ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

'ಪಾರು ಐ ಲವ್ ಯೂ' ಸೆಪ್ಟೆಂಬರ್‌ನಲ್ಲಿ ತೆರೆಗೆ

Srinivasa Murthy VN
Updated On : 20 Aug 2013, 1:31 am

ಮಂಗಳೂರು: ಪ್ರೇಮಿಗಳ ಸುತ್ತ ಹೆಣೆದಿರುವ ಪ್ರೇಮಕಥೆಯುಳ್ಳ 'ಪಾರು ಐ ಲವ್ ಯೂ' ಕನ್ನಡ ಚಿತ್ರ ಸಪ್ಟೆಂಬರ್‌ನಲ್ಲಿ ತೆರೆ ಕಾಣಲಿದೆ. ಮಂಗಳೂರು ಮೂಲದ ನಟ, ನಟಿಯರಿರುವ ಈ ಚಿತ್ರ 2 ಕೋಟಿ ವೆಚ್ಚದಲ್ಲಿ ತಯಾರಾಗಿದೆ.
ಬೆಂಗಳೂರು, ಕೆಜಿಎಫ್, ಚಿಕ್ಕಮಗಳೂರು, ಸಕಲೇಶಪುರ, ಮಡಿಕೇರಿ ಸೇರಿ ರಾಜ್ಯದ ವಿವಿಧೆಡೆ ಚಿತ್ರೀಕರಣ ನಡೆಸಲಾಗಿದೆ. ಚಿತ್ರ ಒಂದು ರೀತಿ ಲವ್ ಪ್ಯಾಕೇಜ್ ಇದ್ದಂತೆ ಎಂದು ನಾಯಕ ನಟ ರಂಜನ್ ಪಿ.ಬಿ. ಸೋಮವಾರ ತಿಳಿಸಿದರು. 8 ಹಾಡುಗಳಿದ್ದು, ಪ್ರತಿ ಸನ್ನಿವೇಶಕ್ಕೂ ಆಹ್ಲಾದ ನೀಡುವಂತಿದೆ. ಚಿತ್ರ ಉತ್ತಮವಾಗಿ ಮೂಡಿಬಂದಿದೆ ಸುದ್ದಿಗೋಷ್ಠಿಯಲ್ಲಿ ಎಂದರು.
ಬೊಮ್ಮಣ್ಣ, ಜಯಣ್ಣ, ರವಿ ಕುಮಾರ್ ಚಿತ್ರ ನಿರ್ಮಾಪಕರಾಗಿದ್ದು, ರವೀಶ್ ಸಂಗೀತ, ಸುನೀಲ್ ಹುಬ್ಬಳ್ಳಿ ನಿರ್ದೇಶನ. ನಾಗೇಶ್ ಆಚಾರ್ಯ ಛಾಯಾಗ್ರಹಣ. ಮಾಲೂರು ಶ್ರೀನಿವಾಸ್, ಹರಿಕೃಷ್ಣನ್, ನಂದಪ್ರಭು, ಕಪಿಲಾ, ಸುಬ್ರಮಣಿ, ಬಿ.ಸಿ.ಮಂಜು ಕೊರಿಯಾಗ್ರಫಿ. ನಾಯಕಿ ನಿತು ಶೆಟ್ಟಿ. ಇವರು ಮಾಡುತ್ತಿರುವ ಪಾತ್ರದ ಹೆಸರು ಚಿತ್ರದ ಹೆಸರಿನಲ್ಲಿರುವ ಪಾರು. ಕ್ಯಾಬ್ ಚಾಲಕನೊಬ್ಬ ಕ್ಲಾಸ್ ಟೀಚರ್‌ನ್ನು ಪ್ರೇಮಿಸುತ್ತಾನೆ. ಇದರ ಸುತ್ತ ಚಿತ್ರಕಥೆ ಸಾಗುತ್ತದೆ ಎಂದರು. ತಾರಾಗಣದಲ್ಲಿ ಪೆಟ್ರೋಲ್ ಪ್ರಸನ್ನ, ವೀಣಾ ಸುಂದರ್, ಮೈಕಲ್ ಮಧು, ಮೋಹನ್ ಜುನೇಜಾ, ಕಿಲ್ಲರ್ ವೆಂಕಟೇಶ್, ಪದ್ಮಿನಿ ಪ್ರಕಾಶ್ ಸೇರಿದಂತೆ 15ಕ್ಕೂ ಅಧಿಕ ಮಂದಿ ಕಲಾವಿದರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement