ಸಿದ್ದರಾಮಯ್ಯ ಪ್ರಮಾಣವಚನ: ವಿವಿಧೆಡೆ ಸಂಭ್ರಮ
ಮಂಗಳೂರು: ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅಧಿಕಾರ ಸ್ವೀಕರಿಸಿದ ಸಂಭ್ರಮವನ್ನು ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸುವ ಮೂಲಕ ಆಚರಿಸಿದರು.
ಸಿಹಿ ತಿಂಡಿಗಳನ್ನು ಹಂಚಿದ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಜೆಪ್ಪು ಕಾಂಗ್ರೆಸ್ ಕಚೇರಿ ಮುಂದೆ ನಡೆದ ಸಂಭ್ರಮಾಚರಣೆಯಲ್ಲಿ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜೆ.ನಾಗೇಂದ್ರ ಕುಮಾರ್, ಉಪಾಧ್ಯಕ್ಷ ನಾಗೇಂದ್ರ ಅಮೀನ್, ಅಹಮ್ಮದ್ ಬಾವಾ ಬಜಾಲ್, ಸುಧೀರ್ ಕಡೇಕಾರ್ ಮೊದಲಾದವರು ಇದ್ದರು.
ಪುತ್ತೂರು ವರದಿ: ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಸೋಮವಾರ ಅಧಿಕಾರ ಸ್ವೀಕರಿಸುತ್ತಿದ್ದಂತೆಯೇ ಪುತ್ತೂರಿನ ಕಾಂಗ್ರೆಸ್ ಕಾರ್ಯಕರ್ತರು ಇಲ್ಲಿನ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿಯ ಗಾಂಧಿ ಮಂಟಪದ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಹಿರಿಯ ಕಾಂಗ್ರೆಸ್ ಮುಖಂಡ ಚಿಲ್ಮೆತ್ತಾರು ನಾರಾಯಣ ರೈ ಅವರು ಸಿದ್ದರಾಮಯ್ಯ ಅವರು ಮುಖ್ಯ ಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಬಳಿಕ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಜಯಕಾರ ಹಾಕಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಎಸ್. ಮಹಮ್ಮದ್, ಪುರಸಭಾ ಮಾಜಿ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ, ತಾಲೂಕು ಯುವಕ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಶ್ರೀರಾಮ ಪಕ್ಕಳ ಕರ್ನೂರು, ಯುವಕ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಪುರಸಭಾ ಸದಸ್ಯರಾದ ಶಕ್ತಿ ಸಿನ್ಹಾ ಮತ್ತು ವಾಣಿಶ್ರೀಧರ್ , ಪುರಸಭಾ ಮಾಜಿ ಅಧ್ಯಕ್ಷ ಲೋಕೇಶ್ ಹೆಗ್ಡೆ, ಸುಭಾಸ್ ರೈ ಬೆಳ್ಳಿಪ್ಪಾಡಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮುರಳೀಧರ್ ರೈ ಮಠಂತಬೆಟ್ಟು, ಕಾಂಗ್ರೆಸ್ ಪದಾಧಿಕಾರಿಗಳಾದ ಹೊನ್ನಪ್ಪ ಪೂಜಾರಿ ಕೈಂದಾಡಿ, ಜತ್ತಪ್ಪ ಗೌಡ ಒಳಮೊಗ್ರು, ರವೀಂದ್ರ ರೈ ನೆಕ್ಕಿಲು, ಪುರಸಭಾ ಮಾಜಿ ಸದಸ್ಯರಾದ ಬಿ.ಎ. ರಹಿಮಾನ್, ಇಸಾಕ್ ಸಾಲ್ಮರ, ಜೋಕಿಂ ಡಿ' ಸೋಜಾ, ಪಕ್ಷದ ಮುಂದಾಳುಗಳಾದ ಪ್ರವೀಣ್ ನೈಕ್, ಎಂ.ಆರ್. ಜಯಕುಮಾರ್ ರೈ ಮಿತ್ರಂಪಾಡಿ, ಅಜೇಯ ಆಳ್ವ, ಶ್ರೀಧರ್ ಭಂಡಾರಿ, ಬಾಲಕೃಷ್ಣ ರೈ ನೆಲ್ಲಿಕಟ್ಟೆ, ಉಮೇಶ್ ನಾಯ್ಕ್, ಜೆರಾಲ್ಡ್ ಪುಡ್ತಾಮೊ, ಭಾಷಾ ತಂಙಳ್, ಹರಿಪ್ರಸಾದ್ ರೈ, ಶಶಿಪ್ರಭಾ, ಜಲಜಾ, ಹಮೀದ್ ಕಲ್ಲರ್ಪೆ ಮತ್ತಿತರರು ಇದ್ದರು.
ಉಪ್ಪಿನಂಗಡಿ ವರದಿ: ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ನಾಯಕನಾಗಿ, ರಾಜ್ಯದ 22ನೇ ಮುಖ್ಯ ಮಂತ್ರಿಯಾಗಿ ಸಿದ್ದರಾಮಯ್ಯ ಅಧಿಕಾರ ಸ್ವೀಕರಿಸಿ, ಪ್ರಮಾಣ ವಚನ ಸ್ವೀಕಾರ ಮಾಡಿದ ಹಿನ್ನೆಲೆಯಲ್ಲಿ ಉಪ್ಪಿನಂಗಡಿ, ಆತೂರು, ಕೈಲ ಮೊದಲಾದ ಕಡೆಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬೈಕ್ ರ್ಯಾಲಿ ನಡೆಸಿ, ಪಟಾಕಿ ಸಿಡಿಸಿ, ಸಿಹಿ ತಿಂಡಿ ಹಂಚಿ ವಿಜಯೋತ್ಸವ ಆಚರಿಸಿದರು.
ಸುಳ್ಯ ವರದಿ: ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅಧಿಕಾರ ಸ್ವೀಕರಿಸಿದ ಹಿನ್ನಲೆಯಲ್ಲಿ ಬೆಳ್ಳಾರೆಯ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ಬೆಳ್ಳಾರೆ ಬಸಸ್ನಿಲ್ದಾಣದ ಬಳಿ ಸೇರಿದ ಕಾರ್ಯಕರ್ತರು ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು.
ಜಿ.ಪಂ. ಮಾಜಿ ಸದಸ್ಯ ಚಂದ್ರಶೇಖರ ಕಾಮತ್, ತಾ.ಪಂ. ಸದಸ್ಯ ಅನಿಲ್ ರೈ, ಎಂ. ಮಾಧವ ಗೌಡ, ಗ್ರಾ.ಪಂ. ಅಧ್ಯಕ್ಷ ವಿಠಲದಾಸ್, ರಾಜೀವಿ ರೈ, ಸುನೀಲಲ್ರೈ ಪುಡ್ಕಜೆ, ಆನಂದ ಬೆಳ್ಳಾರೆ, ಅಂದುಂಞ ಬೆಳ್ಳಾರೆ, ಸಚಿನ್ರಾಜೆ ಶೆಟ್ಟಿ, ಆದಂ ಕುಂಞ, ಕಂದಸ್ವಾಮಿ, ವಾರಿಜ, ಹಸನ್, ವೆಂಕಪ್ಪ ಗೌಡ, ಸದಾನಂದ ರೈ, ಮಜೀದ್, ಪುರಂದರ ಕುಲಾಲ್, ಬೀಬಿ ಪೆರುವಾಜೆ, ದಿವಾಕರ ರೈ, ರಾಮದಾಸ್ ರೈ, ಇಲ್ಯಾಸ್ ಪಾಜಪಳ್ಳ ಮುಂತಾದವರು ಉಪಸ್ಥಿತರಿದ್ದರು.