ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಸುಬ್ರಹ್ಮಣ್ಯದಲ್ಲಿ 'ಚಿಣ್ಣರ ಚಿಲಿಪಿಲಿ' ಮಕ್ಕಳ ಬೇಸಿಗೆ ಶಿಬಿರ ಉದ್ಘಾಟನೆ

Srinivasa Murthy VN
Updated On : 14 May 2013, 1:16 am

ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಕುಕ್ಕೆಶ್ರೀ ಜೇಸಿಸ್ನ ಜೇಸಿರೆಟ್ ವಿಭಾಗ ಮತ್ತು ಅನುಗ್ರಹ ಎಜುಕೇಶನ್ ಟ್ರಸ್ಟ್ ಮತ್ತು ಕುಮಾರಸ್ವಾಮಿ ವಿದ್ಯಾಲಯ ಜಂಟಿ ಆಶ್ರಯದಲ್ಲಿ ಇತ್ತೀಚೆಗೆ ಮಕ್ಕಳ ಹಬ್ಬ ಬೇಸಿಗೆ ಶಿಬಿರ 'ಚಿಣ್ಣರ ಚಿಲಿಪಿಲಿ' ನಡೆಯಿತು. ಶಿಬಿರವನ್ನು ನಿವೃತ್ತ ಅಧ್ಯಾಪಕ ಗೋಪಾಲರಾವ್ ಬಿಳಿನೆಲೆ ಉದ್ಘಾಟಿಸಿದರು.
ಈ ಶಿಬಿರದಲ್ಲಿ ಕ್ರಾಫ್ಟ್ ತಯಾರಿಕೆ, ಕ್ಲೇ- ಮಾದರಿ, ಮುಖವಾಡ, ಗಾಳಿಪಟ ತಯಾರಿಕೆಯನ್ನು ಮಕ್ಕಳಿಗೆ ಶ್ರೀಹರಿ ಪೈಂದೋಡಿ ಹೇಳಿಕೊಟ್ಟರು. ಇವುಗಳಲ್ಲದೆ ಭಾಷಣ,ಮೂಕಾಭಿನಯ, ನೃತ್ಯ, ಹೋಳಿ ಆಟ, ಮದರಂಗಿ, ನಾಟಕ,ಕವನ ರಚನೆ, ಗಾಯನ ರಂಗ ಗೀತೆ ಹಾಗೂ ಚಿತ್ರಕಲೆ ಇವುಗಳ ಜೊತೆಗೆ ವ್ಯಕ್ತಿತ್ವ ವಿಕಸನ ತರಬೇತಿಗಳು ನಡೆಯುತ್ತಿವೆ. ಶಾಲೆಯ  ವಿದ್ಯಾರ್ಥಿಗಳಲ್ಲದೆ ಸುತ್ತಮುತ್ತಲಿನ ಶಾಲೆಗಳಿಂದ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿರುತ್ತಾರೆ. ಶಿಬಿರದಲ್ಲಿ ನೀತಿ ಪಾಠ ಮತ್ತು ಆಧ್ಯಾತ್ಮದ ಬಗ್ಗೆ ಗೋಪಾಲ ರಾವ್, ಸಭಾಕಂಪನ ನಿವಾರಣೆ ಬಗ್ಗೆ ಚಿತ್ರಕಲೆ ಮತ್ತು ಪೈಂಟಿಂಗ್ ಕುರಿತು ಯೋಗನಾಥ್, ಮುಖವಾಡ ಮತ್ತು ಕ್ರಾಫ್ಟ್ ತಯಾರಿಕೆ ಬಗ್ಗೆ ಶಿಕ್ಷಕ ಶ್ರೀಹರಿ ಪೈಂದೋಡಿ, ಆಧ್ಯಾತ್ಮದ ಕುರಿತಾಗಿ ದುಗ್ಗಪ್ಪ ಅಗ್ರಹಾರ ಮಾಹಿತಿ ನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಜೇಸಿರೆಟ್ ವಿಭಾಗದ ಅಧ್ಯಕ್ಷೆ ಮಹಾಲಕ್ಷ್ಮಿ ಪ್ರಸಾದ್ ವಹಿಸಿದ್ದರು. ವಾಣಿ ವನಿತಾ ಸಮಾಜದ ಪೂರ್ವಾಧ್ಯಕ್ಷೆ ಸಂಧ್ಯಾ ಶ್ರೀನಿವಾಸ್, ಅಧ್ಯಾಪಕ ಯೋಗನಾಥ್, ಜೇಸಿಸ್ ವಲಯ ಹದಿನೈದರ ಕಾರ್ಯಕ್ರಮ ವಿಭಾಗದ ನಿರ್ದೇಶಕ ಚಂದ್ರಶೇಖರ ನಾಯರ್, ಜೇಸಿಸ್ ಅಧ್ಯಕ್ಷ ಚಂದ್ರಶೇಖರ ಚೆನ್ನಕಜೆ, ಪೂರ್ವಾಧ್ಯಕ್ಷೆ ವಿಮಲಾ ರಂಗಯ್ಯ, ರೇಶ್ಮಾ ಪ್ರಕಾಶ್, ಕಾರ್ಯದರ್ಶಿ ಸುದೀಪ್ ಕುಮಾರ್ ಬೋಳಾರ್, ಅಭಿಯಂತರ ಪ್ರಸಾದ್, ಕಾರ್ಯಕ್ರಮ ನಿರ್ದೇಶಕ ದೀಪಕ್ ನಂಬಿಯಾರ್ ಮೊದಲಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement