ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಸಹಕಾರಿ ಸಂಘದಲ್ಲಿ ಹಿಂದುಳಿದವರು, ಸ್ತ್ರೀಯರಿಗೆ ಮೀಸಲು

Srinivasa Murthy VN
Updated On : 28 Jul 2013, 12:06 pm

ಮಂಗಳೂರು: ಸಹಕಾರಿ ಸಂಘಗಳ ಆಡಳಿತ ಮಂಡಳಿಯಲ್ಲಿ ಪರಿಶಿಷ್ಟ ಜಾತಿ, ಪಂಗಡ ಮಹಿಳೆ ಮತ್ತು ಹಿಂದುಳಿದವರಿಗೆ ಮೀಸಲು ಕಲ್ಪಿಸಲಾಗುವುದು ಎಂದು ಸಹಕಾರ ಸಚಿವ ಎಚ್.ಎಸ್. ಮಹದೇವಪ್ರಸಾದ್ ಹೇಳಿದರು.  ಶನಿವಾರ ಸುದ್ದಿಗಾರರ ಜತೆ ಮಾತನಾಡಿ, ತಳಮಟ್ಟದ ಸಹಕಾರಿ ಸಂಘಗಳ ನಿರ್ದೇಶಕರ ಮಂಡಳಿಯಲ್ಲಿರುವ ಸದಸ್ಯರ ಸಂಖ್ಯೆಯನ್ನು 9ರಿಂದ 11ಕ್ಕೇರಿಸಲಾಗುವುದು. ಇಬ್ಬರು ಮಹಿಳೆಯರು, ಇಬ್ಬರು ಹಿಂದುಳಿದ ವರ್ಗದವರು ಮತ್ತು ಒಂದು ಸ್ಥಾನ ಪರಿಶಿಷ್ಟಜಾತಿ, ಪಂಗಡದವರಿಗೆ ಮೀಸಲಿಡಲಾಗುವುದು ಎಂದರು.  ಬಡವರ ಆರೋಗ್ಯ ವಿಮೆ ಯಶಸ್ವಿನಿ ಯೋಜನೆಗೆ 30 ಲಕ್ಷ ಫಲಾನುಭವಿಗಳಿದ್ದಾರೆ. ಸಹಕಾರಿ ಸಂಘಗಳಲ್ಲಿರುವ 9 ಲಕ್ಷ ಪರಿಶಿಷ್ಟ, ಜಾತಿ ವರ್ಗದ 9 ಲಕ್ಷ ಮಂದಿಯ ವಿಮೆ ಮೊತ್ತವನ್ನು ರಾಜ್ಯ ಸರ್ಕಾರವೇ ಭರಿಸಲಿದೆ. ವಿಮೆ ಫಲಾನುಭವಿಗಳ ಸಂಖ್ಯೆ ಶೀಘ್ರದಲ್ಲಿ 50 ಲಕ್ಷಕ್ಕೆ ಏರಿಸಲಾಗುವುದು ಎಂದರು.  ಪರಿಶಿಷ್ಟ ಜಾತಿ, ಪಂಗಡದವರು ಪಡೆದ 36 ಕೋಟಿ ಸಾಲ ಮನ್ನಾ ಮಾಡುವ ತೀರ್ಮಾನ ಹಿಂದಿನ ಸರ್ಕಾರ ಕೈಗೊಂಡಿತ್ತು. ಅದನ್ನು ಮುಂದುವರಿಸಿದ್ದೇವೆ. 25 ಸಾವಿರ ಅಲ್ಪಾವಧಿ ಸಾಲ ಪಡೆದ ರೈತರ ಸಾಲ ಮನ್ನಾಕ್ಕೆ 2 ತಿಂಗಳಲ್ಲಿ 706 ಕೋಟಿ ಬಿಡುಗಡೆ ಮಾಡಿದ್ದೇವೆ. ಬಜೆಟ್‌ನಲ್ಲಿ 1,495 ಕೋಟಿ ಮೀಸಲು ಇಟ್ಟಿದ್ದೇವೆ, ಇದರಿಂದ 15 ಲಕ್ಷ ರೈತರಿಗೆ ನೆರವಾಗಿದೆ ಎಂದರು.  

3 ಸಾಧಕರಿಗೆ ದಾವಣಗೆರೆ ವಿವಿ ಗೌರವ ಡಾಕ್ಟರೇಟ್ ಪ್ರದಾನ
ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾನಿಲಯದ ಪ್ರಥಮ ಘಟಿಕೋತ್ಸವದಲ್ಲಿ ಐವರು ಸಾಧಕರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲು ವಿವಿ ನಿರ್ಧರಿಸಿತ್ತಾದರೂ, ಘಟಿಕೋತ್ಸವದಲ್ಲಿ ಇಬ್ಬರು ಸಾಧಕರು ಗೈರಾಗಿದ್ದ ಕಾರಣ ಮೂವರು ಸಾಧಕರಿಗೆ ಮಾತ್ರ ಗೌರವ ಪ್ರದಾನ ಮಾಡಲಾಯಿತು.
ತಾಲೂಕಿನ ಶಿವಗಂಗೋತ್ರಿಯ ವಿವಿ ಆವರಣದಲ್ಲಿ ಶನಿವಾರ ನಡೆದ ಘಟಿಕೋತ್ಸವದಲ್ಲಿ ಪ್ರಧಾನ ಮಂತ್ರಿ ಆರ್ಥಿಕ ಸಲಹಾ ಸಮಿತಿ ಅಧ್ಯಕ್ಷ, ರಿಸರ್ವ್ ಬ್ಯಾಂಕ್‌ನ ಮಾಜಿ ಗವರ್ನರ್ ಡಾ. ಸಿ. ರಂಗರಾಜನ್, ಹಿರಿಯ ಪತ್ರಕರ್ತ, ಸ್ವಾತಂತ್ರ್ಯ ಹೋರಾಟಗಾರ ನಾಡೋಜ ಡಾ. ಪಾಟೀಲ ಪುಟ್ಟಪ್ಪ, ತೋಟಗಾರಿಕೆ, ಎಪಿಎಂಸಿ ಮಾರುಕಟ್ಟೆ ಸಚಿವ ಡಾ. ಶಾಮನೂರು ಶಿವಶಂಕರಪ್ಪ ಅವರು ವಿವಿ ನೀಡಿದ ಗೌರವ ಡಾಕ್ಟರೇಟ್ ಸ್ವೀಕರಿಸಿದರು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಚಂದ್ರಶೇಖರ ಕಂಬಾರ, ಬೆಂಗಳೂರಿನ ಬಯೋಕಾನ್ ಲಿ.ನ ವ್ಯವಸ್ಥಾಪಕ ನಿರ್ದೇಶಕಿ, ಕೈಗಾರಿಕೋದ್ಯಮಿ ಡಾ. ಕಿರಣ್ ಮಜುಂದಾರ್ ಷಾ ಸಮಾರಂಭಕ್ಕೆ ಗೈರು ಹಾಜರಾದರು.
ಈ ಘಟಿಕೋತ್ಸವದಲ್ಲಿ 7,694 ಪುರುಷರು, 7,670 ಮಹಿಳೆಯರು ಸೇರಿದಂತೆ ಒಟ್ಟು 15,364 ವಿದ್ಯಾರ್ಥಿಗಳು ಪದವಿ ಪಡೆದರು. 86 ಚಿನ್ನದ ಪದಕಗಳನ್ನು 25 ಪುರುಷ ಹಾಗೂ 61 ಮಹಿಳೆಯರಿಗೆ ನೀಡಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement