ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಮುಂದಿನ ಜುಲೈನಿಂದ ನೇರ ನಗದು ವರ್ಗಾವಣೆ: ರಾಜೀವನ್

Srinivasa Murthy VN
Updated On : 12 Aug 2013, 11:55 am

ಮಂಗಳೂರು: ಕೇಂದ್ರ ಸರ್ಕಾರ ಮುಂದಿನ ಜುಲೈನಿಂದ ನೇರ ನಗದು ವರ್ಗಾವಣೆ ವ್ಯವಸ್ಥೆಯನ್ನು ರಾಜ್ಯಾದ್ಯಂತ ವಿಸ್ತರಿಸಿರುವುದರಿಂದ ಫಲಾನುಭವಿಗಳಿಗೆ ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆ ಅವಶ್ಯಕ ಎಂದು ಕ್ಷೇತ್ರ ಪ್ರಚಾರ ನಿರ್ದೇಶನಾಲಯದ ಸಹಾಯಕ ನಿರ್ದೇಶಕ ಕೆ.ಪಿ. ರಾಜೀವನ್ ತಿಳಿಸಿದರು.
ಕ್ಷೇತ್ರ ಪ್ರಚಾರ ನಿರ್ದೇಶನಾಲಯ ಮಂಗಳೂರು ಘಟಕವು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಶಾಲೆಪದವು ಯುವಕ ಮಂಡಳಿ ಸಭಾಗೃಹದಲ್ಲಿ ಆಯೋಜಿಸಿದ 'ಭಾರತ ನಿರ್ಮಾಣ ಹಂತ-2' ಕಾರ್ಯಕ್ರಮದಲ್ಲಿ ನೇರ ನಗದು ವರ್ಗಾವಣೆ, ಆಧಾರ್ ಕಾರ್ಡ್ ಹಾಗೂ ಆಹಾರ ಭದ್ರತೆ ಕುರಿತು ಮಾತನಾಡಿದರು.
ಸರ್ಕಾರದ ಸಾಲ, ಸೌಲಭ್ಯ, ಸಬ್ಸಿಡಿಗಳನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸುವುದರಿಂದ ಯೋಜನೆಯಲ್ಲಿನ ವಿಳಂಬ ಹಾಗೂ ಮಧ್ಯವರ್ತಿಗಳ ಹಾವಳಿ ತಪ್ಪಿಸಬಹುದು. ಈ ಯೋಜನೆ ಸೌಲಭ್ಯಕ್ಕೆ ನಾಗರಿಕರು ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆ ಕಡ್ಡಾಯ ಹೊಂದಿರಬೇಕು ಎಂದರು.
ರಾಜ್ಯದಲ್ಲಿ ಜನವರಿಯಿಂದಲೇ ಮೈಸೂರು, ತುಮಕೂರು ಹಾಗೂ ಧಾರವಾಡ ಜಿಲ್ಲೆಗಳಲ್ಲಿ ನೇರ ನಗದು ವರ್ಗಾವಣೆ ವ್ಯವಸ್ಥೆ ಜಾರಿಗೊಂಡಿದ್ದು, ಜುಲೈ ವೇಳೆಗೆ ರಾಜ್ಯಾದ್ಯಂತ ವಿಸ್ತರಿಸುವುದರಿಂದ ನಾಗರಿಕರು ಆಧಾರ್ ಕಾರ್ಡ್ ತೆರೆಯುವ ಮೂಲಕ ಯೋಜನೆ ಯಶಸ್ಸಿಗೆ ಸಹಕರಿಸಬೇಕು ಎಂದರು. ಮಂಗಳೂರು ತಾ.ಪಂ. ಅಧ್ಯಕ್ಷ ಹರೀಶ್ ಕಾರ್ಯಕ್ರಮ ಉದ್ಘಾಟಿಸಿ, ಮೂಡುಶೆಡ್ಡೆ ಗ್ರಾಮ ಪಂಚಾಯ್ತಿಯಲ್ಲಿ ಆಧಾರ್ ಕಾರ್ಡ್ ಕೇಂದ್ರ ತೆರೆಯಲಾಗುವುದು. ಗ್ರಾಮಸ್ಥರು ಇದರ ಸದುಪಯೋಗ ಪಡೆಯಬೇಕು ಎಂದರು. ಮೂಡುಶೆಡ್ಡೆ ಗ್ರಾಪಂ ಅಧ್ಯಕ್ಷೆ ಶಾಂಭವಿ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಪ್ರಚಾರ ಇಲಾಖೆ ಅಧಿಕಾರಿ ಶ್ರೀಕಾಂತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಮೇಲ್ವಿಚಾರಕಿ ಮಾಧುರಿ, ಶಿಶುವಿಹಾರ ಶಿಕ್ಷಕಿ ಹೇಮಾ ಹಾಜರಿದ್ದರು.

ರಾಜ್ಯದಲ್ಲಿ ಜನವರಿಯಿಂದಲೇ ಮೈಸೂರು, ತುಮಕೂರು ಹಾಗೂ ಧಾರವಾಡ ಜಿಲ್ಲೆಗಳಲ್ಲಿ ನೇರ ನಗದು ವರ್ಗಾವಣೆ ವ್ಯವಸ್ಥೆ ಜಾರಿಗೊಂಡಿದ್ದು, ಜುಲೈ ವೇಳೆಗೆ ರಾಜ್ಯಾದ್ಯಂತ ವಿಸ್ತರಿಸುವುದರಿಂದ ನಾಗರಿಕರು ಆಧಾರ್ ಕಾರ್ಡ್ ತೆರೆಯುವ ಮೂಲಕ ಯೋಜನೆ ಯಶಸ್ಸಿಗೆ ಸಹಕರಿಸಬೇಕು.
- ಕೆ.ಪಿ. ರಾಜೀವನ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement