ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಪೂಜೆಯೊಂದಿಗೆ ಭದ್ರೆಗೆ ಸ್ವಾಗತ

Srinivasa Murthy VN
Updated On : 25 May 2014, 11:00 am

ಕಡೂರು: ಜನರ ನೀರಿನ ಭವಣೆ ನೀಗಿಸಿ ಶಾಶ್ವತ ನೀರೊದಗಿಸಲು ಕಡೂರಿಗೆ ಹರಿದು ಭದ್ರಾ ಡ್ಯಾನಿಂದ ಹರಿದು ಬಂದ ಭದ್ರೆಯನ್ನು ಪಟ್ಟಣದಲ್ಲಿ ಪೂಜಿಸುವುದರೊಂದಿಗೆ ಬರಮಾಡಿಕೊಳ್ಳಲಾಯಿತು.
ಭದ್ರಾ ಡ್ಯಾಂನಿಂದ ಕಡೂರು, ಬೀರೂರು ಪಟ್ಟಣ ಸೇರಿದಂತೆ ಗ್ರಾಮಾಂತರ ಪ್ರದೇಶಗಳಿಗೆ ಪೈಪುಗಳ ಮೂಲಕ ಪ್ರಾಯೋಗಿಕವಾಗಿ ಹರಿದು ಬಂದ ಭದ್ರಾ ಡ್ಯಾಂ ನೀರನ್ನು ಜೆಡಿಎಸ್ ನಗರ ಘಟಕದ ಕಾರ್ಯಾಧ್ಯಕ್ಷ ಭಂಡಾರಿ ಶ್ರೀನಿವಾಸ್, ಮುಖಂಡರಾದ ಕೆ.ಎಸ್. ರಮೇಶ್, ಕೆ.ಎಚ್. ಲಕ್ಕಣ್ಣ ಮತ್ತಿತರರ ನೇತೃತ್ವದಲ್ಲಿ ಗಂಗಾ ಪೂಜೆ ನೆರವೇರಿಸಿ ನಾಗರಿಕರೊಂದಿರೆ ಸಂಭ್ರಮ ಆಚರಿಸಿದರು.
ಇದೇ ಸಂದರ್ಭ ಭಂಡಾರಿ ಶ್ರೀನಿವಾಸ್ ಮಾತನಾಡಿ, 2006 ರಲ್ಲಿ ಯೋಜನೆಗೆ ಅಧಿಕೃತ ಚಾಲನೆ ನೀಡಿದರು. ನಂತರ ಶಾಸಕರಾದ ಡಾ. ವೈ.ಸಿ. ವಿಶ್ವನಾಥ್ ಅವರೂ ಕೂಡ ಸಹಕಾರ ನೀಡಿದರು. ಆನಂತರ 2013 ರಲ್ಲಿ ನಮ್ಮ ನಾಯಕರಾದ ವೈ.ಎಸ್.ವಿ. ದತ್ತ ಅವರು ಶಾಸಕರಾಗಿ ಆಯ್ಕೆ ಆದಾಗ ಜನರಿಗೆ ನೀಡಿದ ಭರವಸೆಯಂತೆ ಭದ್ರಾ ನದಿಯಿಂದ ನೀರು ತರುವ ಕಾಮಗಾರಿ ಚುರುಕುಗೊಳಿಸಿದರು ಎಂದರು.
ಮುಖಂಡರಾದ ಕೆ.ಎಸ್. ರಮೇಶ್, ಕೆ.ಎಚ್.ಲಕ್ಕಣ್ಣ, ಎನ್.ಇಮಾಮ್, ಪಾಣಿ ರಮೇಶ್, ಶೂದ್ರ ಶ್ರೀನಿವಾಸ್, ತಮ್ಮಯ್ಯ, ಕಂಸಾಗರ ಶೇಖರ್, ಕೆ.ಎಂ. ರವಿ, ಎಸ್.ಎಲ್. ಪುಟ್ಟೇಗೌಡ, ಜಿಗಣೇಹಳ್ಳಿ ನೀಲಕಂಠಪ್ಪ, ಕೆ.ಎನ್. ಪುಂಡಲೀಕರಾವ್, ಮಲ್ಲಿಕಾರ್ಜುನ್, ಬಾಬಣ್ಣ, ಹುಚ್ಚಪ್ಪ ಸೇರಿದಂತೆ ಪಟ್ಟಣದ ಜನತೆ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement