ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಡೀವಿ ನೇತೃತ್ವದ ಪಾದಯಾತ್ರೆ

Srinivasa Murthy VN
Updated On : 3 May 2013, 1:21 am

ಉಪ್ಪಿನಂಗಡಿ: ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಸಂಜೀವ ಮಠಂದೂರು ಪರ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಮತ್ತಿತರ ಬಿಜೆಪಿ ಮುಂದಾಳುಗಳು ಉಪ್ಪಿನಂಗಡಿಯಲ್ಲಿ ಗುರುವಾರ ಪಾದಯಾತ್ರೆ ಕೈಗೊಂಡು ಮತಯಾಚಿಸಿದರು. ಸಹಸ್ರಲಿಂಗೇಶ್ವರ ದೇವಾಲಯ ಬಳಿಯಿಂದ ಪಾದಯಾತ್ರೆಯು ಪ್ರಮುಖ ಬೀದಿಗಳಲ್ಲಿ ಸಾಗಿತು. ಮುಂದಿನ ಎರಡು ದಿನಗಳಲ್ಲಿ ಸತತ ಮತದಾರರ ಮನಮೊಲಿಸುವ ಕಾರ್ಯದತ್ತ ನಿಗಾವಿರಿಸಿ ಗೆಲವು ತಮ್ಮದಾಗಿಸಿಕೊಳ್ಳಲು ಶ್ರಮಿಸಬೇಕೆಂದು ಕಾರ್ಯಕರ್ತರಿಗೆ ಕರೆ ನೀಡಿದರು. ಅಭ್ಯರ್ಥಿ ಸಂಜೀವ ಮಠಂದೂರು, ಶಾಸಕಿ ಮಲ್ಲಿಕಾ ಪ್ರಸಾದ್, ಜಿ. ಪಂ. ಸದಸ್ಯ ಕೇಶವ ಗೌಡ ಬಜತ್ತೂರು, ತಾಪಂ ಸದಸ್ಯ ಉಮೇಶ್ ಶೆಣೈ, ಮುಂದಾಳುಗಳಾದ ಕುಂಟಿಕಾನ ಲಕ್ಷ್ಮಣ ಗೌಡ, ರಾಜೀವ ಭಂಡಾರಿ, ಶೈಲಜಾ ಭಟ್ ಮತ್ತಿತರರಿದ್ದರು.

ಸ್ವಯಂಪ್ರೇರಿತರಾಗಿ ಮತದಾನ ಮಾಡಿ: ಸಿಇಒ
ಮಂಗಳೂರು: ಮತದಾನ ಪ್ರತಿಯೊಬ್ಬರ ಹಕ್ಕು ಮತ್ತು ಕರ್ತವ್ಯ ಆದ್ದರಿಂದ ಪ್ರತಿಯೊಬ್ಬರು ತಪ್ಪದೆ ಮತದಾನ ಮಾಡಿ ಎಂದು ಜಿ.ಪೆ. ಸಿಇಒ ಡಾ. ವಿಜಯಪ್ರಕಾಶ್ ಹೇಳಿದ್ದಾರೆ. ಮೀನುಗಾರಿಕಾ ದಕ್ಕೆಯಲ್ಲಿ ಮೀನುಗಾರರಿಗಾಗಿ ಬುಧವಾರ ನಡೆದ ಮತದಾರ ಜಾಗೃತಿ ಮತ್ತು ಶಿಕ್ಷಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನೂರಾರು ಮೀನುಗಾರರು ಹಾಗೂ ಅವರ ಕುಟುಂಬದವರು ಪಾಲ್ಗೊಂಡಿದ್ದು, ಮತದಾನ ಮಾಡುವ ಬಗ್ಗೆ ಪ್ರಮಾಣವಚನ ಭೋಧಿಸಲಾಯಿತು. ಮುಂದಿನ ಮೂರು ದಿನ 'ವೋಟ್ ಮಿ' ಎಂಬ ಸಂದೇಶದೊಂದಿಗೆ ದೋಣಿ ಸಮುದ್ರದಲ್ಲಿ ಸಂಚರಿಸಲಿದೆ. ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಸುರೇಶ್ ಕುಮಾರ್, ಸಹಾಯಕ ನಿರ್ದೇಶಕ ಪಾಶ್ವನಾಥ್, ಯತೀಶ್ ಬೈಕಂಪಾಡಿ ಮತ್ತಿತ್ತರರು ಹಾಜರಿದ್ದರು.

5ರಂದು ಸಂತೆ, ಜಾತ್ರೆಗೆ ನಿಷೇಧ
ಮಂಗಳೂರು: ವಿಧಾನಸಭೆ ಚುನಾವಣೆಯು ಮೇ 5ರಂದು ನಡೆಯಲಿದ್ದು, ಸಾರ್ವಜನಿಕರ ಹಿತದೃಷ್ಟಿಯಿಂದ ಮತದಾರರಿಗೆ ಆಗಬಹುದಾದ ಅನಾನುಕೂಲವನ್ನು ಗಮನಿಸಿ, ಜಿಲ್ಲೆಯ ವಿವಿಧ ಕಡೆ ಜರಗುವ ಸಂತೆ, ಜಾತ್ರೆ, ದನಗಳ ಜಾತ್ರೆ ಇತ್ಯಾದಿಗಳನ್ನು ನಿಷೇಧಿಸಲು ಜಿಲ್ಲಾಧಿಕಾರಿ ಹರ್ಷಗುಪ್ತ ಆದೇಶ ಹೊರಡಿಸಿದ್ದಾರೆ.
ಜಾತ್ರೆ ನಡೆಯುವ ಸ್ಥಳ: ಮಂಗಳೂರಿನ ಇಡ್ಯಾ ಗ್ರಾಮದ ಸುರತ್ಕಲ್ ಮಾರುಕಟ್ಟೆ ವಾರದ ಸಂತೆ, ಪಾಣೆಮಂಗಳೂರು ಹೋಬಳಿಯ ಮಂಚಿ ಗ್ರಾಮದ ವಾರದ ಸಂತೆ, ಬೆಳ್ತಂಗಡಿಯ ಬಡಗಕಾರಂದೂರು ಗ್ರಾಮದ ಅಳದಂಗಡಿ ವಾರದ ಸಂತೆ, ಕಡಬ ಪೇಟೆಯ ಸಂತೆ ಮಾರುಕಟ್ಟೆ, ಸುಳ್ಯ ಕಸಬಾ ಗ್ರಾಮದ ಕೃಷಿ ಮಾರುಕಟ್ಟೆಯ ಪ್ರಾಂಗಣ ವಾರದ ಸಂತೆ ಇವುಗಳನ್ನು ನಿಷೇಧಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಅಲೆ: ಶಾನಿಮೋಳ್
ಮಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಪರ ಜನಾಭಿಪ್ರಾಯ ಇದೆ ಎಂದು ಎಐಸಿಸಿ ಕಾರ್ಯದರ್ಶಿ ಶಾನಿಮೋಳ್ ಉಸ್ಮಾನ್ ಹೇಳಿದ್ದಾರೆ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಜನತೆ ಬಿಜೆಪಿ ಆಡಳಿತದಿಂದ ರೋಸಿ ಹೋಗಿದ್ದು, ಸ್ಥಿರ ಸರ್ಕಾರಕ್ಕೆ ಕಾಂಗ್ರೆಸ್ ಬೆಂಬಲಿಸಲು ಮುಂದಾಗಿದ್ದಾರೆ. ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಕಾಂಗ್ರೆಸ್ ಪರ ಅಲೆ ಇದ್ದು, ತಳಮಟ್ಟದಲ್ಲಿ ಕಾರ್ಯಕರ್ತರು ಪ್ರಚಾರ ನಡೆಸಿರುವುದು ಕಾಂಗ್ರೆಸ್ಗೆ ಲಾಭದಾಯಕವಾಗಲಿದೆ ಎಂದರು. ಕೇರಳ ರಾಜಕೀಯವನ್ನು ಕರ್ನಾಟಕ ರಾಜಕೀಯಕ್ಕೆ ಹೋಲಿಕೆ ಮಾಡುವುದು ಸರಿಯಾಗದು ಎಂದ ಅವರು ತಾನೀಗಲೇ 25 ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿದ್ದಾಗಿ ಶಾನಿಮೋಳ್ ಉಸ್ಮಾನ್ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement