ಸುಬ್ರಹ್ಮಣ್ಯ: ರು. 12 ಕೋಟಿ ವೆಚ್ಚದಲ್ಲಿ 33 ಕೆ.ವಿ. ವಿದ್ಯುತ್ ಸಬ್ಸ್ಟೇಷನ್
ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದಲ್ಲಿ 33 ಕೆ.ವಿ. ಸಾಮರ್ಥ್ಯದ ವಿದ್ಯುತ್ ಸಬ್ಸ್ಟೇಷನ್ನ ನಿರ್ಮಾಣ ಕಾಮಗಾರಿ ಆರಂಭಗೊಂಡಿದೆ.
ಕ್ಷೇತ್ರದ ವಲ್ಲೀಶ ಸಭಾಭವನದ ಪಕ್ಕದ ಮಲ್ಲಿಗೆ ಮಜಲು ತೋಟದ ಬದಿಯಲ್ಲಿ ರು. 12 ಕೋಟಿ ವೆಚ್ಚದಲ್ಲಿ ಸಬ್ಬ್ಸ್ಟೇಷನ್ ನಿರ್ಮಾಣವಾಗಲಿದೆ. ಪ್ರಾಥಮಿಕ ಹಂತದ ಕಾಮಗಾರಿ ಈಗಾಗಲೇ ಆರಂಭವಾಗಿದೆ. ಸ್ಥಳಕ್ಕೆ ತೆರಳಲು ರಸ್ತೆ ನಿರ್ಮಿಸಲಾಗಿದ್ದು, ಅಡಕೆ ಮರಗಳನ್ನು ತೆರವುಗೊಳಸಿ ಸ್ಥಳ ಸಮತಟ್ಟುಗೊಳಿಸಲಾಗಿದೆ. ಆವರಣ ಬೇಲಿ ನಿರ್ಮಿಸಲಾಗಿದೆ. ಮಳೆಗಾಲದ ಬಳಿಕ ಸಬ್ಸ್ಟೇಷನ್ನ ಇತರ ಕಾಮಗಾರಿ ಆರಂಭವಾಗಲಿದೆ. ಒಂದು ವರ್ಷದಲ್ಲಿ 33 ಕೆ.ವಿ. ಸಬ್ಸ್ಟೇಷನ್ ಕಾರ್ಯಾರಂಭಗೊಳ್ಳಲಿದೆ. ಸಬ್ಸ್ಟೇಷನ್ ನಿರ್ಮಾಣ ಹಂತದಿಂದ ಕುಕ್ಕೆ ಕ್ಷೇತ್ರ ಸುಬ್ರಹ್ಮಣ್ಯ ಮಾತ್ರವಲ್ಲದೆ ಈ ಭಾಗದ ಹರಿಹರ, ಕೊಲ್ಲಮೊಗ್ರ, ಬಾಳುಗೋಡು, ಕಲ್ಮಕಾರು, ಗುತ್ತಿಗಾರು ಮೊದಲಾದ ಗ್ರಾಮೀಣ ಪ್ರದೇಶಗಳಿಗೂ ಇದರ ಪ್ರಯೋಜನ ದೊರೆಯಲಿದೆ. ಈ ಭಾಗದ ರೈತರಿಗೂ ಅನುಕೂಲವಾಗಲಿದೆ.