇಗೌಡ, ತಾಲೂಕು ಪಂಚಾಯಿತಿ ಸದಸ್ಯ ಮಂಜುನಾಥ್ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement