ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಲೈಂಗಿಕ ಕಿರುಕುಳ ಆರೋಪ ಹುರುಳಿಲ್ಲ

Srinivasa Murthy VN
Updated On : 29 Aug 2013, 12:58 pm

ಮಂಗಳೂರು: ಬೋಳಿಯಾರಿನ ಜುಮ್ಮಾ ಮಸೀದಿಯ ಮುಖ್ಯ ಧರ್ಮಗುರು ಅಬ್ದುಲ್ ಖಾದರ್ ವಿರುದ್ಧದ ಲೈಂಗಿಕ ಕಿರುಕುಳ ಆರೋಪದಲ್ಲಿ ಹುರುಳಿಲ್ಲ. ವೃಥಾ ಆರೋಪದಲ್ಲಿ ಸಿಲುಕುವಂತೆ ಮಾಡಲಾಗಿದೆ ಎಂದು ಮಸೀದಿ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ.ಎಸ್. ಯೂಸುಫ್ ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಧರ್ಮಗುರುವಿನ ವಿರುದ್ಧ ವಿನಾಕಾರಣ ಆರೋಪ ಹೊರಿಸಿದ್ದರೆ ಬಾಲಕಿ ಮನೆಯವರಿಗೆ ಜಮಾತ್ ನಿರ್ಣಯವಾದರೆ ಬಹಿಷ್ಕಾರ ಹಾಕಬಹುದು. ಈ ಮದ್ರಸ ಪಾರದರ್ಶಕವಾಗಿದ್ದು, ಲೈಂಗಿಕ ಕಿರುಕುಳ ನಡೆಯಲು ಸಾಧ್ಯವೇ ಇಲ್ಲ. ಕಳೆದ ಒಂದು ವರ್ಷದಿಂದ ಪಠ್ಯಪುಸ್ತಕ ವಿವಾದ ನಡೆಯುತ್ತಿದ್ದು, ನಮ್ಮ ವಿರೋಧಿಗಳು ದುರುದ್ದೇಶಪೂರ್ವಕ ಆರೋಪ ಹೊರಿಸಿದ್ದಾರೆ ಎಂದು ಆರೋಪಿ ಧರ್ಮಗುರುವನ್ನು ಸಮರ್ಥಿಸಿಕೊಂಡರು.
ಆರೋಪಿ ಧರ್ಮಗುರುವಿನ ಮೇಲೆ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣವಿರುವ ಬಗ್ಗೆ ತಮಗೆ ಗೊತ್ತಿಲ್ಲ. ಮೂರು ತಿಂಗಳ ಹಿಂದೆ ಕೃತ್ಯ ನಡೆದಿದ್ದರೆ ಈಗ ಯಾಕೆ ದೂರು ಕೊಡುತ್ತಾರೆ ಎಂದು ಸುದ್ದಿಗಾರರ ಪ್ರಶ್ನೆ ಮರು ಪ್ರಶ್ನಿಸಿದರು. ಆದರೂ ಧರ್ಮಗುರುವಿನ ಬಗ್ಗೆ ಆಂತರಿಕ ತನಿಖೆ ನಡೆಸುವುದಾಗಿ ಅವರು ಒಪ್ಪಿಕೊಂಡರು. ಸದ್ಯಕ್ಕೆ ಆರೋಪ ಹೊರಿಸಿದ ಬಾಲಕಿಯನ್ನು ಇದೇ ಮದರಸದಲ್ಲಿ ಕಲಿಕೆ ಮುಂದುವರಿಕೆಗೆ ಅವಕಾಶ ನೀಡುವುದಾಗಿ ಹೇಳಿದರು.
ಅಧ್ಯಕ್ಷ ಅಬ್ದುಲ್ ರಹಿಮಾನ್, ಜಮಾತ್ ಸದಸ್ಯ ಹೈದರ್, ಮುಖಂಡರಾದ ಅಬೂಬಕ್ಕರ್, ಎಸ್.ಐ.ಖಾನ್ ಮುಸ್ಲಿಯಾರ್ ಹಾಜರಿದ್ದರು.

ಸಮಾಜ ಸೇವಕ, ಶಿಕ್ಷಣ ಪ್ರೇಮಿ ಭೀಮರಾವ್ ರಣಮೋಡೆ ನಿಧನ
ಅಥಣಿ: ಇಲ್ಲಿಯ ಹಿರಿಯ ನ್ಯಾಯವಾದಿ, ಸಮಾಜ ಸೇವಕ, ಶಿಕ್ಷಣ ಪ್ರೇಮಿ, ಕೆಎಲ್‌ಇ ಸಂಸ್ಥೆಗೆ ಅಪಾರ ದಾನ ನೀಡಿದ್ದ ಭೀಮರಾವ ಫೀರಾಜಿರಾವ್ ರಣಮೋಡೆ (81) ಬುಧವಾರ ಬೆಳಗ್ಗೆ ನಿಧನರಾದರು.
ಬುಧವಾರ ಸಂಜೆ ನಡೆದ ಅಂತ್ಯಕ್ರಿಯೆಯಲ್ಲಿ ಎಂಎಲ್‌ಸಿ ಮಹಾಂತೇಶ ಕವಟಗಿಮಠ, ಜೆಇ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅರವಿಂದ ದೇಶಪಾಂಡೆ, ವಿಮೋಚನಾ ಸಂಸ್ಥೆ ಅಧ್ಯಕ್ಷ ಬಿ.ಎಲ್.ಪಾಟೀಲ, ಕೆಎಲ್‌ಇ ಅಂಗ ಸಂಸ್ಥೆಯ ಚೇರಮನ್ ಡಾ. ಮಲ್ಲಿಕಾರ್ಜುನ ಹಂಜಿ, ಡಾ.ಗೌರೀಶ ಪಾಟೀಲ, ಗಚ್ಚಿನಮಠದ ಶಿವಬಸವ ಸ್ವಾಮೀಜಿ, ಮೋಟಗಿಮಠದ ಪ್ರಭು ಚನ್ನಬಸವ ಸ್ವಾಮೀಜಿ, ಮೋರಟಗಿ ಸ್ವಾಮೀಜಿ, ಕೆಎಲ್‌ಇ ಸಂಸ್ಥೆಯ ಅಜೀವ ಸದಸ್ಯ ಎಂ.ಎಸ್. ಬಳಿಗಾರ, ಸ್ಥಾನಿಕ ಆಡಳಿತ ಮಂಡಳಿ ಅಧ್ಯಕ್ಷ ಡಾ. ಎಂ.ಜಿ. ಹಂಜಿ, ಡಾ. ಗೌರೀಶ ಪಾಟೀಲ, ವ್ಹಿ.ಜಿ. ತೆಲಸಂಗ, ಬಿ.ಎಲ್. ಪಾಟೀಲ, ಇತರರು ಪಾಲ್ಗೊಂಡಿದ್ದರು. ರಣಮೋಡೆ ಅವರ ನಿಧನಕ್ಕೆ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಸಂತಾಪ ಸೂಚಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement