ಕರಾವಳಿ ಭಾಗದಲ್ಲಿ ಮಳೆ ಇಳಿಮುಖ
ಮಂಗಳೂರು/ ಉಡುಪಿ: 4- 5 ದಿನಗಳಿಂದ ಕರಾವಳಿ ಭಾಗದಲ್ಲಿ ಮಳೆ ಬಹುತೇಕ ಇಳಿಮುಖ ಕಂಡಿದೆ. ಮಂಗಳೂರು ನಗರದಲ್ಲಿ ಭಾನುವಾರ ಬೆಳಗ್ಗೆ ಸ್ವಲ್ಪ ಮಳೆಯಾಗಿದ್ದು, ಬಳಿಕ ದಿನವಿಡೀ ಬಿಸಿಲಿನ ವಾತಾವರಣವಿತ್ತು. ಉಡುಪಿ ಜಿಲ್ಲೆಯಲ್ಲೂ ಬಿಸಿಲಿನ ವಾತಾವರಣವಿತ್ತು.
ಮಳೆ ವಿವರ: ಭಾನುವಾರ ಬೆಳಗ್ಗಿನವರೆಗೆ ದ.ಕ. ಜಿಲ್ಲೆಯ ಕಡಬದಲ್ಲಿ 28.1 ಮಿ.ಮೀ. ಅಧಿಕ ಮಳೆ ಸುರಿದಿದೆ. ಪುತ್ತೂರು- 17.4 ಮಿ.ಮೀ., ಮೂಡುಬಿದಿರೆ- 14.2 ಮಿ.ಮೀ., ಬೆಳ್ತಂಗಡಿ- 14 ಮಿ.ಮೀ., ಸುಳ್ಯ- 11.2 ಮಿ.ಮೀ., ಮಂಗಳೂರು- 10.2 ಮೀ.ಮೀ., ಬಂಟ್ವಾಳ- 9.5 ಮಿ.ಮೀ. ಮಳೆ ದಾಖಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಭಾನುವಾರ ಮುಂಜಾನೆವರೆಗೂ ಸರಾಸರಿ 8.86 ಮಿ.ಮೀ. ಮಳೆಯಾಗಿದೆ. ಉಡುಪಿ ತಾಲೂಕಿನಲ್ಲಿ 5.2 ಮಿ.ಮೀ, ಕಾರ್ಕಳ ತಾಲೂಕಿನಲ್ಲಿ 13.8 ಮಿ.ಮೀ, ಕುಂದಾಪುರ ತಾಲೂಕಿನಲ್ಲಿ 7.6 ಮಿ.ಮೀ. ಮಳೆಯಾಗಿದೆ.
ಬಿಇಡಿ ಪರೀಕ್ಷೆ: ಜ್ಯೋತಿ ಶಂಕರ್ಗೆ 4ನೇ ರ್ಯಾಂಕ್
ಉಡುಪಿ: ಮೈಸೂರು ಮುಕ್ತ ವಿವಿ 2012 ಅಕ್ಟೋಬರ್ ತಿಂಗಳಲ್ಲಿ ನಡೆಸಿದ ಬಿಇಡಿ ಪದವಿ ಪರೀಕ್ಷೆಯಲ್ಲಿ ಬ್ರಹ್ಮಾವರ ವಲಯದ ಸಗ್ರಿನೋಳೆ ಕುಂಜಿಬೆಟ್ಟು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕಿ ಜ್ಯೋತಿ ಶಂಕರ್ ಅವರು 4ನೇ ರ್ಯಾಂಕ್ ಪಡೆದಿದ್ದಾರೆ.ಅವರನ್ನು ಸಗ್ರಿನೋಳೆ ಶಾಲೆ ಮುಖ್ಯೋಪಾಧ್ಯಾಯಿನಿ ಅರುಣ ಅಡ್ವೆ, ಸಹಶಿಕ್ಷಕಿಯರು ಅಭಿನಂದಿಸಿದ್ದಾರೆ.